ರಾಜ್ಯದ ಭೀಕರ ಬರಗಾಲವನ್ನು ʼರಾಷ್ಟ್ರೀಯ ವಿಪತ್ತುʼ ಎಂದು ಘೋಷಣೆ ಮಾಡಿ, ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಒತ್ತಾಯಿಸಿದೆ.
ರಾಯಚೂರು ತಾಲೂಕಿನ ಚಂದ್ರ ಬಂಡಾ ಮತ್ತು ಯರಗೇರಾ ಹೋಬಳಿ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು, ಪಿಡಿಒ ಮತ್ತು ತಹಶೀಲ್ದಾರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದಾರೆ.
“ರಾಜ್ಯವನ್ನು ಆವರಿಸಿಕೊಂಡಿರುವ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಿ ಅಗತ್ಯ ಇರುವ ಹಣಕಾಸು ನೆರವುನ್ನು ಬಿಜೆಪಿಯ ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ಬರಗಾಲದ ಪರಿಹಾರವಾಗಿ ರೈತ ಕುಟುಂಬಕ್ಕೆ ನೀಡುತ್ತಿರುವ ₹2,000ವನ್ನು ಕನಿಷ್ಟ ₹5,000ಕ್ಕೆ ಏರಿಸಬೇಕು. ಬೆಳೆ ನಷ್ಟ ಪರಿಹಾರಕ್ಕೆ ಕೇಂದ್ರ ಸರ್ಕಾರ ಅನಿಸುತ್ತಿರುವ ಅವೈಜ್ಞಾನಿಕ ಪದ್ಧತಿಯನ್ನು ಕೈ ಬಿಟ್ಟು ಪ್ರತಿ ಎಕರೆಗೆ ಕನಿಷ್ಟ ₹25,000 ಬೆಳೆನಷ್ಟ ಪರಿಹಾರ ನೀಡಬೇಕು” ಎಂದು ಮನವಿ ಮಾಡಿದರು.
ಬಗರ್ ಹುಕ್ಕುಂ ಸಾಗುವಳಿದಾರರು ಫಾರಂ ನಂಬರ್, 50, 53, 57ರ ಅರ್ಜಿಗಳನ್ನು ಸಲ್ಲಿಸಿದ್ದು, ಎಲ್ಲ ಅರ್ಜಿಗಳನ್ನು ಕೂಡಲೇ ಪರೀಲಿಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಪಟ್ಟಾ ಕೊಡಬೇಕು. ಯರಗೇರಾ ಹೋಬಳಿ ವ್ಯಾಪ್ತಿಯ ನಿರಂತರ ಜ್ಯೋತಿ, ವಿದ್ಯುತ್ ಜ್ಯೋತಿ ಸರಬರಾಜು ಸಮಸ್ಯೆಯನ್ನು ಪರಿಹರಿಸಲು ಎಲ್‌ಸಿ ಪದ್ಧತಿಯನ್ನು ಕೈ ಬಿಟ್ಟು ನೇರ ವಿದ್ಯುತ್ ಸರಬರಾಜು ಮಾಡಬೇಕು. ಭೀಕರ ಬರಗಾಲ ಮತ್ತು ಬೇಸಿಗೆ ಹಿನ್ನೆಲೆಯಲ್ಲಿ ದನ-ಕರುಗಳಿಗೆ ಮೇವು ಮತ್ತು ಮೇವುವಿನ ಕೇಂದ್ರವನ್ನು ಹೋಬಳಿಗೆ ಒದಂರತೆ ಉಚಿತವಾಗಿ ಕೂಡಲೇ ತೆಗೆಯಬೇಕು” ಎಂದು ಒತ್ತಾಯಿಸಿದರು.
“ಕಳೆದ ನಾಲ್ಕೈದು ತಿಂಗಳಿಂದ ತಾಲೂಕಿನ ವೃದ್ಧಾಪ್ಯ ವೇತನ ಬಿಡುಗಡೆ ಆಗಿಲ್ಲ. ಇದರಿಂದ ವಯೋವೃದ್ಧರಾಗಿ ತುಂಬಾ ತೊಂದರೆಯಾಗಿದ್ದು, ಕೂಡಲೇ ಬಿಡುಗಡೆ ಮಾಡಬೇಕು. ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳ ಸ್ಮಶಾನ ಕಾರ್ಮಿಕರ ಸರ್ವೆ ನಡೆಸಿ ಅವರನ್ನು ಪಂಚಾಯತಿ ನೌಕರರೆಂದು ಪರಿಗಣಿಸಬೇಕು” ಎಂದು ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | 15 ಹೊಸ ಬಸ್‌ಗಳಿಗೆ ಚಾಲನೆ; ಬಸ್ ಚಲಾಯಿಸಿದ ಕೆಎಸ್‌ಆರ್‌ಟಿಸಿ ಅಧ್ಯಕ್ಷ
ಈ ಸಂದರ್ಭದಲ್ಲಿ ಕೆ ಜಿ ವಿರೇಶ್, ರಂಗಪ್ಪ ಯಾಪಲದಿನ್ನಿ, ಚಂದ್ರಪ್ಪ, ದೇವೇಂದ್ರ ವಡ್ಡೆಪಲ್ಲಿ, ವೆಂಕಟೇಶ, ಮಹಾದೇವಪ್ಪ, ದುರ್ಗಪ್ಪ, ಲಕ್ಷ್ಮಣ್ ಆತ್ಕೂರು, ಯರಗೇರಾ ಹೋಬಳಿಯ ಡಿ ಎಸ್ ಶರಣಬಸವ, ಈ ರಂಗನಗೌಡ, ಅಶೋಕ ಮರ್ಜಲಾ, ಶಿವಪ್ಪ ಗೋಡಿಹಾಳ, ನರಸಿಂಹ ಪುಚ್ಚಲದಿನ್ನಿ, ಲಕ್ಷಣ, ನಲ್ಲಾರೆಡ್ಡಿ ಯರಗೇರಾ, ಅಂಜಿಯ್ಯ ಜಂಬಲದಿನ್ನಿ ಸೇರಿದಂತೆ ಬಹುತೇಕರು ಇದ್ದರು.
ವರದಿ : ಹಫೀಜುಲ್ಲ