ರಾಯಚೂರು | ಭೀಕರ ಬರಗಾಲ; ʼರಾಷ್ಟ್ರೀಯ ವಿಪತ್ತುʼ ಘೋಷಣೆಗೆ ಆಗ್ರಹ

Date:

ರಾಜ್ಯದ ಭೀಕರ ಬರಗಾಲವನ್ನು ʼರಾಷ್ಟ್ರೀಯ ವಿಪತ್ತುʼ ಎಂದು ಘೋಷಣೆ ಮಾಡಿ, ಅಗತ್ಯ ಹಣಕಾಸಿನ ನೆರವು ನೀಡಬೇಕು ಎಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಒತ್ತಾಯಿಸಿದೆ.

ರಾಯಚೂರು ತಾಲೂಕಿನ ಚಂದ್ರ ಬಂಡಾ ಮತ್ತು ಯರಗೇರಾ ಹೋಬಳಿ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ ಪಕ್ಷದ ಕಾರ್ಯಕರ್ತರು, ಪಿಡಿಒ ಮತ್ತು ತಹಶೀಲ್ದಾರ್ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದಾರೆ.

“ರಾಜ್ಯವನ್ನು ಆವರಿಸಿಕೊಂಡಿರುವ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತೆಂದು ಘೋಷಿಸಿ ಅಗತ್ಯ ಇರುವ ಹಣಕಾಸು ನೆರವುನ್ನು ಬಿಜೆಪಿಯ ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ಬರಗಾಲದ ಪರಿಹಾರವಾಗಿ ರೈತ ಕುಟುಂಬಕ್ಕೆ ನೀಡುತ್ತಿರುವ ₹2,000ವನ್ನು ಕನಿಷ್ಟ ₹5,000ಕ್ಕೆ ಏರಿಸಬೇಕು. ಬೆಳೆ ನಷ್ಟ ಪರಿಹಾರಕ್ಕೆ ಕೇಂದ್ರ ಸರ್ಕಾರ ಅನಿಸುತ್ತಿರುವ ಅವೈಜ್ಞಾನಿಕ ಪದ್ಧತಿಯನ್ನು ಕೈ ಬಿಟ್ಟು ಪ್ರತಿ ಎಕರೆಗೆ ಕನಿಷ್ಟ ₹25,000 ಬೆಳೆನಷ್ಟ ಪರಿಹಾರ ನೀಡಬೇಕು” ಎಂದು ಮನವಿ ಮಾಡಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬಗರ್ ಹುಕ್ಕುಂ ಸಾಗುವಳಿದಾರರು ಫಾರಂ ನಂಬರ್, 50, 53, 57ರ ಅರ್ಜಿಗಳನ್ನು ಸಲ್ಲಿಸಿದ್ದು, ಎಲ್ಲ ಅರ್ಜಿಗಳನ್ನು ಕೂಡಲೇ ಪರೀಲಿಲನೆ ಮಾಡಿ ಅರ್ಹ ಫಲಾನುಭವಿಗಳಿಗೆ ಪಟ್ಟಾ ಕೊಡಬೇಕು. ಯರಗೇರಾ ಹೋಬಳಿ ವ್ಯಾಪ್ತಿಯ ನಿರಂತರ ಜ್ಯೋತಿ, ವಿದ್ಯುತ್ ಜ್ಯೋತಿ ಸರಬರಾಜು ಸಮಸ್ಯೆಯನ್ನು ಪರಿಹರಿಸಲು ಎಲ್‌ಸಿ ಪದ್ಧತಿಯನ್ನು ಕೈ ಬಿಟ್ಟು ನೇರ ವಿದ್ಯುತ್ ಸರಬರಾಜು ಮಾಡಬೇಕು. ಭೀಕರ ಬರಗಾಲ ಮತ್ತು ಬೇಸಿಗೆ ಹಿನ್ನೆಲೆಯಲ್ಲಿ ದನ-ಕರುಗಳಿಗೆ ಮೇವು ಮತ್ತು ಮೇವುವಿನ ಕೇಂದ್ರವನ್ನು ಹೋಬಳಿಗೆ ಒದಂರತೆ ಉಚಿತವಾಗಿ ಕೂಡಲೇ ತೆಗೆಯಬೇಕು” ಎಂದು ಒತ್ತಾಯಿಸಿದರು.

“ಕಳೆದ ನಾಲ್ಕೈದು ತಿಂಗಳಿಂದ ತಾಲೂಕಿನ ವೃದ್ಧಾಪ್ಯ ವೇತನ ಬಿಡುಗಡೆ ಆಗಿಲ್ಲ. ಇದರಿಂದ ವಯೋವೃದ್ಧರಾಗಿ ತುಂಬಾ ತೊಂದರೆಯಾಗಿದ್ದು, ಕೂಡಲೇ ಬಿಡುಗಡೆ ಮಾಡಬೇಕು. ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳ ಸ್ಮಶಾನ ಕಾರ್ಮಿಕರ ಸರ್ವೆ ನಡೆಸಿ ಅವರನ್ನು ಪಂಚಾಯತಿ ನೌಕರರೆಂದು ಪರಿಗಣಿಸಬೇಕು” ಎಂದು ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ತುಮಕೂರು | 15 ಹೊಸ ಬಸ್‌ಗಳಿಗೆ ಚಾಲನೆ; ಬಸ್ ಚಲಾಯಿಸಿದ ಕೆಎಸ್‌ಆರ್‌ಟಿಸಿ ಅಧ್ಯಕ್ಷ

ಈ ಸಂದರ್ಭದಲ್ಲಿ ಕೆ ಜಿ ವಿರೇಶ್‌, ರಂಗಪ್ಪ ಯಾಪಲದಿನ್ನಿ, ಚಂದ್ರಪ್ಪ, ದೇವೇಂದ್ರ ವಡ್ಡೆಪಲ್ಲಿ, ವೆಂಕಟೇಶ, ಮಹಾದೇವಪ್ಪ, ದುರ್ಗಪ್ಪ, ಲಕ್ಷ್ಮಣ್ ಆತ್ಕೂರು, ಯರಗೇರಾ ಹೋಬಳಿಯ ಡಿ ಎಸ್ ಶರಣಬಸವ, ಈ ರಂಗನಗೌಡ, ಅಶೋಕ ಮರ್ಜಲಾ, ಶಿವಪ್ಪ ಗೋಡಿಹಾಳ, ನರಸಿಂಹ ಪುಚ್ಚಲದಿನ್ನಿ, ಲಕ್ಷಣ, ನಲ್ಲಾರೆಡ್ಡಿ ಯರಗೇರಾ, ಅಂಜಿಯ್ಯ ಜಂಬಲದಿನ್ನಿ ಸೇರಿದಂತೆ ಬಹುತೇಕರು ಇದ್ದರು.

ವರದಿ : ಹಫೀಜುಲ್ಲ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ದಲಿತರ ಸ್ಮಶಾನ ಭೂಮಿ ವ್ಯಾಪ್ತಿಯ ಅಳತೆ ಕಲ್ಲು ಕಿತ್ತೊಗೆದ ಕಿಡಿಗೇಡಿಗಳು

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಡೇನಹಳ್ಳಿ ಗ್ರಾಮಕ್ಕೆ ಸೇರಿದ ಗೋಮಾಳ ಜಮೀನಿನಲ್ಲಿ...

ನಾನು ರಾಜ್ಯಕ್ಕೆ ಭೇಟಿ ನೀಡುವುದು ಡಿ ಕೆ ಶಿವಕುಮಾರ್‌ಗೆ ಸಹಿಸಲು ಆಗುತ್ತಿಲ್ಲ: ಎಚ್‌ ಡಿ ಕುಮಾರಸ್ವಾಮಿ

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಹೇಳಿಕೆಗಳಲ್ಲಿ ತಾಳಮೇಳವಿಲ್ಲ, ಸ್ಥಿರತೆ ಇಲ್ಲ. ಅವರೊಬ್ಬ...

ಧಾರವಾಡ | ರಾಜ್ಯದ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಬಿಜೆಪಿ ಹೋರಾಟ‌ ಮಾಡಲಿ: ಶಾಸಕ ಕೋನರೆಡ್ಡಿ

ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಸಮಸ್ಯೆಗಳ ಕಡೆಗೆ ಗಮನಹರಿಸದೆ ಬಿಜೆಪಿಯವರು ಒಂದು...

ಯಾದಗಿರಿ | ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ ನಿಧನ

ಯಾದಗಿರಿ ಜಿಲ್ಲೆಯ ಮಾಜಿ ಶಾಸಕ ಹಾಗೂ ವೈದ್ಯ ಡಾ. ವೀರಬಸವಂತರೆಡ್ಡಿ ಮುದ್ನಾಳ...