ನಾಳೆ ರಾಯಚೂರು ತಾಲೂಕಿನ ಶಕ್ತಿನಗರದ ಬಳಿಯಲ್ಲಿ ನಡೆಯಬೇಕಿದ್ದ ಮಾಕ್ ಡ್ರಿಲ್ ( ಅಣಕು ನಾಗರಿಕರ ರಕ್ಷಣಾ ಕಾರ್ಯಚರಣೆ) ಅನಿವಾರ್ಯ ಕಾರಣಗಳಿಂದ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ರಾಯಚೂರಿನ ಶಕ್ತಿನಗರದಲ್ಲಿ ವಿದ್ಯುತ್ ಶಾಖೋತ್ಪನ್ನ ಕೇಂದ್ರ ಹಾಗೂ ಯರಮರಸ್ ನಲ್ಲಿ ವಿದ್ಯುತ್ ಕ್ರಿಟಿಕಲ್ ಕೇಂದ್ರ ಹಾಗೂ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಇರುವ ಕಾರಣ ಮಾಕ್ ಡ್ರಿಲ್ ಮಾಡಲು ಆದೇಶ ಮಾಡಲಾಗಿತ್ತು.ಆದರೆ ಸರ್ಕಾರದ ಆದೇಶದಂತೆ ಮಾಕ್ ಡ್ರಿಲ್ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ನಿತಿಶ್ ಕೆ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಅನುಮಾನಾಸ್ಪದ ವ್ಯಕ್ತಿ ಸಾವು
ನಾಳೆ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಿ.ಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂವಿಧಾನ ಸಂರಕ್ಷಣಾ ಸಮಾವೇಶ ಕಾರ್ಯಕ್ರಮ ಆಯೋಜಿಸಲಾಗಿದೆ.
