ಸರ್ಕಾರಿ ನೌಕರರ ಸಂಘದ ರಾಯಚೂರು ಜಿಲ್ಲಾಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್‌ನ ಚುನಾವಣೆಗೆ ಸಂಬಂಧಿಸಿದಂತೆ ಶುಕ್ರವಾರ ಅಂತಿಮ ಕಣದಲ್ಲಿರುವವರ ಅಭ್ಯರ್ಥಿಗಳನ್ನು ಪ್ರಕಟಿಸಿದೇ ರಾಯಚೂರು ಚುನಾವಣಾಧಿಕಾರಿಯಾಗಿದ್ದ ಭೀಮಪ್ಪ ನಾಯಕ ಅವರು ಪರಾರಿಯಾಗಿದ್ದಾರೆ ಎಂದು ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿ ಮಹಾಂತೇಶ ಬಿರಾದಾರ ಆರೋಪಿಸಿದ್ದಾರೆ.
“ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜ್ಯ ಪರಿಷತ್ ಮತ್ತು ಖಜಾಂಚಿ ಹುದ್ದೆಗೆ ಒಟ್ಟು ಕ್ರಮವಾಗಿ ಅಧ್ಯಕ್ಷ ಹುದ್ದೆಗೆ ಆರು ಜನ ಮತ್ತು ರಾಜ್ಯ ಪರಿಷತ್ ಹಾಗೂ ಖಜಾಂಚಿ ಹುದ್ದೆಗೆ ಮೂರು ಮೂರು ಜನ ನಾಮಪತ್ರ ಸಲ್ಲಿಸಿದ್ದರು. ಶುಕ್ರವಾರ ಭೀಮರಾಜ ಹವಾಲ್ದಾರ್, ಸುರೇಶ ಕುರ್ಡಿ, ರಾಘವೇಂದ್ರ ಎಂಬ ಮೂರು ಮಂದಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮ ಕಣದಲ್ಲಿ ಮಹಾಂತೇಶ್ ಬಿರಾದಾರ್ ಕೃಷ್ಣ ಮತ್ತು ಆಂಜನೇಯ ಕಾವಲಿ ಅಭ್ಯರ್ಥಿಗಳಾಗಿ ಅಧ್ಯಕ್ಷ ಹುದ್ದೆಗೆ ಉಳಿದಿದ್ದು, ಉಳಿದ ಹುದ್ದೆಗೆ ಸ್ಪರ್ಧಿಸಿದ ಅಭ್ಯರ್ಥಿಗಳು ಯಥಾವತ್ತಾಗಿ ಮೂರು ಮಂದಿ ಕಣದಲ್ಲಿದ್ದಾರೆ. ಆದರೆ, ಕಣದಲ್ಲಿರುವ ಅಂತಿಮ ಪಟ್ಟಿ ಪ್ರಕಟಿಸದೇ ಚುನಾವಣೆ ಅಧಿಕಾರಿ ಭೀಮಪ್ಪ ನಾಯಕ ಅವರು ಅಭ್ಯರ್ಥಿ ಕೃಷ್ಣ ಅವರ ಪರ ಲಾಬಿ ಮಾಡುತ್ತಿದ್ದಾರೆ” ಎಂದು ದೂರಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಸಾಹಿತ್ಯ ಪರಿಷತ್‌ನ ಕನ್ನಡ ಭವನಕ್ಕೆ ನಿವೇಶನ ನೀಡುವಂತೆ ಮನವಿ
“ಚುನಾವಣಾಧಿಕಾರಿಯಾಗಿದ್ದ ಭೀಮಪ್ಪ ನಾಯಕ ಅವರು ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೇ ಪರಾರಿಯಾಗಿರುವ ಬಗ್ಗೆಯೂ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ” ಎಂದು ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.
