ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 12 ಎಕರೆಯ ಹತ್ತಿ ಸುಟ್ಟು ಕರಕಲಾದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ತಾಂಡಾದಲ್ಲಿ ನಡೆದಿದೆ.
ರೈತ ಪರಶುರಾಮ ಬೆಳೆದ 12 ಎಕರೆಯ ಹತ್ತಿ ಸರಿ ಸುಮಾರು 10 ಲಕ್ಷ ರುಪಾಯಿ ಬೆಲೆ ಬಾಳುತ್ತಿತ್ತು ಎನ್ನಲಾಗಿದೆ. ರೈತ ಪರಶುರಾಮ ಬೆಳೆದು ಮಾರಬೇಕು ಎಂಬ ಸಿದ್ಧತೆಯಲ್ಲಿರುವಾಗಲೇ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ, ಸುಟ್ಟು ಭಸ್ಮವಾಗಿದೆ.
ಹತ್ತಿ ಬೆಳೆಯಿಂದ ಒಂದಿಷ್ಟು ಮಾರಾಟ ಮಾಡಿ ಸಾಲ ತೀರಿಸಬೇಕು ಎಂದು ಇದ್ದ ರೈತ ಪರಶುರಾಮನಿಗೆ ಈ ಘಟನೆಯಿಂದ ಲಕ್ಷಾಮತರ ರೂ ನಷ್ಟ ಸಂಭವಿಸಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಒಟ್ಟು 20 ಲಕ್ಷ್ಯವರೆಗೂ ಪರಶುರಾಮ ಸಾಲ ಮಾಡಿಕೊಂಡಿದ್ದೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ರೈತ ತಿಳಿಸಿದ್ದಾನೆ.
ಇದನ್ನು ಓದಿದ್ದೀರಾ? ರಾಯಚೂರು | ದಶಕ ಕಳೆದರೂ ಈ ಹಳ್ಳಿಗೆ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ: ಸಂಜೆಯಾದರೆ ಬೆಂಕಿಯೇ ‘ಬೆಳಕು’!
ನಮ್ಮ ಕಷ್ಟವನ್ನು ಆಲಿಸಲು, ಜನಪ್ರತಿನಿಧಿಗಳು ತಾಲೂಕು ಆಡಳಿತ ಅಧಿಕಾರಿಗಳು ಭೇಟಿ ಕೊಟ್ಟಿಲ್ಲ ,ಚುನಾವಣೆ ಬಂದಾಗ ಮತ ಕೇಳೋಕೆ ಬರುತ್ತಾರೆ ಎಂದು ಆರೋಪಿಸಿದ್ದಾರೆ.
