ಹೋಟೆಲ್‌ನಲ್ಲಿ ಇಡ್ಲಿ ತಿನ್ನುವ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಯಚೂರು ನಗರದ ಡಾ.ಝಾಕೀರಹುಸೇನ ವೃತ್ತದಲ್ಲಿ ನಡೆದಿದೆ.
ಸಾದೀಕ್ (27) ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. ನಗರದ ಏಕ್ ಮಿನಾರ್ ರಸ್ತೆಯಲ್ಲಿರುವ ಜಾಕೀರ್ ಹುಸೇನ್ ವೃತ್ತದಲ್ಲಿ ಬೆಳೆಗಿನ ಜಾವ ಪ್ರತಿನಿತ್ಯ ಇಡ್ಲಿ ತಿನ್ನಲು ಬರುತ್ತಿದ್ದ ಸಾದೀಕ್, ಕರೀಂ ಹಾಗೂ ಸ್ನೇಹಿತರು ರವಿವಾರ ಬೆಳಿಗ್ಗೆ ಇಡ್ಲಿ ತಿನ್ನಿಸುವ ವಿಚಾರದಲ್ಲಿ ಜಗಳ ನಡೆದಿದೆ. ಸಾದೀಕ್ ಹಾಗೂ ಕರೀಂ ನಡುವೆ ವಾಗ್ವಾದ ನಡೆದು ಏಕಾಏಕಿ ಕರೀಂ ಸಾದಿಕ್ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಸಾದೀಕ್‌ನನ್ನು ರಿಮ್ಸ್ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ಹಳೆ ವೈಷಮ್ಯ ಹಿನ್ನೆಲೆ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ. ಇನ್ನಷ್ಟೇ ನಿಖರ ಮಾಹಿತಿ ತಿಳಿದು ಬರಬೇಕಿದೆ. ಬೆಳ್ಳಂಬೆಳಿಗ್ಗೆ ಭೀಕರ ಕೊಲೆ ಕಂಡ ಸಾರ್ವಜನಿಕರು ಭಯಭೀತಗೊಂಡಿದ್ದಾರೆ.
ಮೃತ ದೇಹವನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದರ ಬಜಾರ್ ಪಿಎಸ್‌ಐ ಉಮೇಶ ಕಾಂಬ್ಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ಳಂಬೆಳಿಗ್ಗೆ ಭೀಕರ ಕೊಲೆ ಕಂಡ ಸಾರ್ವಜನಿಕರು ಭಯಭೀತಗೊಂಡಿದ್ದಾರೆ.
ಇದನ್ನೂ ಓದಿ : ಇಸ್ರೋದ 101ನೇ ಉಪಗ್ರಹ ಉಡಾವಣೆ ಮಾಡಿದ ಕೆಲವೇ ಕ್ಷಣಗಳಲ್ಲಿ ವಿಫಲ
