ದಾವಣಗೆರೆ | ಭತ್ತ ಬೆಂಬಲ ಬೆಲೆಗೆ ಖರೀದಿಸುವಂತೆ ಆಗ್ರಹಿಸಿ ರೈತ ಸಂಘ ರಸ್ತೆ ತಡೆದು ಪ್ರತಿಭಟನೆ.

Date:

ಭತ್ತದ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ, ಬೆಂಬಲ ಬೆಲೆಗೆ ಖರೀದಿಸುವಂತೆ ಆದೇಶ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ದಾವಣಗೆರೆ ಜಿಲ್ಲೆ ಚಿಕ್ಕತೊಗಲೇರಿ ಬಳಿಯ ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ರಸ್ತೆ ತಡೆ ನಡೆಸಿ ಒತ್ತಾಯಿಸಿತು.

- Advertisement -
1002006848
ಜಿಲ್ಲೆಯ ಹಲವೆಡೆ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು

ಭತ್ತಕ್ಕೆ ಕನಿಷ್ಠ 3500 ರೂಪಾಯಿಗಳ ಬೆಂಬಲ ಬೆಲೆ ನೀಡಬೇಕು ಮತ್ತು ಹೆಚ್ಚುವರಿ 1000 ರೂ. ಬೋನಸ್ ನೀಡಬೇಕು. ಈ ಕೂಡಲೇ ಖರೀದಿದಾರರಿಗೆ 3500 ಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿಗೆ ಆದೇಶ ನೀಡಲು ಈ ಕೂಡಲೇ ಕೃಷಿ ಸಚಿವರು ಅಥವಾ ಮುಖ್ಯಮಂತ್ರಿಗಳು ಸಭೆ ನಡೆಸಿ ಆದೇಶಿಸಬೇಕು ಎಂದು ಒತ್ತಾಯಿಸಿ ದಾವಣಗೆರೆಯ ಚಿಕ್ಕತೊಗಲೇರಿ, ಜಗಳೂರು ತಾಲೂಕು ಸೇರಿದಂತೆ ಹಲವೆಡೆ ಮುಖಂಡ ಹುಚ್ಚವನಹಳ್ಳಿ ಮಂಜುನಾಥ್ ನೇತೃತ್ವದ ಕರ್ನಾಟಕ ರಾಜ್ಯ ರೈತ ಸಂಘ ರಸ್ತೆ ತಡೆ ನಡೆಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಸರ್ಕಾರ ಗೆದ್ದದ್ದೇ ಅಥವಾ ಕದ್ದದ್ದೇ? ಸಿಇಸಿ ವಿವಾದ...

2024ರ ಲೋಕಸಭಾ ಚುನಾವಣೆಯ ಮತದಾನ ಅಂಕಿಅಂಶಗಳಲ್ಲಿ ಕಂಡುಬಂದ 4.65 ಕೋಟಿ ಮತಗಳ ವ್ಯತ್ಯಾಸ ಮತ್ತು 79 ಕ್ಷೇತ್ರಗಳ ಫಲಿತಾಂಶಗಳ ಕುರಿತು VFD ವರದಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಇದೇ ವೇಳೆ ಚುನಾವಣಾ ಆಯೋಗದ...

ಮೈತ್ರಿ ಮತ್ತು ಸ್ವೀಕೃತಿಗೆ ಹೆಣ್ತನ ಮುಖ್ಯ ಎನ್ನುವ ‘ಡೋರೊಥಿ’

ಲಿಂಗತ್ವ ಅಲ್ಪಸಂಖ್ಯಾತ ಭಾವನೆಗಳನ್ನು 'ಅಸ್ಪೃಶ್ಯತೆ'ಗೆ ಸಮನಾಗಿ ಈ ಗಂಡಾಳ್ವಿಕೆ ನೋಡುತ್ತದೆ; 'ಲಿಂಗ ಸಂಕರ' ಸ್ಥಿತಿಯನ್ನು, ಜಾತಿ ಸಂಕರದಷ್ಟೇ 'ಮರ್ಯಾದಾಗೇಡು' ಎಂಬಂತೆ ಭಾವಿಸುತ್ತದೆ. ಹೀಗೆ ನೋಡುವ 'ಸನಾತನ' (ಜಡ್ಡುಗಟ್ಟಿದ ಗಂಡು ಮನಸ್ಥಿತಿ ಅಥವಾ ಮುದಿಯಾದ...

ಐತಿಹಾಸಿಕ ರೈತ ಹೋರಾಟಕ್ಕೆ ಸಾಕ್ಷಿಯಾದ ಹುಬ್ಬಳ್ಳಿ! ಆಕ್ರೋಶದ ನಡುವೆಯೂ...

ಡಾ. ಸ್ವಾಮಿನಾಥನ್ ಆಯೋಗ ವರದಿ ಜಾರಿಗೊಳಿಸುವ ಮೂಲಕ ಪ್ರತಿ ಟನ್ ಕಬ್ಬಿಗೆ ಕನಿಷ್ಠ ರೂ.5,500 ಬೆಂಬಲ ಬೆಲೆ ನಿಗದಿಪಡಿಸಲು ಮತ್ತು ಸಕ್ಕರೆಯ ಕನಿಷ್ಠ ಬೆಂಬಲ ಬೆಲೆಯನ್ನು ರೂ.31ರಿಂದ 60ಕ್ಕೆ ಏರಿಕೆ ಮಾಡಿ ವಾಣಿಜ್ಯ...
1002006849 1

ಈ ವೇಳೆ ಮಾತನಾಡಿದ ಮುಖಂಡ ಹುಚ್ಚವನಹಳ್ಳಿ ಮಂಜುನಾಥ್, “ಭತ್ತದ ಬೆಲೆ ಕುಸಿತದಿಂದ ರೈತರು ಆತಂಕಗೊಂಡಿದ್ದಾರೆ.‌ ಈಗ ಸಿಗುತ್ತಿರುವ ಬೆಲೆಯಿಂದಾಗಿ ಭತ್ತದ ಖರ್ಚು ವೆಚ್ಚಗಳಿಗೆ ಅದು ಸಾಕಾಗುತ್ತಿಲ್ಲ. ರೈತರು ನಷ್ಟದ ಬೆಲೆಗೆ ಭತ್ತ ಮಾರಾಟ ಮಾಡುವಂತಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳಿಗೆ 3500 ಗಳಿಗೆ ಭತ್ತ ಖರೀದಿ ಮಾಡಲು ಆದೇಶ ನೀಡಲು ಕೃಷಿ ಸಚಿವರ ಅಥವಾ ಮುಖ್ಯಮಂತ್ರಿಗಳ ಸಭೆ ಕರೆಯಬೇಕೆಂದು ಮನವಿ ನೀಡಿದ್ದು ಅದಕ್ಕೆ ಸ್ಪಂದಿಸಿಲ್ಲ. ಸರ್ಕಾರಕ್ಕೆ ರೈತರ ಹಿತಾಸಕ್ತಿ ಬಗ್ಗೆ ಕಾಳಜಿಯೇ ಇಲ್ಲ. ಕಾರಣ ರೈತರು ರಸ್ತೆ ತಡೆ ನಡೆಸುತ್ತಿದ್ದು ಈ ಕೂಡಲೇ ಭತ್ತದ ಖರೀದಿಗೆ 3500 ಬೆಂಬಲ ಬೆಲೆಗೆ ತೆಗೆದುಕೊಳ್ಳಲು ಆದೇಶಿಸಬೇಕು ಮತ್ತು ಹೆಚ್ಚುವರಿ ಬೋನಸ್ ನೀಡಬೇಕು” ಎಂದು ಒತ್ತಾಯಿಸಿದರು.‌

1002006852

“ಜಿಲ್ಲಾಡಳಿತ ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಜಿಲ್ಲಾದ್ಯಂತ ಎಲ್ಲ ರೈತರು ತಮ್ಮ ಗ್ರಾಮಗಳಲ್ಲಿಯೇ ರಸ್ತೆತಡೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಕರೆ ನೀಡಲಾಗಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಾಲಬಾಧೆ, ಬೆಳೆ ಕೈಕೊಟ್ಟದ್ದರಿಂದ ವಿಷ ಸೇವಿಸಿ ರೈತ ಆತ್ಮಹತ್ಯೆ.‌

ಈ ವೇಳೆ ರೈತಸಂಘದ ಮುಖಂಡರಾದ ಎಲೋದಹಳ್ಳಿ ರವಿಕುಮಾರ್, ಆನಗೋಡು ಭೀಮಣ್ಣ, ಗಂಡುಗಲಿ, ಹರಿಹರದ ಗರಡಿ ಮನೆ ಬಸವರಾಜ್, ಯರವನಾಗತಿಹಳ್ಳಿ ರುದ್ರಪ್ಪ, ಹೂವಿನ ಮಡು ನಾಗರಾಜ್, ಚನ್ನಸಮುದ್ರ ಭೀಮಣ್ಣ, ಮರಡಿ ಸತೀಶ್ ಹಾಗೂ ಇತರ ಮುಖಂಡರು, ರೈತರು ಭಾಗವಹಿಸಿದ್ದರು.

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೂರು ವಾರಗಳಿಂದ ರಾಜ್ಯದ 122 ತಾಲೂಕುಗಳಾದ್ಯಂತ ಮಳೆ ಕೊರತೆ: ಶೇ.50ರಷ್ಟು ಬೆಳೆಹಾನಿ ಸಾಧ್ಯತೆ

ಸೆಪ್ಟೆಂಬರ್‌ನಲ್ಲಿ ಮಳೆಯಾಗುವ ಯಾವುದೇ ಲಕ್ಷಣಗಳು ಕಾಣದಿರುವುದರಿಂದ ಮುಂಬರುವ ವಾರಗಳಲ್ಲಿ ರಾಜ್ಯಾದ್ಯಂತ ಮಳೆ...

ಬರಪೀಡಿತ ತಾಲೂಕು ಘೋಷಣೆ: ಸರ್ಕಾರದ ಮಾನದಂಡಗಳು ಎಷ್ಟು ಸಮರ್ಪಕ?

ಕಳೆದ ಒಂದೆರಡು ತಿಂಗಳಿನ ಅವಧಿಯಲ್ಲಿ ಹಾವೇರಿ ಮತ್ತು ರಟ್ಟಿಹಳ್ಳಿ ತಾಲೂಕುಗಳಲ್ಲಿ  ಇಬ್ಬರು...

ಮುಂಗಾರು ಬಿತ್ತನೆ ಅವಧಿ ಅಂತ್ಯ: ರಾಜ್ಯದಲ್ಲಿ ಶೇ.80ರಷ್ಟು ಬಿತ್ತನೆ, ಇಳುವರಿ ಕುಂಠಿತವಾಗುವ ಸಾಧ್ಯತೆ

ದೇಶಾದ್ಯಂತ ಆಗಸ್ಟ್‌ನಲ್ಲಿ ಸಾಮಾನ್ಯಕ್ಕಿಂತ 16 ಪ್ರತಿಶತ ಮಳೆ ಕಡಿಮೆಯಾಗಿದ್ದು, ಜೂನ್-ಆಗಸ್ಟ್‌ನಲ್ಲಿ 14...

ಶುಂಠಿ ಬೆಳೆ: ಮಣ್ಣಿನಲ್ಲಿ ಜೀವವಿದೆ. ಆ ಜೀವ ಉಳಿದರೆ ಮಾತ್ರ ಕೃಷಿ ಉಳಿಯುತ್ತದೆ

ಶುಂಠಿ ಬೆಳೆ ಇಂದು ರೈತರಿಗೆ ಉತ್ತಮ ಆದಾಯ ನೀಡುವ ವಾಣಿಜ್ಯ ಬೆಳೆಗಳಲ್ಲಿ...