ಪ್ರಾದೇಶಿಕ ಆರಣ್ಯ ವಲಯ ವಿಭಾಗ ಕಚೇರಿಯ ಮುಖ್ಯ ದ್ವಾರದ ತಡೆಗೋಡೆಯ ಮೇಲೆ ಚಿತ್ರಿಸಿರುವ ಗೌತಮ್ ಬುದ್ಧನ ಚಿತ್ರವನ್ನು ಪುನಃ ‘ವಾಲ್ ರೈಟಿಂಗ್’ ಮಾಡಬೇಕು ಎಂದು ಆಗ್ರಹಿಸಿ ವಕೀಲ ತಾಯಪ್ಪ ಭಂಡಾರಿ ಅವರು ಪ್ರಾದೇಶಿಕ ಅರಣ್ಯ ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
“ಅರಣ್ಯ ಪರಿಸರ ಜಾಗೃತಿ ಬಗ್ಗೆ ವಿಭಾಗ ಕಚೇರಿ ಮುಖ್ಯ ದ್ವಾರದ ಕಾಂಪೌಂಡ್ ಗೋಡೆಯ ಮೇಲೆ ಚಿತ್ರಿಸಿರುವ ಗೌತಮ್ ಬುದ್ಧನ ಚಿತ್ರವು ಮಳೆ ಮತ್ತು ಬಿಸಿಲಿನಿಂದ ಆಳಿಸಿ ಹೋಗಿರುವುದರಿಂದ ಪುನಃ ವಾಲ್ ರೈಟಿಂಗ್ ಮಾಡಿಸುವ ಕುರಿತಂತೆ ಈಗಾಗಲೇ ಅರಣ್ಯ ಸಂರಕ್ಷಣಾಧಿಕಾರಿ ಗಮನಕ್ಕೆ ತರಲಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? SCSP/TSP ಅಡಿ ವಿಶ್ವವಿದ್ಯಾಲಯಗಳ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್: ಸಿದ್ದರಾಮಯ್ಯ
“ವಿಭಾಗ ಕಚೇರಿ ಮುಖ್ಯ ದ್ವಾರದ ಕಾಂಪೌಂಡ್ ಗೋಡೆಯ ಮೇಲೆ ಚಿತ್ರಿಸಲಾದ ಗೌತಮ್ ಬುದ್ಧನ ಚಿತ್ರವನ್ನು ಎರಡು ದಿನಗಳೊಳಗೆ ಪುನಃ ವಾಲ್ ರೈಟಿಂಗ್ ಮಾಡಿಸಬೇಕು” ಎಂದು ಒತ್ತಾಯಿಸಿದರು.