ರಾಜ್ಯದ ಎಲ್ಲಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್ ಗ್ರೂಪ್ ದರ್ಜೆಗೆ ಉನ್ನತೀಕರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಎಲ್ಲಾ ವೃಂದ ಸಂಘಗಳು ಹಾಗೂ ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟದ ನೇತೃತ್ವದಲ್ಲಿ ಅನಿರ್ದಿಷ್ಟವಾಧಿ ಪ್ರತಿಭಟನೆ ನಡೆಸಲಾಯಿತು.
ಗ್ರಾಮ ಪಂಚಾಯ್ತಿಗಳು ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಸರ್ಕಾರ ಅನೇಕ ನಿರ್ದೇಶನಗಳು ಜನರಿಗೆ ಸೌಲಭ್ಯ, ಸೌಕರ್ಯ ಒದಗಿಸಲು ಸಾಧ್ಯವಾಗದೇ ಹೋಗಿದೆ. ವಾರ್ಡ್ ವಾರು, ಗ್ರಾಮಸಭೆಗಳ ಮೂಲಕ ಜನರ ಬೇಡಿಕೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.
ಸರ್ಕಾರ ವಿವಿಧ ಯೋಜನೆಗಳಡಿ ಗುರಿ ಸಾಧನೆಗೆ ಸೀಮಿತಗೊಳಿಸುತ್ತಿರುವುದು ಪಂಚಾಯ್ತಿಗಳ ಮೂಲ ಕೆಲಸ ಕಾರ್ಯಗಳು ನಿರ್ವಹಿಸಲಾಗದ ಸ್ಥಿತಿಯಿದೆ. ಕೇರಳ ಮಾದರಿಯಂತೆ 28 ಇಲಾಖೆಗಳನ್ನು ಪಂಚಾಯ್ತಿ ವ್ಯಾಪ್ತಿಗೆ ಒಳಪಡಿಸಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಗೆಜೆಡೆಟ್ ಗ್ರೂಪ್ ಬಿ ವೃಂದಕ್ಕೆ ಮೇಲ್ದರ್ಜೆಗೇರಿಸುವುದು, ಏಳು ವರ್ಷ ಪೂರೈಸಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವುದನ್ನು ಕೈ ಬಿಡಬೇಕು, ಗ್ರಾಮ ಪಂಚಾಯ್ತಿಗಳಿಗೆ ಲೆಕ್ಕಸಹಾಯಕ, ಸಿಬ್ಬಂದಿ ನೇಮಿಸಬೇಕು, ಜವಾನ, ಕರವಸೂಲಿಗಾರ, ಪಂಪ್ ಆಪರೇಟರ್‌ಗಳಿಗೆ ಕನಿಷ್ಟ ವೇತನ ನೀಡುವುದು, ಪಂಚಾಯ್ತಿ ಗ್ರೇಡ್ ವೃಂದರಿಂದ ಪಿಡಿಓ ವೃಂದಕ್ಕೆ ಮುಂಬಡ್ತಿ ನೀಡುವುದು. ಮುಂಬಡ್ತಿ ಅನುಪಾತವನ್ನು 35 ರಿಂದ 60 ಕ್ಕೆ ಹೆಚ್ಚಿಸಬೇಕು ಸೇರಿದಂತೆ ಪಂಚಾಯ್ತಿ ಚುನಾಯಿತ ಸದಸ್ಯರು, ಸಿಬ್ಬಂದಿಗಳು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಅಣ್ಣಾರಾವ್, ಸಂಘದ ಪದಾಧಿಕಾರಿಗಳಾದ ತಾಯಣ್ಣ ಕಲ್ಮಲಾ, ಶ್ರೀಧರಗೌಡ, ಭೀಮರೆಡ್ಡಿ ಗುಂಜಳ್ಳಿ, ಮಲ್ಲಿಕಾರ್ಜುನ, ಗುರುಪಾದ, ರೇಖಾ, ರವಿ, ಅನ್ನಪೂರ್ಣ, ಲಕ್ಷ್ಮೀರೆಡ್ಡಿ ಸೇರಿ ಅನೇಕರಿದ್ದರು.
