ಜನಪ್ರತಿನಿಧಿಗಳು ಬಂಡವಾಳಶಾಹಿಪರ ಕಾನೂನು ಮಾಡುತ್ತಿದ್ದು ಹಿಂಬದಿಯಿಂದ ಜನರನ್ನು ಮೋಸಗೊಳಿಸುತ್ತಿದ್ದಾರೆ.ಸ್ವಾತಂತ್ಯ ದೊರೆತು 07 ದಶಕ ಕಳೆದರೂ ಯಾವೊಂದು ರಾಜಕೀಯ ಪಕ್ಷಗಳು ದೇಶದ ವ್ಯವಸ್ಥೆ ಬದಲಾಯಿಸಲಿಲ್ಲ ಎಂದು ಎಂದು ಎಂದು ಹಿರಿಯ ಹೋರಾಟಗಾರ ದಿಲೀಪ್ ಕಾಮತ್ ಹೇಳಿದರು.
ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ರವಿವಾರ ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ಹಾಗೂ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ‘ವರ್ತಮಾನ ರಾಜಕಾರಣ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ‘ಭಾರತದ ಪರಿಕಲ್ಪನೆ ವ್ಯವಸ್ಥೆ ಮತ್ತು ಜನಬದುಕಿನ ವೈರುಧ್ಯಗಳು’ ಕುರಿತು ವಿಚಾರ ಮಂಡಿಸಿದರು.
ಬಡ, ಮಧ್ಯಮ ವರ್ಗದವರಿಗೆ ಉದ್ಯೋಗ ಸಿಗುತ್ತಿಲ್ಲ. ಸರ್ವರಿಗೂ ಉದ್ಯೋಗ ದೊರೆಯಬೇಕಿದ್ದು ಉದ್ಯೋಗ ಖಾತ್ರಿ ಯೋಜನೆ ಪಡೆಯಲು 55 ವರ್ಷ ಬೇಕಾಯಿತು. ಆರೋಗ್ಯ, ಶಿಕ್ಷಣ ಕಾಯ್ದೆಗಳಿದ್ದರೂ ಸಮರ್ಪಕವಾದ ಅನುಷ್ಠಾನಗೊಳ್ಳುತ್ತಿಲ್ಲ. ಸ್ವಾತಂತ್ರ್ಯ ದೊರೆತು 7 ದಶಕಗಳಾದರೂ ಯಾವೊಂದು ರಾಜಕೀಯ ಪಕ್ಷಗಳು ದೇಶದ ವ್ಯವಸ್ಥೆ ಬದಲಾಯಿಸಲಿಲ್ಲ ಎಂದರು.
ಈ ಸುದ್ದಿ ಓದಿದ್ದೀರಾ? ರಾಯಚೂರು |ಸಿದ್ದರಾಮಯ್ಯ ನಮ್ಮ ಪಾಲಿಗೆ ಎರಡನೇ ಅಂಬೇಡ್ಕರ್ ;ಹೆಚ್.ಆಂಜನೇಯ
ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡಲು ಆಗದೆ ವಾತಾವರಣ ನಿರ್ಮಾಣವಾಗಿದೆ.5 ವರ್ಷಕೊಮ್ಮೆ ಬರುವ ಚುನಾವಣೆಯಲ್ಲಿ ಜನರು ಮೈಮರೆತಿದ್ದಾರೆ. ಈಗ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸಿ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಾಜಕೀಯ ಪಕ್ಷಗಳು ಅಸ್ಥಿರಗೊಳಿಸಿವೆ.ಜನರು ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿ ಪಡೆಯುತ್ತಿದೆ.ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಪರಿವರ್ತನೆ ಹೆಸರಿನಲ್ಲಿ ಅಭದ್ರಗೊಳಿಸುವ ಕೆಲಸ ಮಾಡಿದ್ದಾರೆ. ವ್ಯವಸ್ಥೆ ಬದಲಾಗದ ಹೊರತು ಪ್ರಜಾಪ್ರಭುತ್ವ ಉಳಿಸಲು ಸಾಧ್ಯವಿಲ್ಲ. ಕ್ರಿಮಿನಲ್ ಹಿನ್ನೆಲೆವುಳ್ಳವರು ಜನಪ್ರತಿನಿಧಿಗಳಿಂದ ಪ್ರಜಾಪ್ರಭುತ್ವ ದಾರಿತಪ್ಪಿ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಧಾರಗಳನ್ನು ಐಎಂಎಫ್, ವಿಶ್ವಸಂಸ್ಥೆ ಮಾಡುತ್ತಿದೆ. ಹೆದ್ದಾರಿ ರಸ್ತೆ, ವಿಮಾನ ನಿಲ್ದಾಣಗಳ ಹೆಸರಿನಲ್ಲಿ ಸಾವಿರಾರು ಕೋಟಿ ಅಪವ್ಯಯ ಮಾಡುವ ಸರ್ಕಾರಗಳು ರೈತರು ಬೆಳೆದ ಬೆಳೆಗೆ ಬೆಲೆ ನೀಡಲು ಮುಂದಾಗುತ್ತಿಲ್ಲ ಎಂದು ದೂರಿದರು.
ಸ್ವಾತಂತ್ರ್ಯ ನಂತರ ದೇಶದಲ್ಲಿ 35 ಸಾವಿರ ಕೋಟಿ ಜನಸಂಖ್ಯೆಯಿದ್ದರೆ ಆಹಾರಕ್ಕಾಗಿ ಅಮೆರಿಕಾದಿಂದ ಗೋದಿ ತರಿಸಿ ವಿತರಿಸಲಾಗುತ್ತಿತ್ತು. ಆದರಿಂದ ದೇಶದಲ್ಲಿ 144 ಕೋಟಿ ಜನಸಂಖ್ಯೆ ಹೊಂದಿದರು ಆಹಾರ ಸ್ವಾವಲಂಬನೆಯಿದ್ದು ವಿದೇಶಿಗಳಿಗೆ ರಫ್ತು ಮಾಡಲಾಗುತ್ತಿದೆ. ಆದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿನನಿರ್ಮಾಣ ಮಾಡಿದ್ದೇ ಸರ್ಕಾರಗಳು ಎಂದು ಆರೋಪ ಮಾಡಿದರು.
ಡಾ.ರಿಯಾಜುದ್ದೀನ್, ವೀರಣ್ಣ ಬಂಡಾರಿ, ಮೌನೇಶ ಗೋನಾಳ, ವಿಜಯಕುಮಾರ,ಶಿವುಕುಮಾರ, ಶ್ರೀಶೈಲ ಅಲದಹಳ್ಳಿ, ರಾಘವೇಂದ್ರ ಕುಷ್ಟಗಿ, ಶಾರದಾ ನಾಯಕ, ಪರಪ್ಪ ನಾಗೋಲಿ ಉಪಸ್ಥಿತರಿದ್ದರು.