ರಾಯಚೂರು| ಸ್ವಾತಂತ್ರ್ಯ ದೊರೆತು 07 ದಶಕ ಕಳೆದರೂ,ರಾಜಕೀಯ ಪಕ್ಷಗಳು ದೇಶದ ವ್ಯವಸ್ಥೆ ಬದಲಾಯಿಸಲಿಲ್ಲ ;ಕಾಮತ್

Date:

ಜನಪ್ರತಿನಿಧಿಗಳು ಬಂಡವಾಳಶಾಹಿಪರ ಕಾನೂನು ಮಾಡುತ್ತಿದ್ದು ಹಿಂಬದಿಯಿಂದ ಜನರನ್ನು ಮೋಸಗೊಳಿಸುತ್ತಿದ್ದಾರೆ.ಸ್ವಾತಂತ್ಯ ದೊರೆತು 07 ದಶಕ ಕಳೆದರೂ ಯಾವೊಂದು ರಾಜಕೀಯ ಪಕ್ಷಗಳು ದೇಶದ ವ್ಯವಸ್ಥೆ ಬದಲಾಯಿಸಲಿಲ್ಲ ಎಂದು ಎಂದು ಎಂದು ಹಿರಿಯ ಹೋರಾಟಗಾರ ದಿಲೀಪ್ ಕಾಮತ್ ಹೇಳಿದರು.

- Advertisement -

ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ರವಿವಾರ ಹೈದ್ರಾಬಾದ್ ಕರ್ನಾಟಕ ಜನಾಂದೋಲನ ಕೇಂದ್ರ ಹಾಗೂ ಸಮಾನ ಮನಸ್ಕ ಸಂಘಟನೆಗಳ ಆಶ್ರಯದಲ್ಲಿ ಆಯೋಜಿಸಿದ್ದ ‘ವರ್ತಮಾನ ರಾಜಕಾರಣ ಚಿಂತನ–ಮಂಥನ ಕಾರ್ಯಕ್ರಮದಲ್ಲಿ ‘ಭಾರತದ ಪರಿಕಲ್ಪನೆ ವ್ಯವಸ್ಥೆ ಮತ್ತು ಜನಬದುಕಿನ ವೈರುಧ್ಯಗಳು’ ಕುರಿತು ವಿಚಾರ ಮಂಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಬಡ, ಮಧ್ಯಮ ವರ್ಗದವರಿಗೆ ಉದ್ಯೋಗ ಸಿಗುತ್ತಿಲ್ಲ. ಸರ್ವರಿಗೂ ಉದ್ಯೋಗ ದೊರೆಯಬೇಕಿದ್ದು ಉದ್ಯೋಗ ಖಾತ್ರಿ ಯೋಜನೆ ಪಡೆಯಲು 55 ವರ್ಷ ಬೇಕಾಯಿತು. ಆರೋಗ್ಯ, ಶಿಕ್ಷಣ ಕಾಯ್ದೆಗಳಿದ್ದರೂ ಸಮರ್ಪಕವಾದ ಅನುಷ್ಠಾನಗೊಳ್ಳುತ್ತಿಲ್ಲ. ಸ್ವಾತಂತ್ರ್ಯ ದೊರೆತು 7 ದಶಕಗಳಾದರೂ ಯಾವೊಂದು ರಾಜಕೀಯ ಪಕ್ಷಗಳು ದೇಶದ ವ್ಯವಸ್ಥೆ ಬದಲಾಯಿಸಲಿಲ್ಲ ಎಂದರು.

ಈ ಸುದ್ದಿ ಓದಿದ್ದೀರಾ? ರಾಯಚೂರು |ಸಿದ್ದರಾಮಯ್ಯ ನಮ್ಮ ಪಾಲಿಗೆ ಎರಡನೇ ಅಂಬೇಡ್ಕರ್ ;ಹೆಚ್.ಆಂಜನೇಯ

ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡಲು ಆಗದೆ ವಾತಾವರಣ ನಿರ್ಮಾಣವಾಗಿದೆ.5 ವರ್ಷಕೊಮ್ಮೆ ಬರುವ ಚುನಾವಣೆಯಲ್ಲಿ ಜನರು ಮೈಮರೆತಿದ್ದಾರೆ. ಈಗ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸಿ ಸಂವಿಧಾನ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ‌ ವ್ಯವಸ್ಥೆಯನ್ನು ರಾಜಕೀಯ ಪಕ್ಷಗಳು ಅಸ್ಥಿರಗೊಳಿಸಿವೆ.ಜನರು ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಬಂಡವಾಳಶಾಹಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಿ ಪಡೆಯುತ್ತಿದೆ.ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಪರಿವರ್ತನೆ ಹೆಸರಿನಲ್ಲಿ ಅಭದ್ರಗೊಳಿಸುವ ಕೆಲಸ ಮಾಡಿದ್ದಾರೆ. ವ್ಯವಸ್ಥೆ ಬದಲಾಗದ ಹೊರತು ಪ್ರಜಾಪ್ರಭುತ್ವ ಉಳಿಸಲು ಸಾಧ್ಯವಿಲ್ಲ. ಕ್ರಿಮಿನಲ್ ಹಿನ್ನೆಲೆವುಳ್ಳವರು ಜನಪ್ರತಿನಿಧಿಗಳಿಂದ ಪ್ರಜಾಪ್ರಭುತ್ವ ದಾರಿತಪ್ಪಿ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಿರ್ಧಾರಗಳನ್ನು ಐಎಂಎಫ್, ವಿಶ್ವಸಂಸ್ಥೆ ಮಾಡುತ್ತಿದೆ. ಹೆದ್ದಾರಿ ರಸ್ತೆ, ವಿಮಾನ ನಿಲ್ದಾಣಗಳ ಹೆಸರಿನಲ್ಲಿ ಸಾವಿರಾರು ಕೋಟಿ ಅಪವ್ಯಯ ಮಾಡುವ ಸರ್ಕಾರಗಳು ರೈತರು ಬೆಳೆದ ಬೆಳೆಗೆ ಬೆಲೆ ನೀಡಲು ಮುಂದಾಗುತ್ತಿಲ್ಲ ಎಂದು ದೂರಿದರು.

ಸ್ವಾತಂತ್ರ್ಯ ನಂತರ ದೇಶದಲ್ಲಿ 35 ಸಾವಿರ ಕೋಟಿ ಜನಸಂಖ್ಯೆಯಿದ್ದರೆ ಆಹಾರಕ್ಕಾಗಿ ಅಮೆರಿಕಾದಿಂದ ಗೋದಿ ತರಿಸಿ ವಿತರಿಸಲಾಗುತ್ತಿತ್ತು. ಆದರಿಂದ ದೇಶದಲ್ಲಿ 144 ಕೋಟಿ ಜನಸಂಖ್ಯೆ ಹೊಂದಿದರು ಆಹಾರ ಸ್ವಾವಲಂಬನೆಯಿದ್ದು ವಿದೇಶಿಗಳಿಗೆ ರಫ್ತು ಮಾಡಲಾಗುತ್ತಿದೆ. ಆದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿನನಿರ್ಮಾಣ ಮಾಡಿದ್ದೇ ಸರ್ಕಾರಗಳು ಎಂದು ಆರೋಪ ಮಾಡಿದರು.

ಡಾ.ರಿಯಾಜುದ್ದೀನ್, ವೀರಣ್ಣ ಬಂಡಾರಿ, ಮೌನೇಶ ಗೋನಾಳ, ವಿಜಯಕುಮಾರ,ಶಿವುಕುಮಾರ, ಶ್ರೀಶೈಲ ಅಲದಹಳ್ಳಿ, ರಾಘವೇಂದ್ರ ಕುಷ್ಟಗಿ, ಶಾರದಾ ನಾಯಕ, ಪರಪ್ಪ ನಾಗೋಲಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಎಸ್‌ಐಆರ್ ವಿರೋಧಿಸಿ ಪ್ರತಿಭಟನೆ: ಜ್ಞಾನೇಶ ಕುಮಾರ ರಾಜೀನಾಮೆಗೆ ನಾಗರಿಕ ವೇದಿಕೆ ಆಗ್ರಹ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ...

ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10ನೇ ವರ್ಷದ ಸ್ವಚ್ಛತಾ ಆಂದೋಲನ

ಗಾಂಧಿ ಜಯಂತಿ ಅಂಗವಾಗಿ ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಳೆ...

ಧಾರವಾಡ | ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗಾಂಧಿ‌ ಜಯಂತಿ‌ ಆಚರಣೆ

ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಷ್ಟ್ರಪತಿ ಮಹಾತ್ಮಾ ಗಾಂಧೀಜಿ ಹಾಗೂ ...