ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕ್ಯಾದಿಗ್ಗೇರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಂಡೆಮೇಲೆ ಸಿಂಗೇರಿದೊಡ್ಡಿ ಗ್ರಾಮದ ನೀರಿನ ಸಮಸ್ಯೆ ಪರಿಹರಿಸಲು ತಾಲೂಕಿನ ಅಧಿಕಾರಿಗಳು ಗ್ರಾಮಕ್ಕೆ ಧಾವಿಸಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿರುವುದರಿಂದ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ್ ಅವರಿಗೆ ಮನವಿ ಸಲ್ಲಿಸಿ, ಗ್ರಾಮದ ನೀರಿನ ಸಮಸ್ಯೆ ಪರಿಹರಿಸಲು ಒಂದು ಹೊಸ ಬೋರ್ವೆಲ್ ಕೊರೆಸಬೇಕು, ನೀರಿನ ಟ್ಯಾಂಕ್ ಸಂಪರ್ಕ ಒದಗಿಸಬೇಕು, ನೀರಿನ ವ್ಯವಸ್ಥೆ ಸುಗಮಗೊಳಿಸಲು ವಾಟರ್ ಮ್ಯಾನ್ ನೇಮಕ ಮಾಡಬೇಕು, ಬೋರ್ ನೀರು ಸರಬರಾಜು ಆಗುವವರಿಗೆ ಪ್ರತಿ ದಿನ ಎರಡು ಟ್ಯಾಂಕರ್ ನೀರು ಸರಬರಾಜು ಮಾಡಬೇಕು, ಗ್ರಾಮದಲ್ಲಿ ಬೀದಿ ದೀಪಗಳ ವ್ಯವಸ್ಥೆ ಮಾಡ ಬೇಕು ಹಾಗೂ ಗ್ರಾಮಕ್ಕೆ ರಸ್ತೆಯನ್ನು ಮಾಡಿಸಬೇಕು ಎಂಬ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸಲಾಗಿತ್ತು.
ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಹರಿಸುವುದಾಗಿ ಹೇಳಿ ಸಂಜೆಯಿಂದಲೇ ಗ್ರಾಮಕ್ಕೆ ನೀರು ಸರಬರಾಜು ಆರಂಭವಾಗಿತ್ತು. ಕೂಡಲೇ ಹೊಸ ಬೋರ್ ಕೊರೆಸಲು ಸ್ಥಳ ಗುರುತಿಸಲಾಗಿದ್ದು, ಬೋರ್ ಯಂತ್ರ ಕರೆಸಿ ಕೊರೆಸುವುದಾಗಿ ತಿಳಿಸಿದ್ದಾರೆ ಸಂಘಟನೆಯ ಮುಖಂಡರುಗಳಿಗೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಬೀದಿ ದೀಪಗಳನ್ನು ಅಳವಡಿಸುವುದು, ಸೇರಿ ಉಳಿದ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗುವುದಾಗಿ ಗ್ರಾಮದ ಜನರ ಮುಂದೆ ಬರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅಣ್ಣಾರಾವ್, ಅರಕೇರಾ ಉಪ ತಹಸೀಲ್ದಾರ್ ಮನೋಹರ್, ಕಂದಾಯ ನಿರೀಕ್ಷಕ ಉಮಾಶಂಕರ್, ಅಲ್ಲಾ ಬಾಕ್ಸ್ ಕ್ಯಾರಿಗ್ರಾ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜಶೇಖರ ನಾಯಕ್, ಮಾಜಿ ಅಧ್ಯಕ್ಷ ಕೃಷ್ಣ ನಾಯಕ್ ಪಾಟೀಲ್, ವಿ.ಎ.ಮಮತಾ ಹಾಗೂ ಎಐಕೆಕೆ ಎಂಎಸ್ ಜಿಲ್ಲಾ ಕಾರ್ಯದರ್ಶಿ ಮಲ್ಲನಗೌಡ, ಎ. ಐಡಿವೈಒ ಜಿಲ್ಲಾ ಅಧ್ಯಕ್ಷ ಚನ್ನಬಸವ ಜಾನೇಕಲ್ ರೈತ ಸಂಘದ ತಾಲೂಕು ಕಾರ್ಯದರ್ಶಿ ದುರ್ಗಣ್ಣ, ಅಡಕಲಗುಡ್ಡ, ಸಾಬಯ್ಯ, ಅಂಬರೀಶ, ಸಿಂಗೆರಿದೊಡ್ಡಿ ಗ್ರಾಮ ಘಟಕದ ಕಾರ್ಯದರ್ಶಿ, ತಿಮ್ಮಯ್ಯ ಸಿಂಗೆರಿದೊಡ್ಡಿ ಗ್ರಾಮ ಉಪಾಧ್ಯಕ್ಷ ನಾಗರಾಜ, ಗ್ರಾಮದ ಹಿರಿಯರು, ಮಹಿಳೆಯರು ನೂರಾರು ಜನರು ಭಾಗವಹಿಸಿದ್ದರು.