ದೇವದುರ್ಗ ತಾಲ್ಲೂಕಿನ ಗಬ್ಬೂರು ನಾಡ ತಹಶೀಲ್ದಾರ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಯಾಗಿ ಬೆಂಕಿ ಹೊತ್ತಿಕೊಂಡು ಕಚೇರಿಯಲ್ಲಿದ್ದ ದಾಖಲೆಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.
ನಾಡ ತಹಶೀಲ್ದಾರ ಹಳೆ ಕಟ್ಟಡವಿದ್ದರಿಂದ ಮಳೆಯ ಪರಿಣಾಮ ಗೋಡೆಗಳು ಒದ್ದೆಯಾಗಿದ್ದುದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಕಂಪ್ಯೂಟರ್, ಸಾರ್ವಜನಿಕರ ಮಹತ್ವದ ದಾಖಲೆಗಳು, ಪೀಠೋಪಕರಣಗಳು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಯರಗೇರಾ ತಾಲ್ಲೂಕಿಗೆ ಹೋರಾಟ –ಸಿಎಂ ಭರವಸೆ ; ನಿಜಾಮ್
ಎರಡನೇ ಬಾರಿ ನಾಡ ತಹಶಿಲ್ದಾರ ಕಚೇರಿಯಲ್ಲಿ ಅಗ್ನಿದುರಂತ ಸಂಭವಿಸಿದೆ ಎನ್ನಲಾಗಿದೆ. ಮಹತ್ವದ ದಾಖಲೆಗಳು ಸುಟ್ಟು ಹೋಗಿರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

