ರಾಯಚೂರು ನಗರದ ಹೊರವಲಯದ ಏಗನೂರು ಬಳಿಯಲ್ಲಿ ಸರ್ಕಾರಿ ಜಾಗವನ್ನು ಅತಿಕ್ರಮಿಸಿ ನಿರ್ಮಾಣ ಮಾಡಿಕೊಂಡಿದ್ದ ಗೋಶಾಲೆಯನ್ನು ರಾಯಚೂರು ಮಹಾನಗರ ಪಾಲಿಕೆ ತೆರವು ಮಾಡಿತು.
ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಏಗನೂರು ಗ್ರಾಮದ ಸರ್ವೆ ನಂಬರ್ 202ರಲ್ಲಿ ಸರ್ಕಾರಿ ಜಾಗವನ್ನು ಮೃತ್ಯುಂಜಯ ಸ್ವಾಮಿ ಎನ್ನುವವರು ಅತಿಕ್ರಮಿಸಿಕೊಂಡು ಗೋಶಾಲೆ ನಿರ್ಮಿಸಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಆರೋಪದ ಮೇರೆಗೆ ಇಂದು ಬೆಳಗ್ಗೆ ಸಹಾಯಕ ಆಯುಕ್ತ ಗಜಾನನ ಬಾಳೆ, ಪಾಲಿಕೆ ಆಯುಕ್ತ ಗುರುಸಿದ್ದಯ್ಯ ಹಿರೇಮಠ ನೇತೃತ್ವದ ಅಧಿಕಾರಿಗಳ ತಂಡ ಪೊಲೀಸರ ಸಹಾಯದೊಂದಿಗೆ ಜೆಸಿಬಿ ಮೂಲಕ ಅಕ್ರಮ ಕಟ್ಟಡವನ್ನು ತೆರವು ಮಾಡಿತು.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಬೀದಿಬದಿ ವ್ಯಾಪಾರಿಗಳ ತೆರವು ಖಂಡಿಸಿ ಪ್ರತಿಭಟನೆ
ಕಟ್ಟಡ ತೆರವು ಮಾಡಿದ ಬಳಿಕ ಗೋಶಾಲೆಯಲ್ಲಿದ್ದ ಗೋವುಗಳನ್ನು ನಗರದ ಮಲಿಯಾಬಾದ್ ಗೋಶಾಲೆಗೆ ಸಾಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದರು.
