ರಾಯಚೂರು | ತಾರಾಲಯ ಅವೈಜ್ಞಾನಿಕ ನಿರ್ಮಾಣ; ಸರಿಪಡಿಸತ್ತೇವೆ ಎಂದ ಸಚಿವ

Date:

Advertisements

ಹಿಂದುಳಿದ ಪ್ರದೇಶವಾಗಿರುವ ರಾಯಚೂರು ಜಿಲ್ಲೆಯಲ್ಲಿ ಈ ಭಾಗದ ಯುವಕರು, ವಿದ್ಯಾರ್ಥಿಗಳ ಸಾರ್ವಜನಿಕರ ಕಲಿಕಾ ಮಟ್ಟ ಸುಧಾರಣೆಗಾಗಿ ಮತ್ತು ವಿಜ್ಞಾನದ ಆಸಕ್ತಿಯನ್ನು ಹೆಚ್ಚಿಸುವುದಕ್ಕೆ ಪ್ಲಾನೆಟೇರಿಯಂ (ತಾರಾಲಯ) ನಿರ್ಮಾಣ ಮಾಡಲಾಗಿದೆ. ಆದರೆ, ಯೋಜನೆಯ ಉದ್ದೇಶಕ್ಕೆ ತಕ್ಕಂತೆ ನಿರ್ಮಾಣ ವಾಗದ ಕಾರಣ ತಾರಾಲಯ ಕೆಲಸಕ್ಕೆ ಬಾರದಂತಾಗಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಲಕ್ಷಾಂತರ ರೂಪಾಯಿ ಅನುದಾನದಲ್ಲಿ ಈ ತಾರಾಲಯವನ್ನು ನಗರದ ಹೊರವಲಯದಲ್ಲಿರುವ ಉಪಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ 2016ರಲ್ಲಿ ಕೆಕೆಆರ್ಡಿಬಿಯ 55.80 ಲಕ್ಷ ರೂ. ವೆಚ್ಚದಲ್ಲಿ ತಾರಾಲಯ ಕಟ್ಟಡ ಆರಂಭಿಸಿ 2021ಮಾರ್ಚ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.ಆದರೆ, ಇದನ್ನು ಸಾಮಾನ್ಯ ಕಟ್ಟಡಗಳು, ಶಾಲಾ, ಅಂಗನವಾಡಿ ಕಟ್ಟಡ ನಿರ್ಮಿಸಿದ ಅನುಭವವುಳ್ಳ ಖಾಸಗಿ ಸಂಸ್ಥೆಗೆ ಕಾಮಗಾರಿ ಜವಾಬ್ದಾರಿಯನ್ನು ನೀಡಲಾಗಿತ್ತು.

ಮಾಹಿತಿ ಕೊರತೆಯಿಂದ ತಾರಾಲಯ ನಿರ್ಮಾಣದ ವೇಳೆ ನಿಯಮಗಳನ್ನು ಅನುಸರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ್ದ ಕಟ್ಟಡ ಕಳೆದ ಎರಡು ವರ್ಷಗಳಿಂದ ನಿರುಪಯುಕ್ತವಾಗಿದೆ. ಅರೆಬರೆ ಕಾಮಗಾರಿ ಮಾಡಿರುವುದರಿಂದ ಇನ್ನೂ ಸಾಕಷ್ಟು ಕೆಲಸ ಬಾಕಿ ಉಳಿದಿದೆ.

Advertisements

ತಾರಾಲಯ ಎನ್ನುವುದು ಒಂದು ಹೊಸಲೋಕದ ಅನುಭವನ್ನು ನೀಡಬೇಕು. ಹೊರಗಿನಿಂದ ಒಳ ಹೋಗುತ್ತಿದ್ದಂತೆ ಹಂತ ಹಂತವಾಗಿ ಕತ್ತಲಾವರಿಸುವಂತಿರಬೇಕು. ಒಳಗಡೆ ಗಾಢಾಂಧಕಾರದಲ್ಲಿ ಮಕ್ಕಳು ಸೌರವ್ಯೂಹದ ಚಿತ್ರಣ ಕಣ್ತುಂಬಿಕೊಳ್ಳುವಂತಿರಬೇಕು. ಆದರೆ, ಇಲ್ಲಿ ನಿರ್ಮಿಸಿದ ಕಟ್ಟಡದಲ್ಲಿ ಆ ರೀತಿಯ ಅನುಭವ ಕಾಣಸಿಗುವುದಿಲ್ಲ.

ಜೊತೆಗೆ ಶೌಚಾಲಯದ ವ್ಯವಸ್ಥೆ ಕೂಡ ಮಾಡಿಲ್ಲವೆಂದು ಇಲ್ಲಿನ ಸಿಬ್ಬಂದಿ ಸಹ ಹೇಳುತ್ತಿದ್ದಾರೆ.ರಾಜ್ಯದ ನಾನಾಕಡೆ ನಿರ್ಮಿಸಿರುವ ತಾರಾಲಯಗಳಿಗೆ ಅತ್ಯಾಧುನಿಕ ತಂತ್ರಜ್ಞಾನಗಳ ಬಳಕೆ ಮಾಡಲಾಗುತ್ತಿದೆ. ರಾಯಚೂರಿನಲ್ಲಿ ಮಾತ್ರ ಹಳೆ ಪದ್ಧತಿಯಲ್ಲಿ ನಿರ್ಮಿಸಲಾಗಿದೆ. ಯಾಕೆಂದರೆ ಒಳಗಡೆ ಆಸನಗಳಲ್ಲಿ ಕುಳಿತಾಗ ಒರಗಿ ಕೂರಲು ಅನುಕೂಲವಾಗುವ ರೀತಿ ಇರಬೇಕು. ಅದಕ್ಕೆ ಬೇಕಾದ ಮಾದರಿಯಡಿ ಕಟ್ಟಡ ನಿರ್ಮಿಣ ಮಾಡಿಲ್ಲ.

ಇದೀಗ ಪ್ಲಾನೆಟೇರಿಯಂ ರೂಪಕ್ಕೆ ತರಬೇಕಾದರೆ ಇನ್ನಷ್ಟು ಅನುದಾನವನ್ನು ನೀಡುವ ಮೂಲಕ ಕಟ್ಟಡವನ್ನು ಸರಿ ಮಾಡಬೇಕಾಗುತ್ತದೆ.ಮೂಲಗಳ ಪ್ರಕಾರ ಇದಕ್ಕೆ ಇನ್ನೂ ಎರಡರಿಂದ ಎರಡೂವರೆ ಕೋಟಿ ರೂಪಾಯಿ ಹಣ ಬೇಕು. ಈಗಿರುವ ರೂಫ್ ಮೇಲೆ ಏರ್ ಪ್ರೂಫ್ ಹಾಗೂ ಫೈರ್ ಪ್ರೂಫ್ ಸೇರಿದಂತೆ ಆತ್ಯಾಧುನಿಕ ಸಲಕರಣೆಗಳನ್ನು ಅಳವಡಿಸಬೇಕು. ಅಂದಾಗ ಮಾತ್ರ ಇದಕ್ಕೆ ಒಂದು ರೂಪ ಬರಲಿದ್ದು ಬಳಕೆ ಮಾಡಬಹುದಾಗಿದೆ. ಇಲ್ಲದಿದ್ದರೆ ಕಟ್ಟಡ ನಿರುಪಯುಕ್ತವಾಗಿ ಬೀಳಲಿದೆ ಎಂಬ ಮಾತು ಕೇಳಿ ಬರುತ್ತಿವೆ.

ಈ ಬಗ್ಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರನ್ನು ಮಾದ್ಯಮದವರು ಪ್ರಶ್ನಿಸಿದಾಗ ‘ನಾನು ಈ ಇಲಾಖೆ ಸಚಿವನಾಗುವ ಮುನ್ನ ಕಾಮಗಾರಿ ಮಾಡಲಾಗಿದೆ. ಈ ವಿಷಯ ನನ್ನ ಗಮನದಲ್ಲಿ ಇದೆ. ಇದೇ ಆವರಣದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬೃಹತ್ ವಿಜ್ಞಾನ ಕೇಂದ್ರ ಸ್ಥಾಪಿಸಲಾಗುತ್ತಿದೆ. ತಜ್ಞರ ತಂಡ ಭೇಟಿ ನೀಡಿದೆ. ಈಗಿರುವ ಪ್ಲಾನೆಟೇರಿಯಂ ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಕುರಿತು ಚರ್ಚಿಸಿ, ಅದರ ಬಗ್ಗೆ ವರದಿ ಕೇಳಿದ್ದೇನೆ. ವರದಿ ಬಂದ ನಂತರ ಮುಂದಿನ ಕ್ರಮʼ ಎಂದು ತಿಳಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X