ಪಶ್ಚಿಮ ಬಂಗಾಳದ ಸಂದೇಶ ಕಾಲಿಯಲ್ಲಿ ರಿಪಬ್ಲಿಕ್ ಟಿವಿ ನ್ಯೂಸ್ ಚಾನಲ್‌ನ ವರದಿಗಾರ ಸಂತುಪನ್ ಅವರ ಬಂಧನ ಖಂಡಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪಶ್ಚಿಮ ಬಂಗಾಳದ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
“ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳಿಗೆ ತನ್ನದೇ ಆದ ಸ್ವಾತಂತ್ರ್ಯ ಇದೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಕರ್ತವ್ಯ ನಿರತ ಪತ್ರಕರ್ತನನ್ನು ಬಂಧನ ಮಾಡುವ ಮೂಲಕ ಮಾಧ್ಯಮ ಸ್ವಾತಂತ್ರ್ಯ ಹರಣ ಮಾಡಲು ಹೊರಟಿರುವುದನ್ನು ಖಂಡಿಸಿದರು. ಕೂಡಲೇ ಬಂಧಿತ ಪತ್ರಕರ್ತನನ್ನು ಬಿಡುಗಡೆ ಮಾಡಬೇಕು ಮತ್ತು ಅವರ ಮೇಲೆ ಹಾಕಿರುವ ಎಲ್ಲ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು” ಎಂದು ಒತ್ತಾಯಿಸಿದರು.
“ಪತ್ರಕರ್ತರ ಮೇಲೆ ಹಲ್ಲೆ, ಕೊಲೆ ಪ್ರಕರಣಗಳು ಹೆಚ್ಚಳವಾಗುತ್ತಿರುವುದು ಅಘಾತಕಾರಿಯಾಗಿದೆ. ಪತ್ರಕರ್ತರ ರಕ್ಷಣೆ ಕಾನೂನು ರೂಪಿಸಬೇಕು. ಮುಕ್ತ ಪತ್ರಿಕೋದ್ಯಮಕ್ಕೆ ಅವಕಾಶ ನೀಡಬೇಕು.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಇರುವ ಸಮಿತಿ ನಿಯಮಿತ ಸಭೆ ನಡೆಸಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ದೈಹಿಕವಾಗಿ ಸದೃಢರಾಗಲು ಕ್ರೀಡೆ ಅತ್ಯಗತ್ಯ: ಶಿವಾನಂದ್ ಕರಾಳೆ
ಪ್ರತಿಭಟನೆಯಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್ ಗುರುನಾಥ, ರಾಜ್ಯ ಸಮಿತಿ ಸದಸ್ಯ ಶಿವಮೂರ್ತಿ ಹಿರೇಮಠ, ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಮಡಿವಾಳರ್, ಪತ್ರಕರ್ತರುಗಳಾದ ಕೆ ಸತ್ಯನಾರಾಯಣ, ದತ್ತು ಸರ್ಕಿಲ್, ಬಸವರಾಜ ನಾಗಡದಿನ್ನಿ, ವಿಜಯಕುಮಾರ ಜಾಗಟಗಲ್, ಭೀಮೇಶ ಪೂಜಾರಿ, ಧೀರೇಂದ್ರ ಕುಲಕರ್ಣಿ, ಮಲ್ಲಿಕಾರ್ಜುನಯ್ಯ ಸ್ವಾಮಿ, ವೆಂಕಟೇಶ ಹೂಗಾರ, ರಂಗನಾಥ, ಎಚ್ ವೀರನಗೌಡ, ಮುತ್ತಣ್ಣ ಹೇಳವರ, ಗಿರಿಧರ ಕುಲಕರ್ಣಿ ಸೇರಿದಂತೆ ಬಹುತೇಕರು ಇದ್ದರು.
ವರದಿ : ಹಫೀಜುಲ್ಲ
