ರಾಯಚೂರು ನಗರದ ವಾರ್ಡ್ ನಂ.2ರಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ 1 ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆಗಳು, ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರ, 10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಕೆಕೆಆರ್‌ಡಿಬಿ ಅಧ್ಯಕ್ಷರ ವಿವೇಚನಾ ಅನುದಾನದಲ್ಲಿ 30 ಲಕ್ಷ ರೂ.ವೆಚ್ಚದ ಸಿಸಿ ರಸ್ತೆಗಳು, ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಅನುದಾನದಡಿ 75 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆಗಳು ಸೇರಿದಂತೆ 2 ಕೋಟಿ 65 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವ ಎನ್ಎಸ್ ಬೋಸರಾಜು ಅವರು ಭೂಮಿಪೂಜೆ ಮಾಡುವ ಮೂಲಕ ಕಾಮಗರಿಗಳಿಗೆ ಚಾಲನೆ ನೀಡಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಪ್ರೀತಿಸಿ ಮದುವೆಯಾದ ಜೋಡಿ; ಯುವಕನ ಬಳಿ ₹50 ಲಕ್ಷಕ್ಕೆ ಬೇಡಿಕೆ ಇಟ್ಟ ಯುವತಿ ತಾಯಿ
ಕಾಂಗ್ರೆಸ್‌ನ ಹಿರಿಯ ಮುಖಂಡ, ನಗರಸಭೆ ಸದಸ್ಯ ಜಯಣ್ಣ, ಮುಖಂಡರುಗಳಾದ ಮೊಹ್ಮದ್ ಶಾಲಂ, ಬಸವರಾಜ್ ರಡ್ಡಿ, ರುದ್ರಪ್ಪ ಅಂಗಡಿ, ಜಿ ಶಿವಮೂರ್ತಿ, ಟಿಸಿ ಸಲ್ಮಾನ್, ಪ್ರಕಾಶ್, ಲೂಹಿಸ್, ಲೋಕಯ್ಯ, ರಾಜಶೇಖರ್, ಲಾಸರ್, ಹನುಮಂತ ಹೊಸೂರು ಸೇರಿದಂತೆ ಇತರರು ಇದ್ದರು,
ವರದಿ : ಹಫೀಜುಲ್ಲ
