ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ ಸ್ಥಾನ?

Date:

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್, ಸ್ಟಾರ್ಟ್‌ಅಪ್, ಜಿಸಿಸಿ, ಇಎಸ್‌ಡಿಎಂ ಸೇರಿದಂತೆ ಹೊಸ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರಿನ ಹೊರಗಿನ ನಗರಗಳನ್ನು ಅಭಿವೃದ್ಧಿಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

KDEM ಪ್ರಸ್ತುತ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ-ಬೆಳಗಾವಿ, ಕಲಬುರಗಿ, ಶಿವಮೊಗ್ಗ ಹಾಗೂ ತುಮಕೂರು ಸೇರಿದಂತೆ ಆರು ಕ್ಲಸ್ಟರ್‌ಗಳನ್ನು ‘Beyond Bengaluru’ ಅಡಿಯಲ್ಲಿ ಗುರುತಿಸಿದೆ. ಈ ಕ್ಲಸ್ಟರ್‌ಗಳಲ್ಲಿ ಸ್ಥಳೀಯ ಕೈಗಾರಿಕೆ, ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಹೂಡಿಕೆದಾರರನ್ನು ಸಂಪರ್ಕಿಸಿ ಹೊಸ ಉದ್ಯೋಗ ಮತ್ತು ಹೂಡಿಕೆ ಅವಕಾಶಗಳನ್ನು ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ.

- Advertisement -

ಕಲಬುರಗಿಗೆ ಕ್ಲಸ್ಟರ್; ರಾಯಚೂರು ಎಲ್ಲಿದೆ?

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

ಕಲ್ಯಾಣ ಕರ್ನಾಟಕದ ಭಾಗವಾಗಿರುವ ರಾಯಚೂರಿನಲ್ಲಿ ವಿಶ್ವವಿದ್ಯಾಲಯ, ಎಂಜಿನಿಯರಿಂಗ್ ಹಾಗೂ ಪದವಿ ಕಾಲೇಜುಗಳು, ಸಾವಿರಾರು ವಿದ್ಯಾರ್ಥಿಗಳು ಮತ್ತು ದೊಡ್ಡ ಪ್ರಮಾಣದ ಯುವ ಮಾನವ ಸಂಪನ್ಮೂಲವಿದೆ. ಕೃಷಿ, ಕೈಗಾರಿಕೆ, ಗಣಿಗಾರಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಿಲ್ಲೆಯದೇ ಆದ ಆರ್ಥಿಕ ಚಟುವಟಿಕೆಗಳಿವೆ. ಆದರೆ KDEMನ ಪ್ರಸ್ತುತ Beyond Bengaluru ಕ್ಲಸ್ಟರ್ ಪಟ್ಟಿಯಲ್ಲಿ ಕಲಬುರಗಿ ಸ್ಥಾನ ಪಡೆದಿದ್ದರೂ ರಾಯಚೂರು ಪ್ರತ್ಯೇಕ ಕ್ಲಸ್ಟರ್ ಆಗಿ ಗುರುತಿಸಲ್ಪಟ್ಟಿಲ್ಲ ಎಂದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಇದು ರಾಯಚೂರು ಜಿಲ್ಲೆಗೆ ಹೊಸ ಚರ್ಚೆಯನ್ನು ಹುಟ್ಟುಹಾಕುವಂತಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಒಂದೇ ಭಾಗದ ನಗರಗಳಿಗೆ ತಂತ್ರಜ್ಞಾನ ಮತ್ತು ಡಿಜಿಟಲ್ ಆರ್ಥಿಕತೆಯ ಅವಕಾಶಗಳು ಸೀಮಿತವಾಗದೆ, ರಾಯಚೂರಿನಂತಹ ಜಿಲ್ಲೆಗಳಿಗೂ ವಿಸ್ತರಿಸಬೇಕೆಂಬ ಬೇಡಿಕೆ ಕೇಳಿಬರುವ ಸಾಧ್ಯತೆ ಇದೆ.

ಹೆಚ್ಚುತ್ತಿರುವ ಗುಳೆ!

ರಾಯಚೂರಿನ ವಿದ್ಯಾವಂತ ಯುವ ಜನಾಂಗ ಉದ್ಯೋಗಕ್ಕಾಗಿ ಬೆಂಗಳೂರು, ಹೈದರಾಬಾದ್, ಪುಣೆ, ಚೆನ್ನೈ ಸೇರಿದಂತೆ ದೊಡ್ಡ ನಗರಗಳತ್ತ ವಲಸೆ ಹೋಗುವುದು ಸಾಮಾನ್ಯವಾಗಿದೆ. ಸ್ಥಳೀಯವಾಗಿಯೇ ಖಾಸಗಿ ಉದ್ಯೋಗ, ಐಟಿ ಕ್ಷೇತ್ರ, ಸ್ಟಾರ್ಟ್‌ಅಪ್‌ಗಳು ಹಾಗೂ ತಂತ್ರಜ್ಞಾನ ಆಧಾರಿತ ಉದ್ಯಮಗಳ ಅವಕಾಶಗಳು ಹೆಚ್ಚಾದರೆ ಈ ವಲಸೆ ತಪ್ಪಬಹುದು.

Beyond Bengaluru ಯೋಜನೆಯ ಮೂಲ ಉದ್ದೇಶವೇ ಬೆಂಗಳೂರಿನ ಹೊರಗಿನ ಪ್ರದೇಶಗಳಲ್ಲಿ ತಂತ್ರಜ್ಞಾನ ಆಧಾರಿತ ಆರ್ಥಿಕ ಪರಿಸರ ನಿರ್ಮಿಸುವುದಾಗಿದೆ. ಇದರಲ್ಲಿ ಉದ್ಯೋಗ ಸೃಷ್ಟಿಯ ಜೊತೆಗೆ ಸ್ಥಳೀಯ ಪ್ರತಿಭೆ, ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಕೈಗಾರಿಕೆಗಳ ನಡುವೆ ಸಂಪರ್ಕ ಬೆಳೆಸಲು ಒತ್ತು ನೀಡಲಾಗುತ್ತಿದೆ.

ರಾಯಚೂರಿನಲ್ಲೂ ಸಾಧ್ಯತೆಗಳಿವೆ!

ರಾಯಚೂರಿನಲ್ಲಿ ಕೃಷಿ ಆಧಾರಿತ ಆರ್ಥಿಕತೆ ದೊಡ್ಡ ಪ್ರಮಾಣದಲ್ಲಿರುವುದರಿಂದ AgriTech, ಡಿಜಿಟಲ್ ಕೃಷಿ, ಡ್ರೋನ್ ತಂತ್ರಜ್ಞಾನ, ಆಹಾರ ಸಂಸ್ಕರಣೆ, ನೀರಾವರಿ ತಂತ್ರಜ್ಞಾನ ಹಾಗೂ ಗ್ರಾಮೀಣ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ವಿಪುಲ ಅವಕಾಶಗಳಿವೆ.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ EdTech ಹಾಗೂ HealthTech, ಗಣಿಗಾರಿಕೆ ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದ Industry 4.0, ಸೌರಶಕ್ತಿ ಹಾಗೂ ಇತರ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಆಧಾರಿತ ಉದ್ಯಮಗಳಿಗೆ ಅವಕಾಶ ಕಲ್ಪಿಸಬಹುದು. ಈ ಕ್ಷೇತ್ರಗಳಲ್ಲಿ ಸ್ಥಳೀಯ ಕಾಲೇಜು, ಕೈಗಾರಿಕೆ ಮತ್ತು ಸರ್ಕಾರದ ಇಲಾಖೆಗಳ ನಡುವೆ ಸಮನ್ವಯ ಮೂಡಿಸುವ ಅಗತ್ಯವಿದೆ ಎಂಬುದು ಸ್ಥಳೀಯರ ಆಗ್ರಹ.

ಮೂಲಸೌಕರ್ಯವೇ ಪ್ರಮುಖ ಸವಾಲು

ರಾಯಚೂರಿನಲ್ಲಿ ಐಟಿ ಮತ್ತು ತಂತ್ರಜ್ಞಾನ ಕ್ಷೇತ್ರದ ಹೂಡಿಕೆಗಳನ್ನು ಆಕರ್ಷಿಸಲು ಕೇವಲ ಸರ್ಕಾರಿ ಘೋಷಣೆ ಸಾಕಾಗುವುದಿಲ್ಲ. ಉತ್ತಮ ಇಂಟರ್‌ನೆಟ್ ಸಂಪರ್ಕ, ನಿರಂತರ ವಿದ್ಯುತ್ ಪೂರೈಕೆ, ಆಧುನಿಕ ಕಚೇರಿ ಮತ್ತು ಕೋ-ವರ್ಕಿಂಗ್ ಸ್ಥಳಗಳು, ತಂತ್ರಜ್ಞಾನ ಪಾರ್ಕ್, ತರಬೇತಿ ಕೇಂದ್ರಗಳು, ಉದ್ಯಮಿಗಳಿಗೆ ಅನುಕೂಲಕರ ವ್ಯವಸ್ಥೆ ಹಾಗೂ ಹೂಡಿಕೆದಾರರಿಗೆ ವೇಗದ ಅನುಮತಿ ವ್ಯವಸ್ಥೆ ಅಗತ್ಯವಿದೆ.

KDEM ಕೂಡ Beyond Bengaluru ಯೋಜನೆಯ ಮುಂದಿನ ಹಂತದಲ್ಲಿ ಮೂಲಸೌಕರ್ಯ ಸುಧಾರಣೆ, ಹೂಡಿಕೆ ಹೆಚ್ಚಳ, ಪ್ರತಿಭೆ ಅಭಿವೃದ್ಧಿ ಹಾಗೂ ಜಾಗತಿಕ ಸಂಪರ್ಕ ಬಲಪಡಿಸುವುದಕ್ಕೆ ಒತ್ತು ನೀಡುವುದಾಗಿ ತಿಳಿಸಿದೆ.

ರಾಯಚೂರಿಗೆ ಪ್ರತ್ಯೇಕ ಕ್ಲಸ್ಟರ್ ಅಗತ್ಯವೇ?

ಇದು ಈಗ ಜಿಲ್ಲೆಯ ಜನಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರು ಹಾಗೂ ಯುವಕರು ಚರ್ಚಿಸಬೇಕಾದ ಪ್ರಮುಖ ಪ್ರಶ್ನೆಯಾಗಿದೆ.

ಕಲಬುರಗಿ ಈಗಾಗಲೇ Beyond Bengaluru ಕ್ಲಸ್ಟರ್‌ನಲ್ಲಿ ಸ್ಥಾನ ಪಡೆದಿರುವ ಸಂದರ್ಭದಲ್ಲಿ ರಾಯಚೂರಿನ ಭೌಗೋಳಿಕ, ಶೈಕ್ಷಣಿಕ, ಕೈಗಾರಿಕಾ ಮತ್ತು ಮಾನವ ಸಂಪನ್ಮೂಲ ಸಾಮರ್ಥ್ಯವನ್ನು ಪರಿಗಣಿಸಿ ರಾಯಚೂರನ್ನೂ ಪ್ರತ್ಯೇಕ ತಂತ್ರಜ್ಞಾನ ಕ್ಲಸ್ಟರ್ ಆಗಿ ಅಭಿವೃದ್ಧಿಪಡಿಸುವ ಕುರಿತು ಸರ್ಕಾರ ಚಿಂತನೆ ನಡೆಸಬೇಕು.

ರಾಯಚೂರಿನಲ್ಲಿ ಪ್ರತ್ಯೇಕ ಡಿಜಿಟಲ್ ಎಕಾನಮಿ ಕ್ಲಸ್ಟರ್ ಅಥವಾ ಟೆಕ್ನಾಲಜಿ ಪಾರ್ಕ್ ಸ್ಥಾಪನೆ, ಸ್ಟಾರ್ಟ್‌ಅಪ್ ಇಂಕ್ಯುಬೇಶನ್ ಕೇಂದ್ರ, ಉದ್ಯಮ-ವಿಶ್ವವಿದ್ಯಾಲಯ ಸಂಪರ್ಕ ಹಾಗೂ ಸ್ಥಳೀಯ ಯುವಕರಿಗೆ ತಂತ್ರಜ್ಞಾನ ಕೌಶಲ ತರಬೇತಿ ನೀಡುವ ವ್ಯವಸ್ಥೆ ರೂಪಿಸಿದರೆ ಜಿಲ್ಲೆಯಲ್ಲಿ ಹೊಸ ಉದ್ಯೋಗದ ಅವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.

‘Beyond Bengaluru’ಯಿಂದ ‘Beyond Kalaburagi’ ಕಡೆ?

ಹೀಗಿರುವಾಗ ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆ ಮುಂದಿನ ಹಂತದ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತನ್ನ ಸ್ಥಾನವನ್ನು ಹೇಗೆ ಪಡೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ. ಬೆಂಗಳೂರಿನಾಚೆ ಅಭಿವೃದ್ಧಿ ಆರಂಭವಾಗಿದೆ. ಈಗ ಪ್ರಶ್ನೆ ಒಂದೇ. ಈ ಅಭಿವೃದ್ಧಿಯ ಮುಂದಿನ ಹೆಜ್ಜೆ ರಾಯಚೂರಿನತ್ತ ಯಾವಾಗ ಎಂಬುದು ಜಿಲ್ಲೆಯ ಜನರು ಕಾದು ನೋಡುತ್ತಿದ್ದಾರೆ.

ರಾಯಚೂರು ಜಿಲ್ಲೆ ಕೇವಲ ಹಿಂದುಳಿದ ಜಿಲ್ಲೆಯೆಂಬ ಗುರುತಿಗೆ ಸೀಮಿತವಾಗಿಲ್ಲ. ರಾಜ್ಯ ಹಾಗೂ ದೇಶದ ಆರ್ಥಿಕತೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಪ್ರಮುಖ ಕೈಗಾರಿಕಾ ಮತ್ತು ಇಂಧನ ಕೇಂದ್ರಗಳನ್ನು ಜಿಲ್ಲೆ ಹೊಂದಿದೆ. ಹಟ್ಟಿ ಚಿನ್ನದ ಗಣಿ ದೇಶದಲ್ಲೇ ಚಿನ್ನ ಉತ್ಪಾದಿಸುವ ಪ್ರಮುಖ ಗಣಿಗಳಲ್ಲಿ ಒಂದಾಗಿದ್ದು, ಶಕ್ತಿನಗರದ ವಿದ್ಯುತ್ ಶಾಖೋತ್ಪನ್ನ ಘಟಕಗಳು ರಾಜ್ಯದ ವಿದ್ಯುತ್ ಅಗತ್ಯ ಪೂರೈಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಇಂತಹ ಕೈಗಾರಿಕಾ ಮತ್ತು ಶಕ್ತಿ ಸಾಮರ್ಥ್ಯ ಹೊಂದಿರುವ ರಾಯಚೂರು ಜಿಲ್ಲೆ ಡಿಜಿಟಲ್ ಆರ್ಥಿಕತೆ ಹಾಗೂ ಹೊಸ ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಮಾತ್ರ ಏಕೆ ಹಿಂದೆ ಉಳಿಯಬೇಕು ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಹಟ್ಟಿಯ ಚಿನ್ನದ ಗಣಿಯಿಂದ ದೇಶದ ಚಿನ್ನದ ಉತ್ಪಾದನೆಗೆ ಕೊಡುಗೆ ನೀಡುತ್ತಿರುವ ಜಿಲ್ಲೆ, ಶಕ್ತಿನಗರದ ಮೂಲಕ ರಾಜ್ಯದ ವಿದ್ಯುತ್ ಬೇಡಿಕೆಯನ್ನು ಪೂರೈಸುವಲ್ಲಿ ಪಾಲುದಾರವಾಗಿದೆ. ಕೃಷಿ, ನೀರಾವರಿ, ಗಣಿಗಾರಿಕೆ, ವಿದ್ಯುತ್ ಉತ್ಪಾದನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಸಾಮರ್ಥ್ಯ ಹೊಂದಿರುವ ರಾಯಚೂರಿನಲ್ಲಿ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಿದರೆ ಹೊಸ ಉದ್ಯೋಗ ಮತ್ತು ಹೂಡಿಕೆ ಅವಕಾಶಗಳನ್ನು ಸೃಷ್ಟಿಸಬಹುದಾಗಿದೆ.

‘Beyond Bengaluru’ ಯೋಜನೆಯಡಿ ರಾಜ್ಯದ ಹಲವು ನಗರಗಳಿಗೆ ಐಟಿ, ಸ್ಟಾರ್ಟ್‌ಅಪ್, ಜಿಸಿಸಿ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಅವಕಾಶಗಳನ್ನು ವಿಸ್ತರಿಸುವ ಪ್ರಯತ್ನ ನಡೆಯುತ್ತಿರುವಾಗ, ರಾಯಚೂರಿನಂತಹ ಕೈಗಾರಿಕಾ ಶಕ್ತಿ ಹೊಂದಿರುವ ಜಿಲ್ಲೆಗೆ ಸಮರ್ಪಕ ಸ್ಥಾನಮಾನ ಮತ್ತು ಅವಕಾಶ ಸಿಗುತ್ತಿದೆಯೇ? ಎಂಬ ಪ್ರಶ್ನೆ ಮಹತ್ವ ಪಡೆದುಕೊಂಡಿದೆ.

ಒಂದು ಕಡೆ ಹಟ್ಟಿ ಚಿನ್ನದ ಗಣಿ ದೇಶಕ್ಕೆ ಚಿನ್ನ ನೀಡುತ್ತಿದೆ. ಮತ್ತೊಂದೆಡೆ ಶಕ್ತಿನಗರ ರಾಜ್ಯಕ್ಕೆ ವಿದ್ಯುತ್ ನೀಡುತ್ತಿದೆ. ಕೃಷಿ ಕ್ಷೇತ್ರದಲ್ಲೂ ರಾಯಚೂರು ಪ್ರಮುಖ ಜಿಲ್ಲೆಯಾಗಿದೆ. ವಿಶ್ವವಿದ್ಯಾಲಯಗಳು, ಎಂಜಿನಿಯರಿಂಗ್ ಹಾಗೂ ಪದವಿ ಕಾಲೇಜುಗಳ ಮೂಲಕ ದೊಡ್ಡ ಪ್ರಮಾಣದ ಯುವ ಮಾನವ ಸಂಪನ್ಮೂಲವೂ ಜಿಲ್ಲೆಯಲ್ಲಿ ಲಭ್ಯವಿದೆ. ಇಷ್ಟೊಂದು ಸಾಮರ್ಥ್ಯವಿದ್ದರೂ ಹೊಸ ತಂತ್ರಜ್ಞಾನ, ಐಟಿ, ಸ್ಟಾರ್ಟ್‌ಅಪ್ ಮತ್ತು ಡಿಜಿಟಲ್ ಉದ್ಯೋಗಗಳ ಕ್ಷೇತ್ರದಲ್ಲಿ ರಾಯಚೂರಿಗೆ ನಿರೀಕ್ಷಿತ ಪ್ರಮಾಣದ ಅವಕಾಶಗಳು ಏಕೆ ದೊರೆಯುತ್ತಿಲ್ಲ ಎಂಬುದು ಸರ್ಕಾರ ಗಂಭೀರವಾಗಿ ಪರಿಗಣಿಸಿ ಚರ್ಚಿಸಬೇಕಿದೆ.

ಹಟ್ಟಿ ಚಿನ್ನದ ಗಣಿಯಲ್ಲಿ ಆಧುನಿಕ ಗಣಿಗಾರಿಕಾ ತಂತ್ರಜ್ಞಾನ, ಸ್ವಯಂಚಾಲಿತ ವ್ಯವಸ್ಥೆ, ಡೇಟಾ ವಿಶ್ಲೇಷಣೆ ಹಾಗೂ ಸುರಕ್ಷತಾ ತಂತ್ರಜ್ಞಾನಗಳಿಗೆ ಅವಕಾಶವಿದೆ. ಶಕ್ತಿನಗರದ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಡಿಜಿಟಲ್ ಮಾನಿಟರಿಂಗ್, ಕೃತಕ ಬುದ್ಧಿಮತ್ತೆ, ಇಂಧನ ದಕ್ಷತೆ ಮತ್ತು ಕೈಗಾರಿಕಾ ತಂತ್ರಜ್ಞಾನಗಳ ಬಳಕೆಯನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆಯಿದೆ.

ಸ್ಥಳೀಯ ಕೈಗಾರಿಕೆಗಳನ್ನೇ ಆಧಾರವಾಗಿಟ್ಟುಕೊಂಡು ರಾಯಚೂರಿನಲ್ಲಿ Mining Technology, Energy Technology, AgriTech ಹಾಗೂ Industrial Technology ಕ್ಷೇತ್ರಗಳಿಗೆ ಸಂಬಂಧಿಸಿದ ಸ್ಟಾರ್ಟ್‌ಅಪ್‌ಗಳನ್ನು ಬೆಳೆಸುವ ಪ್ರಯತ್ನ ನಡೆದರೆ ಜಿಲ್ಲೆಯ ಯುವಕರಿಗೆ ಸ್ಥಳೀಯವಾಗಿಯೇ ಹೊಸ ಅವಕಾಶಗಳು ಸೃಷ್ಟಿಯಾಗಬಹುದು.

ರಾಯಚೂರಿಗೆ ಪ್ರತ್ಯೇಕ ಗಮನ ಯಾವಾಗ?

ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಿ ರಾಜ್ಯದ ಇತರ ನಗರಗಳಲ್ಲೂ ಉದ್ಯೋಗ ಮತ್ತು ಹೂಡಿಕೆ ಸೃಷ್ಟಿಸುವುದೇ ‘Beyond Bengaluru’ ಪರಿಕಲ್ಪನೆಯ ಉದ್ದೇಶವಾಗಿದ್ದರೆ, ಈಗಾಗಲೇ ದೊಡ್ಡ ಕೈಗಾರಿಕಾ ಮತ್ತು ಇಂಧನ ಸಾಮರ್ಥ್ಯ ಹೊಂದಿರುವ ರಾಯಚೂರಿನಂತಹ ಜಿಲ್ಲೆಗಳಿಗೂ ಅದರ ಪ್ರಯೋಜನ ತಲುಪಬೇಕಿದೆ.

ಚಿನ್ನ ಕೊಡುವ ಜಿಲ್ಲೆ, ವಿದ್ಯುತ್ ಕೊಡುವ ಜಿಲ್ಲೆ, ಕೃಷಿಯಲ್ಲಿ ಮುಂಚೂಣಿಯಲ್ಲಿರುವ ಜಿಲ್ಲೆ. ಆದರೆ ಡಿಜಿಟಲ್ ಆರ್ಥಿಕತೆಯಲ್ಲಿ ಅವಕಾಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ಏಕೆ? ಎಂಬುದು ಜನತೆಯ ಯಕ್ಷಪ್ರಶ್ನೆ.

ಇದು ಕೇವಲ ರಾಯಚೂರಿನ ಯುವಕರ ಪ್ರಶ್ನೆಯಲ್ಲ. ಜಿಲ್ಲೆಯ ಕೈಗಾರಿಕಾ ಭವಿಷ್ಯ, ಉದ್ಯೋಗ ಸೃಷ್ಟಿ ಮತ್ತು ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಪ್ರಶ್ನೆಯಾಗಿದೆ. ‘Beyond Bengaluru’ಯ ಮುಂದಿನ ಹಂತದಲ್ಲಿ ರಾಯಚೂರಿಗೂ ಸೂಕ್ತ ಸ್ಥಾನಮಾನ ನೀಡುವ ಮೂಲಕ ಜಿಲ್ಲೆಯಲ್ಲಿರುವ ಕೈಗಾರಿಕಾ ಶಕ್ತಿಯನ್ನು ತಂತ್ರಜ್ಞಾನ ಮತ್ತು ಉದ್ಯೋಗದ ಶಕ್ತಿಯೊಂದಿಗೆ ಹೊಂದಿದೆ.

Rafi
ರಫಿ ಗುರುಗುಂಟ
+ posts

ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಪೋಸ್ಟ್ ಹಂಚಿಕೊಳ್ಳಿ:

ರಫಿ ಗುರುಗುಂಟ
ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಫುಟ್‌ಪಾತ್ ನಿರ್ಮಿಸದಿದ್ರೆ, ನಾವೇ ಧರಣಿ‌ ಕೂರ್ತೀವಿ; BJP ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ವಾರ್ನಿಂಗ್!

ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಮೀಪದ ಮಥುರಾ ರಸ್ತೆಯಲ್ಲಿ ಪಾದಚಾರಿಗಳು...

ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ನೀತಿ ಜಾರಿ: ಆದೇಶ ಪಾಲಿಸದ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ಶಾಲೆಗಳಲ್ಲಿ ಓದುವ ಹೆಣ್ಣುಮಕ್ಕಳಿಗೆ ಮೂಲಭೂತ ಋತುಚಕ್ರ ನೈರ್ಮಲ್ಯ ಸೌಲಭ್ಯಗಳು ಮತ್ತು ಉಚಿತ...

ಭಾಲ್ಕಿ | ನಿಟ್ಟೂರ(ಬಿ) ಗ್ರಾಮದಲ್ಲಿ ನೈರ್ಮಲ್ಯ‌, ಶುದ್ಧ ನೀರು ಮರೀಚಿಕೆ!

ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದ 2ನೇ ವಾರ್ಡ್‌ನಲ್ಲಿ ಸ್ವಚ್ಛತೆ ಹಾಗೂ ಮೂಲಸೌಕರ್ಯಗಳ...

ಬೀದರ್‌ | ಪಶು ವೈದ್ಯಕೀಯ ವಿವಿ ಪ್ರಭಾರ ಕುಲಪತಿಯಾಗಿ ಎ.ಟಿ.ರಾಮಚಂದ್ರ ನಾಯ್ಕ ಅಧಿಕಾರ ಸ್ವೀಕಾರ

ಬೀದರ್‌ ಹೊರವಲಯದ ನಂದಿನಗರದಲ್ಲಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ...