ರಾಯಚೂರು ನಗರಸಭೆ ಸ್ವಚ್ಚತಾ ವಿಭಾಗದ ಹೊರಗುತ್ತಿಗೆ ನೌಕರರು ಹಾಗೂ ನಗರಸಭೆ ಸಿಬ್ಬಂದಿಗಳು ಸ್ವಯಂಪ್ರೇರಿತರಾಗಿ ನಗರದ ವಾರ್ಡ್ 20, 23, 26ರಲ್ಲಿ ಸ್ವಚ್ಚತಾ ಅಭಿಯಾನ ನಡೆಸಿದ್ದಾರೆ.
ಪ್ರತಿ ಭಾನುವಾರ ಸ್ವಚ್ಛತಾ ಕಾರ್ಯ ನಡೆಸುವ ಯೋಜನೆ ಹಾಕಿಕೊಂಡಿರುವ ನೌಕರರು ನಿನ್ನೆ (ಸೆ.3) ಎರಡನೇ ವಾರದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ನಗರ ಕಸ ವಿಲೇವಾರಿ ಮಾಡಲು ಎಲ್ಲ ಸಿಬ್ಬಂದಿಗಳು ಸೇರಿ ವಿವಿಧ ವಾರ್ಡ್ಗಳಲ್ಲಿ ಕಸವನ್ನು ತೆರವುಗೊಳಿಸಿದ್ದಾರೆ. ತರಕಾರಿ ಮಾರುಕಟ್ಟೆ, ಐಯಬವಾಡಿ ಬಳಿ ಶಾಲೆ ಸೇರಿದಂತೆ ವಿವಿಧೆಡೆ ಸಂಗ್ರಹವಾಗಿದ್ದ ಕಸವನ್ನು ವಿಲೇವಾರಿ ಮಾಡಿದ್ದಾರೆ. ಸಿಬ್ಬಂದಿಗಳ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.