ರಾಯಚೂರು | ಸ್ಲಂ ನಿವಾಸಿಗಳ ನಿವೇಶನ ಅಭಿವೃದ್ಧಿಪಡಿಸಲು ಅಧಿಕಾರಿಗಳ ನಿರ್ಲಕ್ಷ್ಯ; ಜಿಲ್ಲಾಧಿಕಾರಿ ಕಿಡಿ

Date:

Advertisements

ಸ್ಲಂ ನಿವಾಸಿಗಳಿಗೆ ನಿವೇಶನಕ್ಕಾಗಿ ಭೂಮಿ ಮಂಜೂರು ಮಾಡಿದ್ದು, ಹಕ್ಕುಪತ್ರಗಳನ್ನು ವಿತರಣೆ ಮಾಡಿದೆ, ಆದರೆ ನಿವೇಶನ ಅಭಿವೃದ್ಧಿಪಡಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ನಗರಸಭೆ ಪೌರಾಯುಕ್ತ, ಜೆಇ ಮತ್ತು ಎಇಇ ವಿರುದ್ಧ ರಾಯಚೂರು ಜಿಲ್ಲಾಧಿಕಾರಿ ಎಲ್ ಚಂದ್ರಶೇಖರ ನಾಯಕ ಕಿಡಿ ಕಾರಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಸ್ಲಂ ಬಡಾವಣೆಯಲ್ಲಿ ವಾಸಿಸುವ ನಿವಾಸಿಗಳಿಗೆ ಹಕ್ಕುಪತ್ರ ನೀಡಿದ್ದು, ಗುರುತಿಸಿದ ಜಮೀನು ಅಭಿವೃದ್ಧಿ ಪಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ಭಾವನೆ ತೋರಿದ್ದಾರೆ. ಉಸ್ತುವಾರಿ ಸಚಿವರು ಸೂಚಿಸಿದರೂ ಈವರೆಗೆ ಕೆಲಸ ಮಾಡದೇ ಇರುವುದರಿಂದ ಅಧಿಕಾರಿಗಳನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡರು.

2017ರಲ್ಲಿ 518, 929/2, 726/722 ಈ ಸರ್ವೆ ನಂಬರ್‌ಗಳು ಮಂಜೂರು ಆಗಿದ್ದು, ನಿವೇಶನ ಹಕ್ಕು ಪತ್ರ ಪಡೆದ ನಿವೇಶನ ರಹಿತರಿಗೆ ಗುರುತಿಸಿದ ಭೂಮಿಯಲ್ಲಿ ನಿವೇಶನ ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಹಾಗೂ ನಿವೇಶನ ಅಭಿವೃದ್ಧಿಪಡಿಸಲು ಕಳೆದ 28 ದಿನಗಳ ಹಿಂದೆಯೇ ಸೂಚನೆ ನೀಡಲಾಗುತ್ತು. ಸ್ಥಳಕ್ಕೆ ತೆರಳಿ ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಕ್ಕೆ ಅವರ ವಿರುದ್ಧ ಕಿಡಿಕಾರಿದ್ದಾರೆ.

Advertisements

2014ರಲ್ಲಿ ನಿವಾಸಿಗಳಿಗೆ ಹಕ್ಕುಪತ್ರ ನೀಡಿದ್ದು, ಈ ಬಗ್ಗೆ ನಿವೇಶನ ನಿರ್ಮಾಣಕ್ಕೆ ಪ್ರದೇಶ ಗುರುತು ಮಾಡಿಕೊಡಲು ನಿರ್ಲಕ್ಷ್ಯ ವಹಿಸಲಾಗಿದೆ. 4 ಸರ್ವೆ ನಂಬರ್‌ಗಳಲ್ಲಿ ಹಕ್ಕುಪತ್ರ ನೀಡಿದ್ದು ಇನ್ನುಳಿದ 230 ಹಕ್ಕು ಪತ್ರ ಬಾಕಿ ಇದೆ. 581 ಸರ್ವೆ ನಂಬರ್‌ನಲ್ಲಿ ಅತಿಕ್ರಮವಾಗಿದ್ದು, ತೆರವುಗೊಳಿಸಲು ಸೂಚಿಸಿದ್ದು, ಅತಿಕ್ರಮ ನಿವೇಶನದಲ್ಲಿ ಫಲಾನುಭವಗಳ ಜಾಗವನ್ನು ಗುರುತಿಸಿ ಪಟ್ಟಿ ನೀಡಲು ತಿಳಿಸಿದರು.

ನಗರಸಭೆಯಿಂದ ಹಕ್ಕು ಪತ್ರ ನೀಡಿದ ಎಲ್ಲ ನಿವೇಶನಗಳಿಗೆ ಖಾತಾ ಮಾಡಿಸಿಕೊಳ್ಳಲು ನಗರಸಭೆ ಆಯುಕ್ತರಿಗೆ ಸೂಚಿಸಿದರು.

“ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸುವ 2770 ಮನೆಗಳಿಗೆ ₹160 ಕೋಟಿ ಅನುದಾನ ಟೆಂಡರ್ ಆಗಿದ್ದು, ಈ ಪೈಕಿ 300 ಮನೆಗಳು ಆಗಿವೆ. 1050 ಫಲಾನುಭವಗಳಿಗೆ ಲೋನ್ ಆಗಿದೆ, ಗುತ್ತಿಗೆದಾರರು ಉಪಗುತ್ತಿಗೆ ನೀಡದೆ ತಾವೇ ನಿರ್ಮಾಣ ಮಾಡಬೇಕು. ಶೇ.10 ರಷ್ಟು ವಂತಿಗೆ ನೀಡಿದ ಫಲಾನುಭವಗಳು ಮತ್ತು ವಂತಿಕೆ ನೀಡದೇ ಇರುವ ಫಲಾನುಭವಿಗಳ ಪಟ್ಟಿ ತಯಾರಿಸಿ ನೀಡಬೇಕು” ಎಂದರು.

2018ರಲ್ಲಿ ಸ್ಲಂ ನಿವಾಸಿಗಳಿಗೆ 500 ಮನೆಗಳು ಮಂಜೂರಾಗಿವೆ. ಇವುಗಳಲ್ಲಿ 467 ಮನೆಗಳು ಪೂರ್ಣಗೊಂಡಿವೆ. ಉಳಿದ 33 ಮನೆಗಳು ಬಾಕಿ ಇದ್ದು, ಬಾಕಿ ಮನೆಗಳನ್ನು ಯಾಕೆ ನಿರ್ಮಾಣ ಮಾಡಿಲ್ಲವೆಂದು ಪ್ರಶ್ನಿಸಿದರು.

“467 ಮನೆಗಳಿಗೆ ಲೋನ್ ಆಗಿದ್ದರೆ, 33 ಮನೆಗಳಿಗೆ ಯಾಕೆ ಮಾಡಿಲ್ಲ. ಬಾಕಿ ಇರುವ ಮನೆಗಳ ನಿರ್ಮಾಣ ಪೂರ್ಣಗೊಳಿಸಬೇಕು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ನಿಗಮ-ಮಂಡಳಿ ಅಧ್ಯಕ್ಷರಿಗೆ ಸಂಪುಟ ಸ್ಥಾನಮಾನ; ಪಿಐಎಲ್‌ ದಾಖಲಿಸುವುದಾಗಿ ಎಚ್ಚರಿಕೆ

ಈ ಸಂದರ್ಭದಲ್ಲಿ ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ, ಯೋಜನಾಧಿಕಾರಿ ಜಗದೀಶ ಗಂಗಣ್ಣವರ್,ಸ್ಲಂ ಬೋರ್ಡ್ ಅಧಿಕಾರಿಗಳು, ಗುತ್ತಿಗೆದಾರ ಈರಣ್ಣ ಹಾಗೂ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯ ಜನಾರ್ಧನ ಹಳ್ಳಿಬೆಂಚಿ, ಅನಿಲ್ ಕುಮಾರ ಸೇರಿದಂತೆ ಇತರರು ಇದ್ದರು.

ವರದಿ : ಹಫೀಜುಲ್ಲ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಗಣೇಶ ಚತುರ್ಥಿ ಪ್ರಯುಕ್ತ 265 ಹೆಚ್ಚುವರಿ ಸಾರಿಗೆ ಸೌಲಭ್ಯ

ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ...

ಗದಗ | ಆಗಸ್ಟ್ 25ಕ್ಕೆ ಲೋಕಾಯುಕ್ತ ಜನ ಸಂಪರ್ಕ ಸಭೆ

ಸಾರ್ವಜನಿಕ ಕುಂದು-ಕೊರತೆಗಳ ಅಹವಾಲು ಸ್ವೀಕರಿಸಲು ಆಗಸ್ಟ್ 25 ಸೋಮವಾರದಂದು  ಗದಗ ಶಿರಹಟ್ಟಿ...

ಬೀದರ್‌ | ಅತಿವೃಷ್ಟಿ : ತ್ವರಿತ ಬೆಳೆ ಹಾನಿ ಪರಿಹಾರಕ್ಕೆ ಕಿಸಾನ್‌ ಸಭಾ ಒತ್ತಾಯ

ಮೇ ತಿಂಗಳಿಂದ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಉದ್ದು, ಹೆಸರು, ತೊಗರಿ ಸೇರಿದಂತೆ ಹಲವು...

ಚಿಕ್ಕಬಳ್ಳಾಪುರ | ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಿ: ಹಿರಿಯ ನ್ಯಾ. ಶಿಲ್ಪಾ

ಜಾಗತೀಕರಣ ಯುಗದಲ್ಲಿ ನಮ್ಮ ಜಾಗೃತಿ ನಮಗೆ ಗುರುವಾಗಬೇಕು. ಪೋಷಕರು ಮಕ್ಕಳನ್ನು...

Download Eedina App Android / iOS

X