ರಾಯಚೂರು | ಶುದ್ಧ ನೀರಿನ ಘಟಕಗಳ ಕಾರ್ಯಾಚರಣೆ ಸ್ಥಗಿತ

Date:

Advertisements

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕು ಗಲಗ ಗ್ರಾಮದಲ್ಲಿ ನಾಲ್ಕು ಶುದ್ಧ ಕುಡಿಯುವ ನೀರಿನ ಘಟಕವಿದ್ದರೂ, ಒಂದೂ ಕೂಡ ಕಾರ್ಯಾಚರಣೆಯಲ್ಲಿಲ್ಲ.

ಜಿಲ್ಲೆಯ ಜನರು ಕುಡಿಯುವ ನೀರಿಗಾಗಿ ಬೇಸಿಗೆ ಕಾಲದಲ್ಲಿ ಸಮಸ್ಯೆ ಎದುರಾಗುತ್ತದೆ. ಬೇಸಿಗೆ ಕಾಲದಲ್ಲಿ ಕಾಲುವೆ ನೀರನ್ನು ಬಂದ್ ಮಾಡಲಾಗುತ್ತದೆ. ಹಾಗಾಗಿ ಅಕ್ಕಪಕ್ಕ ಬೋರ್‌ವೆಲ್ ಇದ್ದವರ ಮನೆಗೆ ಹೋಗಿ ನೀರು ತೆಗೆದುಕೊಂಡು ಬರುವ ಸ್ಥಿತಿಯಿದೆ. ಪ್ರಸ್ತುತವಾಗಿ ಮನೆಯ ಮುಂದೆ ಖಾಸಗಿ ನೀರಿನ ಗಾಡಿ ಬರುತ್ತದೆ. ಸ್ಥಳೀಯರು ಅದನ್ನು ತುಂಬಿಕೊಂಡು ಬಳಸುತ್ತಾರೆ.

ಗ್ರಾಮದಲ್ಲಿ ನಾಲ್ಕು ಶುದ್ದ ನೀರಿನ ಘಟಕ 2010 ಹಾಗೂ 2012ರಲ್ಲಿ ಉದ್ಘಾಟನೆ ಮಾಡಲಾಗಿತ್ತು. ಕೆಲವು ವರ್ಷಗಳವರಗೆ ಕಾರ್ಯಾಚರಣೆಯಲ್ಲಿತ್ತು. ಬಳಿಕ ಸರಿಯಾಗಿ ನಿರ್ವಹಣೆ ಇಲ್ಲದ ಕಾರಣ ಹದಗೆಟ್ಟಿವೆ. ಸುಮಾರು ನಾಲ್ಕು ವರ್ಷಗಳು ಕಳೆದರೂ ಕೂಡ ಒಂದೂ ಚಾಲ್ತಿಯಲ್ಲಿಲ್ಲದಿರುವುದು ಕಂಡುಬಂದಿದೆ.

Advertisements

ಕಳೆದ ಕೆಲವು ದಿನಗಳ ಹಿಂದೆ ಇದೇ ತಾಲೂಕಿನ ಕೆಲವು ಭಾಗಗಳಲ್ಲಿ ಕಲುಷಿತ ನೀರು ಕುಡಿದು ಅಸ್ವಸ್ಥರಾಗಿ ಸಾವನ್ನಪ್ಪಿರುವುದು ದುರಂತವೇ ಸರಿ.

ಸ್ಥಳೀಯ ನಿವಾಸಿ ಶಿವನಗೌಡ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಗ್ರಾಮದಲ್ಲಿ 4 ಶುದ್ಧ ಕುಡಿಯುವ ನೀರಿನ ಘಟಕಗಳು ಇವೆ. ಕಳೆದ ನಾಲ್ಕೈದು ವರ್ಷಗಳಿಂದ ಹಾಳುಬಿದ್ದಿವೆ” ಎಂದು ತಿಳಿಸಿದರು.

“ಪಂಚಾಯತ್ ಅಧಿಕಾರಿಗಳನ್ನು ಕೇಳಿದರೆ, ಇದು ನಮ್ಮ ಪಂಚಾಯತ್ ಅಧೀನಕ್ಕೆ ಬರುವುದಿಲ್ಲವೆಂದು ಹೇಳುತ್ತಾರೆ. ಈ ಸಮಸ್ಯೆ ಬಗ್ಗೆ ನಾವು ಯಾರಿಗೆ ತಿಳಿಸಬೇಕು, ಸಂಬಂಧಪಟ್ಟವರು ಯಾರು ಎಂಬುದೂ ನಮಗೆ ತಿಳಿದಿಲ್ಲ. ಗ್ರಾಮದ ಒಂದು ನೀರಿನ ಘಟಕ ಶಾಲೆಯ ಆವರಣದಲ್ಲಿ ಇರುವುದರಿಂದ ಅದನ್ನು ಊರಿನ ಜನರೇ ಬಂದ್ ಮಾಡಿದ್ದಾರೆ. ಶಾಲೆಯ ಮಕ್ಕಳು ಹೋಗುವಾಗ, ಬರುವಾಗ ಕಾಲು ಜಾರಿ ಬೀಳುತ್ತವೆಂಬ ಕಾರಣಕ್ಕೆ ಆವರಣದಲ್ಲಿರುವ ನೀರಿನ ಘಟಕವನ್ನು ಬಂದ್‌ ಮಾಡಲಾಗಿದೆ. ಇನ್ನೂ ಮೂರು ನೀರಿನ ಘಟಕಗಳನ್ನು ಆದಷ್ಟು ಬೇಗ ಸರಿಪಡಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಗ್ರಾಮದ ಜನರು ಸೇರಿ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿದ್ದೀರಾ? ಜಗಳೂರು ಸಂತೆಯಲ್ಲಿ ಬೀಡಾಡಿ ದನಗಳದೇ ವ್ಯಾಪಾರ, ಜನರ ಗೋಳು ಕೇಳುವವರಿಲ್ಲ

ಗಲಗ ಗ್ರಾಮ ಪಂಚಾಯತ್ ಪಿಡಿಒ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ನೀರಿನ ಘಟಕಗಳ ಟೆಂಡರ್ ವರ್ಕ್ ಮಾಡುವರು ಅದನ್ನು ಸರಿಯಾಗಿ ನಿರ್ವಹಿಸಬೇಕು. ಆದರೆ, ಅವರು ಬೇಕಾಬಿಟ್ಟಿ ಮಾಡಿ ಹೋಗಿದ್ದಾರೆ. ಎಲ್ಲವೂ ಹಾಳಾಗಿವೆ. ದೇವದುರ್ಗ ತಾಲೂಕಿನಲ್ಲಿ 120 ನೀರಿನ ಘಟಕಗಳು ಇವೆ. ಇದರ ಸಂಬಂಧ ಮೇಲಧಿಕಾರಿಗಳು ಸಭೆ ಕರೆದಿದ್ದಾರೆ. ಟೆಂಡರ್ ಮಾಲೀಕರ ಮೇಲೆ ಇದರ ಬಗ್ಗೆ ಚರ್ಚಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಹೇಳಿದರು.

?s=150&d=mp&r=g
ಮೊಹಮದ್ ರಫಿ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಗ್ರಾಮವನ್ನು ಪಟ್ಟಣ ಪಂಚಾಯತ್ ಮೇಲ್ದರ್ಜೆಗೆ ಏರಿಸಬಾರದು : ಗ್ರಾಮಸ್ಥರ ಪ್ರತಿಭಟನೆ

ಲಿಂಗಸೂಗೂರು ತಾಲ್ಲೂಕಿನ ಗುರುಗುಂಟ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆರಿಸಬಾರದು ಎಂದು ರಾಜ್ಯ...

ರಾಯಚೂರು | ಶೀಲಹಳ್ಳಿ ಸೇತುವೆ ಮುಳುಗಡೆ : ನಾಲ್ಕು ಗ್ರಾಮಕ್ಕೆ ಸಂಪರ್ಕ ಕಡಿತ

ಲಿಂಗಸುಗೂರು ತಾಲ್ಲೂಕಿನ ಶೀಲಹಳ್ಳಿ ಸೇತುವೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಮುಳುಗಿದ್ದು,...

ರಾಯಚೂರು | ನಿರಂತರ ಮಳೆ : ಸೂರ್ಯಕಾಂತಿ ಬೆಳೆಗೆ ಕೀಟ ಬಾಧೆ

ಜಿಲ್ಲೆಯಲ್ಲಿ ನಿರಂತರ ವಾರದಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಸೂರ್ಯಕಾಂತಿ ಬೆಳೆಗಾರರ...

ರಾಯಚೂರು | ಪಾಳುಬಿದ್ದ ದಾದಿಯರ ವಸತಿ ಗೃಹಗಳು; ಸ್ಥಳೀಯ ಆಡಳಿತದ ನಿರ್ಲಕ್ಷ್ಯ ಆರೋಪ

ರಾಯಚೂರಿನ ಸಿರವಾರ ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾಗಿರುವ ದಾದಿಯರ ವಸತಿ...

Download Eedina App Android / iOS

X