ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ಜೆಸ್ಕಾಂ ಕಚೇರಿಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ, ಕಿರುಕುಳ ತಡೆದು ತಪ್ಪಿಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕೆಪಿಟಿಸಿಎಲ್, ಜೆಸ್ಕಾಂ ಮಹಿಳಾ ನೌಕರರ ಸಂಘದ ನೇತೃತ್ವದಲ್ಲಿ ಹಲವು ಸಂಘಟನೆಗಳ ಕಾರ್ಯಕರ್ತರು 220ಕೆವಿ ಕೇಂದ್ರದ ಎದುರು ಧರಣಿ ನಡೆಸಿದರು.
“ರಾಯಚೂರು ಜಿಲ್ಲೆ ಸಿಂಧನೂರು ಮತ್ತು ರಾಯಚೂರಿನ ಕಚೇರಿಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಆದರೂ ಯಾರ ವಿರುದ್ದವೂ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಚೈತ್ರಾ ವಂಚನೆ ಪ್ರಕರಣ | ಉದ್ಯಮಿ ಪೂಜಾರಿ ವಿರುದ್ಧ ದೂರು ನೀಡಿದ್ದ ಅಭಿನವ ಹಾಲಶ್ರೀ
“220 ಕೆವಿ ಕೇಂದ್ರದಲ್ಲಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಕುರಿತು ಆಗಸ್ಟ್ 26ರಂದು ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ. ಎಇಇ ಶ್ರೀನಿವಾಸ ಎಂಬುವವರು ರಜೆ ಮೇಲೆ ಹೋಗಿ ಪುನಃ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಕೂಡಲೇ ಎಇಇ ಶ್ರೀನಿವಾಸ ಎಂಬಾತನನ್ನು ಅಮಾನತುಗೊಳಿಸಿ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದರು.
ಕೆಪಿಟಿಸಿಎಲ್‌ನ ಹಲವು ನೌಕರರ ಸಂಘದ ಪದಾಧಿಕಾರಿಗಳು, ಮಹಿಳಾ ಸಿಬ್ಬಂದಿಗಳು ಇದ್ದರು.