ವಾಜಪೇಯಿ ನಗರ ನಿವೇಶನ ಯೋಜನೆಯಲ್ಲಿ ಮಂಜೂರಾದ ನಿವೇಶನಗಳನ್ನು ಅಭಿವೃದ್ದಿಪಡಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕು ಎಂದು ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
“ನಗರದ ಹಲವು ಸ್ಲಂಗಳಲ್ಲಿ ವಾಸಿಸುವ ಸುಮಾರು ಜನರು ನಿವೇಶನ ಇಲ್ಲದೆ ಬಾಡಿಗೆ ಮನೆಯಲ್ಲಿ, ಟೆಂಟ್‌ಗಳಲ್ಲಿ ವಾಸಿಸುವ ಸ್ಥಿತಿ ನಿರ್ಮಾಣವಾಗಿದೆ. ವಾಜಪೇಯಿ ನಗರ ನಿವೇಶನ ಯೋಜನೆಯಲ್ಲಿ 2017ರಲ್ಲಿ ನಿವೇಶನ ಮಂಜೂರಾಗಿದ್ದು, ಸರ್ವೆ ನಂ 581, 929/2, 726/727 ರಲ್ಲಿ ಈವರೆಗೂ ಕೇವಲ ಹಕ್ಕುಪತ್ರ ವಿತರಿಸಿದ್ದಾರೆಯೇ ಹೊರತು ನಿವೇಶನ ಹಂಚಿಕೆ ಮಾಡಿಲ್ಲ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಮಲಪ್ರಭಾ ಅಚ್ಚುಕಟ್ಟು; 15 ದಿನಗಳ ಕಾಲ ಕುಡಿಯುವ ನೀರು ಪೂರೈಕೆ
“ಬಡವರಿಗೆ ಮಂಜೂರಾದ ಭೂಮಿಯನ್ನು ಭೂಗಳ್ಳರು ಅತಿಕ್ರಮಿಸಿಕೊಂಡಿದ್ದಾರೆ. ಕೂಡಲೇ ಸದರಿ ಜಮೀನನ್ನು ಸರ್ವೆ ನಡೆಸಿ ಚೆಕ್ ಬಂದಿ ಮಾಡಿ ಜಮೀನು ಅಭಿವೃದ್ದಿಪಡಿಸಿ ನಿವೇಶನ ಹಂಚಿಕೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ಅಧ್ಯಕ್ಷ ಜನಾರ್ಧನ ಹಳ್ಳಿಬೆಂಚಿ, ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಸೂರು, ನೂರ್‌ಜಾನ್, ಜಿ ರಾಜು, ವೆಂಕಟೇಶ ಭಂಡಾರಿ, ವಿರೇಶ, ಜಂಬಣ್ಣ ಸೇರಿದಂತೆ ಇತರರು ಇದ್ದರು.