ವಿದೇಶದಲ್ಲಿ ಅಪ್ರಾಪ್ತಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಆರೋಪಿ ಯೂಟ್ಯೂಬರ್ ಶಾಲು ಕಿಂಗ್ ಯಾನೆ ಮುಹಮ್ಮದ್ ಸಾಲಿಯನ್ನು ಕೇರಳದ ಪೊಲೀಸರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಮದುವೆಯ ಭರವಸೆ ನೀಡಿ, ವಿದೇಶದಲ್ಲಿ ಅಪ್ರಾಪ್ತಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ಎನ್ನಲಾಗಿದ್ದು, ಪೊಲೀಸರು ಆರೋಪಿ ಶಾಲು ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಕೇರಳದ ಕೊಯಿಲಾಂಡಿ ಪೊಲೀಸರು ಆತನನ್ನು ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಸಂದರ್ಭದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಕೊಯಿಲಾಂಡಿಯ ಅಪ್ರಾಪ್ತ ನೀಡಿದ ದೂರಿನ ಆಧಾರದ ಮೇಲೆ ಪೋಕೋ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕುಪ್ಪೆಪದವಿನಲ್ಲೊಂದು ಸೌಹಾರ್ದತೆಯ ಸಂಕೇತ; ಧರ್ಮ ಬದಿಗಿಟ್ಟು ಸೋದರತೆ ಸಾರಿದ ಮಸೀದಿ
2016 ರಲ್ಲಿ ವಿವಾಹವಾದ ಈತನಿಗೆ ಮೂವರು ಮಕ್ಕಳಿದ್ದಾರೆ. ಅಪ್ರಾಪ್ತ ಮತ್ತು ಆರೋಪಿ ಸಾಮಾಜಿಕ ಜಾಲತಾಣಗಳ ಮೂಲಕ ಆಪ್ತರಾಗಿದ್ದರು. ಬಳಿಕ, ಮದುವೆಯಾಗುವುದಾಗಿ ನಂಬಿಸಿ ವಿದೇಶದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿ ಮುಹಮ್ಮದ್ ಸಾಲಿ ಶಾಲು ಕಿಂಗ್ಸ್ ಮೀಡಿಯಾ ಮತ್ತು ಶಾಲು ಕಿಂಗ್ಸ್ ಬ್ಲಾಗ್ ಎಂಬ ಹೆಸರಿನ ಯೂಟ್ಯೂಬ್ ಚಾನೆಲ್ ಗಳನ್ನು ನಡೆಸುತ್ತಿದ್ದ.
ಇದನ್ನೂ ಓದಿ: ದ.ಕ. | ಪೆರಾಜೆ, ಕಡಬ ಭಾಗದಲ್ಲಿ ಕಾಡಾನೆಗಳ ಹಾವಳಿ; ರೈತರಲ್ಲಿ ಆತಂಕ
ಕಾರ್ಯಾಚರಣೆ ತಂಡದಲ್ಲಿ ಕೊಯಿಲಾಂಡಿ ಸ್ಟೇಷನ್ ಹೌಸ್ ಆಫೀಸರ್ ಶ್ರೀಲಾಲ್ ಚಂದ್ರಶೇಖರನ್, ಎಸ್‌ಐ ಆರ್‌ಸಿ ಬಿಜು, ಸಂತೋಷ್ ಲಾಲ್, ಕೆಪಿ ಗಿರೀಶ್, ಎಎಸ್‌ಐ, ವಿಜುವಾನಿಯಂಕುಲಂ, ಶ್ರೀಲತಾ ಸೇರಿದಂತೆ ಮತ್ತಿತರು ಇದ್ದರು.
