ತೀವ್ರ ಹೃದಯಾಘಾತದಿಂದ ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದ ವಿರಕ್ತ ಮಠದ ಸಿದ್ದರಾಮ ಮಹಾಸ್ವಾಮಿಗಳು (35) ಸೋಮವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ.
ಭಾನುವಾರ ರಟಕಲ್ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದಿದ್ದ ವಚನ ಸಂಗಮ ಕಾರ್ಯಕ್ರಮದಲ್ಲಿ ಶ್ರೀಗಳು ಭಾಗಿಯಾಗಿದ್ದರು. ರಾತ್ರಿ ಮಲಗಿದ್ದ ವೇಳೆ ಹೃದಯಘಾತ ಆಗಿದೆ, ಬೆಳಿಗ್ಗೆ ಎದ್ದು ಮಠದ ಕೆಲಸಗಾರರು ನೋಡಿದ್ದಾಗ ಸ್ವಾಮೀಜಿ ನಿಧನರಾಗಿದ್ದು ಕಂಡು ಬಂದಿದೆ.
ಸಿದ್ದರಾಮ ಶ್ರೀಗಳು ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೋಕಟನೂರ ಗ್ರಾಮದ ಪೂರ್ವಾಶ್ರಮ ಹೊಂದಿದ್ದವರು, ಕಳೆದ ಎಂಟು ವರ್ಷಗಳಿಂದ ರಟಕಲ್ ಮಠದ ಸಾರಥ್ಯ ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ದಾಳಿ ಮಾಡಿದ ಚಿರತೆಯನ್ನೇ ಕೊಂದ ಗ್ರಾಮಸ್ಥರು
ಶ್ರೀಗಳ ಅಂತ್ಯಕ್ರಿಯೆ ಭಾನುವಾರ ಸಂಜೆ 5 ಗಂಟೆಗೆ ಮಠದಲ್ಲಿ ನಡೆಯಲಿದೆ ಎಂದು ಮಠದ ಮೂಲಗಳಿಂದ ತಿಳಿದು ಬಂದಿದೆ.