ಶಿವಮೊಗ್ಗ ನಗರದ ಬೊಮ್ಮನಕಟ್ಟೆ ವಾರ್ಡ್‌ಗೆ ಆಧುನಿಕ ಚಿತಾಗಾರ ವ್ಯವಸ್ಥೆ ಕಲ್ಪಿಸಿಕೊಡುವಂತೆ ಆಗ್ರಹಿಸಿ ಎಸ್ ಬಂಗಾರಪ್ಪ ಅಭಿಮಾನಿಗಳ ಸಂಘವು ಮನವಿ ಸಲ್ಲಿಸಿದೆ.
ಶಿವಮೊಗ್ಗ ನಗರದ ವಾರ್ಡ್ ನಂಬರ್ 1 ಮತ್ತು 2 ಬೊಮ್ಮನಕಟ್ಟೆ ಸರ್ವೇ ನಂಬರ್ 114 ರಲ್ಲಿ 3 ಎಕರೆ ಜಾಗವಿದ್ದು, ಇಲ್ಲಿ ಸುಮಾರು 40 ರಿಂದ 50 ಸಾವಿರ ಜನರ ವಾಸವಿದ್ದು ಇಲ್ಲಿನ ನಿವಾಸಿಗಳಿಗೆ ಶವ ಸಂಸ್ಕಾರ ಮಾಡಲು ಯಾವುದೇ ರೀತಿಯ ಮೂಲ ಸೌಕರ್ಯವಿರುವುದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
“ಮಳೆಗಾಲ ಹಾಗೂ ಇನ್ನಿತರೆ ಹವಾಮಾನ ವೈಪರೀತ್ಯದ ಸಮಯದಲ್ಲಿ ಶವ ಸಂಸ್ಕಾರ ಮಾಡಲು ಪರದಾಡುವ ಪರಿಸ್ಥಿತಿ ಉಂಟಾಗಿರುತ್ತದೆ. ಇಲ್ಲಿನ ಜನಪ್ರತಿನಿಧಿಗಳು ಈ ವಿಚಾರಕ್ಕೆ ಸ್ಪಂದಿಸದೆ ಇರುವುದು ಶೋಚನಿಯ ಸಂಗತಿಯಾಗಿದೆ. ಹಾಗಾಗಿ ಇಲ್ಲಿಯ ಸ್ಮಶಾನಕ್ಕೆ ಮೀಸಲಾಗಿರುವ ಜಾಗಕ್ಕೆ ಆಧುನಿಕ ರೀತಿಯ ವಿದ್ಯುತ್ ಚೀತಾಗಾರ ಒದಗಿಸಿಕೊಡುವಂತೆ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ಎಸ್ ಸುಂದರೇಶ್ ಅವರಿಗೆ ಕಾಂಗ್ರೆಸ್ ಮುಖಂಡ ಮಾಲತೇಶ್ ಬೊಮ್ಮನಕಟ್ಟೆ ನೇತೃತ್ವದ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
