ನಿಲಯಪಾಲಕರ ನಕಲಿ ಸಹಿ ಬಳಸಿಕೊಂಡು ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಂಡಿರುವ ದೂರಿನ ಆಧಾರದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ.
ಚಿಂತಾಮಣಿ ತಾಲೂಕಿನ ಗಡಿಗವಾರಪಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿಯೋಜಿತ ಪ್ರಾಂಶುಪಾಲೆ ಎ ಆರ್ ಖುಬ್ರಾ ಮುಬೀನಾ ಅಮಾನತಾಗಿರುವ ಅಧಿಕಾರಿ.
ಇವರು ಈ ಹಿಂದೆ ಚಿಂತಾಮಣಿ ತಾಲೂಕಿನ ಕೆ.ರಾಗುಟ್ಟಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವ.ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ವಸತಿ ಶಾಲೆಯ ದಾಖಲೆಗಳನ್ನು ಹಸ್ತಾಂತರಿಸದೇ ಶಾಲೆಯ ಆಡಳಿತಕ್ಕೆ ತೊಂದರೆಯುಂಟು ಮಾಡಿದ್ದಾರೆ. ಅದಲ್ಲದೆ, ಈ ಶಾಲೆಯಿಂದ ವರ್ಗಾವಣೆಗೊಂಡ 20 ದಿನಗಳ ಬಳಿಕ ಪ್ರಾಂಶುಪಾಲರು ಮತ್ತು ನಿಲಯಪಾಲಕರ ನಕಲಿ ಸಹಿ ಬಳಸಿಕೊಂಡು ಸುಮಾರು 1.50ಲಕ್ಷ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಲಾಗಿದೆ.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ವಿಟಿಯು ಕಾಲೇಜು ವಿದ್ಯಾರ್ಥಿ ನೇಣಿಗೆ ಶರಣು
ದೂರಿನ ಆಧಾರದಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ಕಾಂತರಾಜ್ ಅವರು ಎ ಆರ್ ಖುಬ್ರಾ ಮಬೀನಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.