ಚಂದ್ರನ ಮೇಲೆ ಮೂರು ಮೀಟರ್ ಚಲಿಸುವಾಗಲೇ ಪಥ ಬದಲಿಸಿದ ‘ಪ್ರಗ್ಯಾನ್ ರೋವರ್’: ‘ಇಸ್ರೋ’ ಹೇಳಿದ್ದೇನು?

Date:

Advertisements
  • ಚಂದ್ರನ ಮೇಲೆ ಪ್ರಗ್ಯಾನ್ ರೋವರ್‌ಗೆ ಎದುರಾದ 4 ಅಡಿ ಚದರ ವಿಸ್ತೀರ್ಣದ ಗುಂಡಿ
  • ಮಾರ್ಗ ಬದಲಿಸಿ, ಹೊಸ ಮಾರ್ಗದ ಬಗ್ಗೆ ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡ ಇಸ್ರೋ

ಆ.27ರಂದು ಚಂದ್ರನ ಮೇಲೆ ನಿರ್ಧರಿಸಲಾಗಿದ್ದ ಪಥದಲ್ಲಿ ಕೇವಲ ಮೂರು ಮೀಟರ್ ಚಲಿಸುತ್ತಿರುವಾಗಲೇ ಎದುರಿನಲ್ಲಿ ಗುಂಡಿಯೊಂದು ಎದುರಾದ ಪರಿಣಾಮ ‘ಪ್ರಗ್ಯಾನ್ ರೋವರ್’ ಪಥವನ್ನು ಬದಲಿಸಲಾಗಿದೆ.

ಈ ಕುರಿತಾಗಿ ಟ್ವಿಟ್ಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ), “ತನ್ನ ನಿರ್ಧರಿತ ಪಥದಲ್ಲಿ ಚಲಿಸುತ್ತಿರುವಾಗ ಸುಮಾರು 4 ಮೀಟರ್ ಸುತ್ತಳತೆ ಹೊಂದಿರುವ ಗುಂಡಿಯೊಂದು ಎದುರಾಗಿದೆ. ಈ ಬಗ್ಗೆ ರೋವರ್ ನೀಡಿದ ಮಾಹಿತಿಯನ್ನಾಧರಿಸಿ ಅದರ ಪಥ ಬದಲಾವಣೆ ಮಾಡಲಾಗಿದ್ದು, ಮರುಪಡಿಸಲಾದ ಹೊಸ ಮಾರ್ಗದಲ್ಲಿ ಚಲಿಸಲು ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಿಳಿಸಿದೆ.

ಆ.27ರಂದು ಇಸ್ರೋ ನಿಯಂತ್ರಣ ಕೊಠಡಿಗೆ ಪ್ರಗ್ಯಾನ್ ರೋವರ್ ತನಗೆ ಗುಂಡಿಯೊಂದು ಎದುರಾಗಿರುವ ಕುರಿತಾಗಿ ಮಾಹಿತಿ ನೀಡಿತ್ತು. ಆ ನಂತರ ಸಕ್ರಿಯರಾದ ತಜ್ಞರ ತಂಡ, ರೋವರ್‌ಗೆ ಹೊಸ ಮಾರ್ಗವನ್ನು ಸೂಚಿಸಿದೆ. ನಂತರ ರೋವರ್‌ನ ಬದಲಾದ ಮಾರ್ಗ ಹಾಗೂ ದಾರಿಯಲ್ಲಿ ಕಂಡು ಬಂದ ಕುಳಿಯ ಫೋಟೋವನ್ನು ಇಸ್ರೋ ಹಂಚಿಕೊಂಡಿದೆ.

ಈ ಮೂಲಕ ಇಸ್ರೋ ವಿಜ್ಞಾನಿಗಳು, ‘ಪ್ರಗ್ಯಾನ್ ರೋವರ್’ ಎಷ್ಟು ನಿಖರವಾಗಿ ಹಾಗೂ ಎಚ್ಚರಿಕೆಯಿಂದ ಚಂದ್ರನ ಮೇಲೆ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ.

Advertisements
Bose Military School

ಆರು-ಚಕ್ರಗಳ, ಸೌರ-ಚಾಲಿತ ‘ಪ್ರಗ್ಯಾನ್ ರೋವರ್’ ಈಗಾಗಲೇ ಚಂದ್ರ ಮೇಲೆ ತನ್ನ ಅಧ್ಯಯನ ಆರಂಭಿಸಿದೆ. ಇದು ಮ್ಯಾಪ್ ಮಾಡದ ಪ್ರದೇಶದಲ್ಲೂ ಸುತ್ತುವ ಸಾಮರ್ಥ್ಯವನ್ನೂ ಕೂಡ ಹೊಂದುವಂತೆ ಇದನ್ನು ತಯಾರು ಮಾಡಲಾಗಿದೆ.

ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಮಾಡ್ಯೂಲ್‌ನಲ್ಲಿರುವ ಪೇಲೋಡ್‌ನಿಂದ ಅಳೆಯಲಾದ ಚಂದ್ರನ ಮೇಲ್ಮೈಯಲ್ಲಿರುವ ತಾಪಮಾನ ವ್ಯತ್ಯಾಸದ ಗ್ರಾಫ್ ಅನ್ನು ಇಸ್ರೋ ನಿನ್ನೆ ಬಿಡುಗಡೆ ಮಾಡಿತ್ತು.

50 ಸೆಲ್ಸಿಯಸ್​ನಿಂದ 10 ಸೆಲ್ಸಿಯಸ್​ವರೆಗೆ ಹಗಲಿನ ತಾಪಮಾನ ಇದೆ ಎಂದು ವರದಿ ಕಳುಹಿಸಿಕೊಟ್ಟಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಚಂದ್ರನ ಮೇಲಿರುವ ತಾಪಮಾನದ ಮಾಹಿತಿ ಬಹಿರಂಗಗೊಂಡಿದೆ.

ಇದನ್ನು ಓದಿದ್ದೀರಾ? ಚಂದ್ರಯಾನ-3 ಯಶಸ್ವಿ ಬೆನ್ನಲ್ಲೇ ಮಹತ್ವದ ಪ್ರಕಟಣೆ ಹೊರಡಿಸಿದ ಇಸ್ರೋ

ಭೂಮಿಯ 14 ದಿನಗಳು ಚಂದ್ರನ ಒಂದು ದಿನಕ್ಕೆ ಸಮ ಎಂದು ಲೆಕ್ಕ ಹಾಕಿರುವ ಇಸ್ರೋ ವಿಜ್ಞಾನಿಗಳು, ಸಂಪೂರ್ಣ ಅಧ್ಯಯನಕ್ಕೆ ಇನ್ನೂ 10 ದಿನಗಳು ಬಾಕಿ ಇವೆ. ಕಳೆದ ಆಗಸ್ಟ್ 23ರಂದು ಚಂದ್ರನ ಮೇಲೆ ವಿಕ್ರಮ್‌ ಲ್ಯಾಂಡರ್‌ ಅನ್ನು ಯಶಸ್ವಿಯಾಗಿ ‘ಸಾಫ್ಟ್‌ ಲ್ಯಾಂಡಿಂಗ್‌’ ಮಾಡಲಾಗಿತ್ತು.

ಭೂಮಿಯ 14 ದಿನಗಳ ಬಳಿಕ ಚಂದ್ರನಲ್ಲಿ ರಾತ್ರಿ ಸಂಭವಿಸಲಿದ್ದು, ಆಗ ಕೊರೆಯುವ ಚಳಿ ಕಾರಣ ರೋವರ್‌ ಹಾಗೂ ಲ್ಯಾಂಡರ್‌ಗಳು ನಿಷ್ಕ್ರಿಯಗೊಳ್ಳಲೂಬಹುದು ಎಂದು ತಂತ್ರಜ್ಞರು ಅಂದಾಜಿಸಿದ್ದಾರೆ. ಆದರೂ ಆ ಬಳಿಕವೂ ರೋವರ್‌ ಹಾಗೂ ಲ್ಯಾಂಡರ್‌ ಸುಸ್ಥಿತಿಯಲ್ಲಿ ಇರುವ ನಿರೀಕ್ಷೆಯಿದೆ ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸೂರ್ಯನ ಬಗ್ಗೆ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಆದಿತ್ಯ ಎಲ್‌-1 ನೌಕೆಯನ್ನು ಇಸ್ರೋ ಸೆ.2ರಂದು ಬೆಳಗ್ಗೆ 11.50ಕ್ಕೆ ಆಂಧ್ರದ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Advertisements
Advertisements
Advertisements

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಬಳ್ಳಾಪುರ | ʼಬಯಲು ಸೀಮೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿʼ

ಸುಮಾರು ವರ್ಷಗಳಿಂದ ಬಯಲು ಸೀಮೆ ಜಿಲ್ಲೆಗಳಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಹೋರಾಟ...

ಉಡುಪಿ | ಜಗತ್ತಿನಾದ್ಯಂತ ಪ್ರತೀ ವರ್ಷ ನೂರಾರು ಮುದ್ರಣ ಪತ್ರಿಕೆಗಳು ಮುಚ್ಚಿಕೊಳ್ಳುತ್ತಿವೆ – ರಾಜಾರಾಂ ತಲ್ಲೂರು

ಕೃತಕ ಬುದ್ದಿಮತ್ತೆ ಸುದ್ದಿಮನೆಯ ಒಳಗೆ ಪ್ರವೇಶಿಸಿದರೆ, ಭಾಷಾಂತರ, ಸುದ್ದಿ, ಸಾರಾಂಶ, ವಿವಿಧ...

ಹಾವೇರಿ | ತಹಶೀಲ್ದಾರ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ

ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕು ತಹಶೀಲ್ದಾರ ಕಚೇರಿಗೆ ಮಂಗಳವಾರ ಜಿಲ್ಲಾಧಿಕಾರಿ ಡಾ....

Download Eedina App Android / iOS

X