ರೌಡಿ ಶೀಟರ್ ಪರಮೇಶ್ ಎಂಬಾತ ಸಾಮಾಜಿಕ ಕಾರ್ಯಕರ್ತ, ದಲಿತ ಮುಖಂಡ ಶ್ರೀನಿವಾಸ್ ಮತ್ತು ಸ್ನೇಹಿತನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲು ಯತ್ನಿಸಿರುವುದಾಗಿ ಆರೋಪ ವ್ಯಕ್ತಾವಾಗಿದ್ದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಬೆಳತೂರು ಪರಮೇಶ್ ಎಂಬಾತನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನಗರದ ಬೆಳತೂರಿನಲ್ಲಿ ಜನವರಿ 28ರಂದು ಕೇಸ್ ವಿಚಾರವಾಗಿ ರೌಡಿ ಶೀಟರ್ ಪರಮೇಶ್ ಎಂಬಾತ ದಲಿತ ಮುಖಂಡ ಶ್ರೀನಿವಾಸ್ ಮತ್ತು ಅವರ ಸ್ನೇಹಿತನ ಮೇಲೆ ಕಾರು ಹತ್ತಿಸಿ ಕೊಲೆ ಯತ್ನ ನಡೆಸಿದ್ದರು. ಅಲ್ಲದೆ ಸಾರ್ವಜನಿಕವಾಗಿ ಕಲ್ಲು ತೂರಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಾಗಿ ಆರೋಪ ವ್ಯಕ್ತವಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೀದರ್ | 9ನೇ ತರಗತಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ಶಿಕ್ಷಕ, ಶಿಕ್ಷಕಿ ಅಮಾನತು
ಕಾಡುಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳತೂರಿನಲ್ಲಿ ಘಟನೆ ನಡೆದಿದ್ದು, ದಲಿತ ಮುಖಂಡ ಶ್ರೀನಿವಾಸ್ ಅವರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ರೌಡಿ ಶೀಟರ್ ಬೆಳತೂರು ಪರಮೇಶ್ ಎಂಬಾತನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ.
