ಶಿಕಾರಿಪುರ, ತಾಲೂಕಿನ ಕಾಳೇನಹಳ್ಳಿ ಗ್ರಾಮದ ಒಂದು ವರ್ಷ ಎಂಟು ತಿಂಗಳ ಪುಟಾಣಿ ವಿಭಾ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರ್ಪಡೆ ಗೊಂಡಿರುವುದಾಗಿ ಮಗು ವಿಭಾಳ ತಂದೆ ಅಣ್ಣಪ್ಪ ಹಾಗೂ ತಾಯಿ ಶ್ವೇತ ತಿಳಿಸಿದ್ದಾರೆ.
ಸಂಸ್ಥೆ ನೆಡೆಸಿದ, ಜ್ಞಾಪಕ ಶಕ್ತಿ ಮತ್ತು ಕೌಶಲ್ಯ ಸಾಮರ್ಥ್ಯ ಇತ್ಯಾದಿ ಪರೀಕ್ಷಾರ್ಥದಲ್ಲಿ ಕೇವಲ ಒಂದು ವರ್ಷ ಎಂಟು ತಿಂಗಳ ಪುಟಾಣಿ, ವಿಭಾ, ದೇಹದ 15 ಬಿಡಿಭಾಗಗಳನ್ನು ಮತ್ತು 105 ಕ್ಕೂ ಅಧಿಕ ವಸ್ತುಗಳನ್ನು ಮತ್ತು ಶ್ಲೋಕವನ್ನು ಅತಿ ಕಡಿಮೆ ಸಮಯದಲ್ಲಿ ಗುರುತಿಸಿ ಹೇಳುವುದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಕಾರಣ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಾಧಕರ ಪಟ್ಟಿಯಲ್ಲಿ ಆಯ್ಕೆಯಾಗಿರುತ್ತಾಳೆ.