ಶಿವಮೊಗ್ಗ | ಜ.12ರಂದು ಸೌತ್ ಇಂಡಿಯನ್ ಅಕಾಡೆಮಿ ಸಂಸ್ಥೆಯ 18ನೇ ವಾರ್ಷಿಕೋತ್ಸವ

Date:

Advertisements

ಸೌತ್ ಇಂಡಿಯನ್ ಅಕಾಡೆಮಿ ಸಂಸ್ಥೆಯ 18ನೇ ವಾರ್ಷಿಕೋತ್ಸವದ ಪ್ರಯುಕ್ತ ಶಿವಮೊಗ್ಗ ನಗರದ ಬಿ ಎಚ್ ರಸ್ತೆಯಲ್ಲಿರುವ ತಮಿಳು ಶಾಲೆಯ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಲವು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ನಗರದ ಅಂಬೇಡ್ಕರ್ ಭವನದಲ್ಲಿ ಜನವರಿ 12ರಂದು ಸಂಜೆ 5 ಗಂಟೆಗೆ ಉಳಿದ ಕಾರ್ಯಕ್ರಮಗಳು ನಡೆಯಲಿವೆ.

ಈಗಾಗಲೇ ತಮಿಳು ಶಾಲೆಯ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಡಿಕೆ ಹೊಡೆಯುವ ಸ್ಪರ್ಧೆ, ಪಿ ಪಿ ಹೊಡೆಯುವ ಸ್ಪರ್ಧೆ ಮತ್ತು ಪೊಂಗಲ್ ಅಡುಗೆ ಮಾಡುವ ಸ್ಪರ್ಧೆ, ಕಂಠಪಾಠ, ಕ್ರೀಡೆ, ತಿರುಕುರುಳ್ ಅಧ್ಯಯನ ಸ್ಪರ್ಧೆ ಸೇರಿದಂತೆ ಇತರ ಸ್ಪರ್ಧೆಗಳನ್ನು ನಡೆಸಿದ್ದಾರೆ.

ಪ್ರತಿ ವರ್ಷ ಹೀಗೆ ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಸಂಸ್ಥೆ ಈ ವರ್ಷ ಅನೇಕ ಕಾರ್ಯಕ್ರಮ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದೇ ರೀತಿ ಜನವರಿ 11ರಂದು ಮಹಿಳೆಯರಿಗೆ ರಂಗೋಲಿ ಹಾಗೂ ಸಂಪ್ರದಾಯಿಕ ಪೊಂಗಲ್ ಸ್ಪರ್ಧೆ ಇಟ್ಟುಕೊಂಡಿದೆ. ಜನವರಿ 12ರ ಸಂಜೆ 5ಕ್ಕೆ ಶಿವಮೊಗ್ಗದ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

Advertisements
ಸೌತ್‌ ಇಂಡಿಯನ್‌ ಅಕಾಡೆಮಿ

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ತಮಿಳು ಚಲನಚಿತ್ರದ ಹಿನ್ನೆಲೆ ಗಾಯಕಿ “ಅಡ್ರಡ್ರಾ ನಾಕುಮುಖ” ಹಾಡಿನ ಪ್ರಖ್ಯಾತಿ ಕಲೆ ಮಾಮನಿ ‘ಚಿನ್ನ ಪೊನ್ನು’ರವರು ಮತ್ತು ತಂಡದವರಿಂದ ಸಂಗೀತ ರಸದೌತಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ತಮಿಳಿನ ಖ್ಯಾತ ಹಾಸ್ಯ ನಟರಾದ ಜ಼ೀ ತಮಿಳು ಚಾನೆಲ್‌ನ ಪುಗುಳ್ ಎಡ್ವಿನ್ ತಂಡದಿಂದ ಹಾಸ್ಯ ಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಸಚಿನ್‌ ಪಾಂಚಾಳ್ ಆತ್ಮಹತ್ಯೆ ಪ್ರಕರಣ : ರಾಜು ಕಪನೂರ್‌ ಸೇರಿ ಐವರ ಬಂಧನ

ಈ ಒಂದು ಕಾರ್ಯಕ್ರಮಕ್ಕೆ ಎಲ್ಲ ತಮಿಳು ಸಮುದಾಯದವರು ಭಾಗವಹಿಸುವಂತೆ ಕೋರಲಾಗಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರಲಿದೆ ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮದ ಆಯೋಜಕರು ಹಾಗೂ ತಮಿಳು ಸಮುದಾಯದ ಮುಖಂಡರು ಇಂದಿನ ಕಾರ್ಯಕ್ರಮದಲ್ಲಿ ಸೌತ್ ಇಂಡಿಯನ್ ಅಕಾಡೆಮಿ ಅಧ್ಯಕ್ಷ ದೊರೆ ಚಿನ್ನಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಆನಂದ್ ಎ ಎನ್ ನೇತೃತ್ವದಲ್ಲಿ ತಮಿಳು ಸಂಘದ ಸದಸ್ಯರು ಹಾಗೂ ಮುಖಂಡರುಗಳಾದ ಶಂಕರ್ ಭೂಪಾಲ್, ರವಿ ಆಚಾರ್, ಬುಲೆಟ್ ಮುರುಗನ್, ಮಸ್ತಾನ್, ಕುಮರೇಶ್, ಉದಯ್ ಇರಲಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ಅತಿಥಿ ಉಪನ್ಯಾಸಕರ ಕೊರತೆ: ತಿಂಗಳಾದರೂ ಆರಂಭವಾಗದ ತರಗತಿಗಳು 

"ರಾಜ್ಯದಲ್ಲಿ ಪದವಿ ಕಾಲೇಜಿನ ತರಗತಿಗಳು ಶುರುವಾಗಿ ತಿಂಗಳಾಗಿದೆ. ಎಲ್ಲ ಕಾಲೇಜಿನಲ್ಲೂ ಉಪನ್ಯಾಸಕರ...

ಚಿಕ್ಕಬಳ್ಳಾಪುರ | ಅಮ್ಮ ಎಜುಕೇಷನಲ್ ಅಂಡ್ ರೂರಲ್ ಡೆವಲಪ್‌ಮೆಂಟ್‌ ಟ್ರಸ್ಟ್‌ನ ವಾರ್ಷಿಕೋತ್ಸವ ಅಂಗವಾಗಿ ರಕ್ತದಾನ ಶಿಬಿರ

ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ಆಗಸ್ಟ್ 22ರ ಶುಕ್ರವಾರದಂದು ಅಮ್ಮ ಎಜುಕೇಷನಲ್...

ತುಮಕೂರು | ಅಲೆಮಾರಿಗಳನ್ನು ಬೀದಿ ಪಾಲು ಮಾಡಿದ ಕಾಂಗ್ರೆಸ್ ಸರ್ಕಾರ : ಎ. ನರಸಿಂಹಮೂರ್ತಿ

ಜಸ್ಟೀಸ್ ನಾಗಮೋಹನ್ ದಾಸ್ ಆಯೋಗವು ಅಲೆಮಾರಿ ಜಾತಿ ಗುಂಪಿಗೆ ನೀಡಿದ್ದ ಶೇ....

ಉತ್ತರ ಕನ್ನಡ | ಕೇಣಿ ಬಂದರು ಅಹವಾಲು ಸ್ವೀಕಾರ ಸಭೆ: ಹಣದ ಆಮಿಷವೊಡ್ಡಿ ಬೆಂಬಲ ಪಡೆಯುತ್ತಿರುವ ಆರೋಪ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಉದ್ದೇಶಿತ ಖಾಸಗಿ ಬಂದರು...

Download Eedina App Android / iOS

X