ಚಲಿಸುತ್ತಿದ್ದ ಖಾಸಗಿ ನಗರ ಸಾಗರಿಗೆ ಬಸ್‌ನಿಂದ ಬಿದ್ದು ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ನಗರದ ಮೈಲಾರೇಶ್ವರ ದೇವಸ್ಥಾನದ ಬಳಿ ಇಂದು ಬೆಳಗ್ಗೆ ನಡೆದಿದೆ.
ಯಶವಂತ್ (16) ಮೃತ ವಿದ್ಯಾರ್ಥಿ. ಗುರುಪುರದಿಂದ ನಗರದ ಎಟಿಎನ್‌ಸಿಸಿ ಕಾಲೇಜಿಗೆ ಬಸ್‌ನಲ್ಲಿ ಹೊರಟಿದ್ದ ಯಶವಂತ್ ಬಸ್‌ನ ಬಾಗಿಲ ಬಳಿಯೇ ಫುಟ್ ಬೋರ್ಡ್ ಮೇಲೆ ನಿಂತಿದ್ದ ಎನ್ನುವ ಮಾಹಿತಿ ಇದೆ. ಮೈಲಾರೇಶ್ವರ ದೇವಸ್ಥಾನದ ಬಳಿ ಸಡನ್ ಆಗಿ ಬ್ರೇಕ್ ಹಾಕಿದ ಕಾರಣ ಆಯತಪ್ಪಿ ಬಸ್ ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾನೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ದರ್ಪ; ಸಾರ್ವಜನಿಕರ ಆಕ್ರೋಶ
ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
