ಭಟ್ಕಳ ಮಾದರಿಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯನ್ನು ಭಯೋತ್ಪಾದಕ ಪ್ರದೇಶವನ್ನಾಗಿಸಲು ಉದ್ದೇಶಿಸಲಾಗಿತ್ತೆಂದು ಅರಾಫತ್ ಅಲಿ ಹೇಳಿರುವುದಾಗಿ ತಿಳಿದುಬಂದಿದೆ. ಆನತನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ.
ಯಾಸೀನ್ ಭಟ್ಕಳ್, ರಿಯಾಜ್ ಭಟ್ಕಳ ಹಾಗೂ ಇಕ್ಬಾಲರಿಂದ ಭಟ್ಕಳ ಉಗ್ರವಾದಕ್ಕೆ ಕುಖ್ಯಾತಿ ಪಡೆದಿತ್ತು. ಇದೇ ರೀತಿ ತೀರ್ಥಹಳ್ಳಿ ಮೂಲದವರಾಗಿರುವ ಮಾಜ್ ಮುನೀರ್, ಶಾರೀಕ್, ಅರಾಫತ್ ಅಲಿ, ಅಬ್ದುಲ್ ಮತೀನ್ ನಾಲ್ವರೂ ಕೂಡ ತೀರ್ಥಹಳ್ಳಿಯನ್ನು ಉಗ್ರರ ನೆಲೆಯಾಗಿಸಲು ಸಂಚು ರೂಪಿಸಿದ್ದರು. ಆ ಮೂಲಕ ತಾವು ʼತೀರ್ಥಹಳ್ಳಿ ಬ್ರದರ್ಸ್ʼ ಎಂದು ತಾವು ಹೆಸರಾಗಬೇಕೆಂದು ಬಯಸಿದ್ದರು ಎಂದು ಆರೋಪಿಸಲಾಗಿದೆ.
ಈ ನಾಲ್ವರೂ ತೀರ್ಥಹಳ್ಳಿ ಮೂಲದವರೇ ಆಗಿದ್ದಾರೆ. ಸದ್ಯ ಮೂವರ ಬಂಧನ ಆಗಿದ್ದು, ಅಬ್ದುಲ್ ಮತೀನ್ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ʼತೀರ್ಥಹಳ್ಳಿ ಬ್ರದರ್ಸ್ʼ ಕಾನ್ಸೆಪ್ಟ್ ಹುಟ್ಟು ಹಾಕಿದ್ದೇ ಅಬ್ದುಲ್ ಮತೀನ್ ಎಂದು ಹೇಳಲಾಗಿದೆ.
ಈ ಸುದ್ದಿ ಓದಿದ್ದೀರಾ? ತಮಿಳುನಾಡಿಗೆ ಕಾವೇರಿ ನೀರು ಬಿಡಲು ನೀಡಿರುವ ಆದೇಶ ರಾಜ್ಯಕ್ಕೆ ಪೆಟ್ಟು ನೀಡಿದೆ: ದೇವೇಗೌಡ
ಅಬ್ದುಲ್ ಮತೀನ್ ಈ ಹಿಂದೆ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಮಾಡಿಸಿದ್ದ. ಬಳಿಕ ಕದ್ರಿ ದೇವಸ್ಥಾನದಲ್ಲಿ ಸ್ಫೋಟ ನಡೆಸುವ ಗುರಿ ಹಾಕಿಕೊಂಡಿದ್ದ. ಆದರೆ ಮೊದಲ ಯತ್ನವೇ ವಿಫಲವಾಗಿದ್ದು, ದಾರಿ ಮಧ್ಯೆಯೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು ಎಂದು ಆರೋಪಿಲಾಗಿದೆ.