ಶಿವಮೊಗ್ಗ ನಗರದ ಶ್ರೀ ಕಲಾ ಕೌಶಲ್ಯಭಿವೃದ್ಧಿ ಕೇಂದ್ರ ಪತ್ರಿಕಾ ಭವನದಲ್ಲಿ ಪ್ರಗತಿಪರ ಚಿಂತಕರ ನೇತೃತ್ವದಲ್ಲಿ ಶಿವಮೊಗ್ಗ ಜಿಲ್ಲಾ ಈ ದಿನ.ಕಾಮ್ ಸಹಾಯವಾಣಿ ಬಿಡುಗಡೆ ಮಾಡಲಾಯಿತು. ಜಿಲ್ಲೆಯ ಸಾರ್ವಜನಿಕರು ವಾಟ್ಸಾಪ್ ಮಾಡುವ ಮೂಲಕ ನಿಮ್ಮ ಸಮುದಾಯದ ಸುದ್ದಿಗಳು ಹಾಗೂ ಸಾರ್ವಜನಿಕರ ಸಮಸ್ಯೆಗಳ ಸುದ್ದಿ ಫೋಟೋ ವಿಡಿಯೋವನ್ನು ಸಹಾಯವಾಣಿಗೆ ಕಳುಹಿಸುವ ಮೂಲಕ ಸ್ಥಳೀಯ ಸುದ್ದಿಗಳನ್ನು ಕಾಣಬಹುದು.
ಈ ದಿನ.ಕಾಮ್ ಶಿವಮೊಗ್ಗ ಜಿಲ್ಲಾ ಸಹಾಯವಾಣಿ ನಂಬರ್ 9035053808ಕ್ಕೆ ಮಾಹಿತಿ, ಫೋಟೋಗಳನ್ನು ವಾಟ್ಸಾಪ್ ಮಾಡುವ ಮೂಲಕ ನಿಮ್ಮ ಸಮುದಾಯದ ಸುದ್ದಿಗಳನ್ನು ಈದಿನ.ಕಾಮ್ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು. ಈ ದಿನ ಸಹಾಯವಾಣಿ ಸಾರ್ವಜನಿಕರ ಸಮಸ್ಯೆ ಸಮುದಾಯದ ಸುದ್ದಿಗಳಿಗೆ ಅನುಕೂಲಕರವಾಗಲಿದೆ. ಇದರಿಂದ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅನುಕೂಲವಾಗಲಿದೆ.
ಸಮುದಾಯದ ಸುದ್ದಿಗಳನ್ನು ವಾಟ್ಸಪ್‌ಗೆ ಕಳುಹಿಸುವ ಮೂಲಕ ಸುದ್ದಿ ತಲುಪಿಸಬಹುದು. ಹಾಗೆಯೇ ಜನಸಾಮಾನ್ಯರ ಈ ದಿನ.ಕಾಮ್ ಮಾಧ್ಯಮ ಸಹಾಯವಾಣಿ ಮೂಲಕ ಜನಸಾಮಾನ್ಯರಿಗೆ ಮತ್ತಷ್ಟು ಅನುಕೂಲಕರ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದು ಕಾರ್ಯಕ್ರಮದಲ್ಲಿದ್ದ ಗಣ್ಯರು ತಿಳಿಸಿದರು.
ನಿವೃತ್ತ ಪ್ರೊಫೆಸರ್ ರಾಚಪ್ಪ ಮಾತನಾಡಿ, “ಇಂದಿನ ದಿನಗಳಲ್ಲಿ ಅಸಮಾನತೆ ಶೋಷಿತರ ಕುರಿತಾದ ವೈರುಧ್ಯ ತುಂಬಾ ಇದೆ. ಇಂದಿನ ಮಾಧ್ಯಮಗಳು ಅದನ್ನು ಸೇತುವೆಯಾಗಿ ಕೊಂಡೊಯ್ಯುವ ಕೆಲಸ ಮಾಡುತ್ತಿಲ್ಲ. ಇದೊಂದು ಅಸಮಾಧಾನದ ಬೇಸರದ ಸಂಗತಿ. ಆದರೆ ಈ ಕೆಲಸ ಈ ದಿನ.ಕಾಮ್ ಮಾಧ್ಯಮದಿಂದ ಆಗುತ್ತಿದೆ. ಹಾಗಾಗಿ ಅದೇ ರೀತಿ ಈ ದಿನ ಸಹಾಯವಾಣಿಯನ್ನು ಸಾರ್ವಜನಿಕರು ಉಪಯೋಗ ಮಾಡಿಕೊಳ್ಳುವ ಮೂಲಕ ಜನಸಾಮಾನ್ಯರ ಮಾಧ್ಯಮವನ್ನು ಬೆಂಬಲಿಸಬೇಕು” ಎಂದು ತಿಳಿಸಿದರು.
“ಸಂವಿಧಾನದ ಪಥದಲ್ಲಿ ಇಂದಿನ ಮಾಧ್ಯಮಗಳಲ್ಲಿ ಈ ದಿನ.ಕಾಮ್ ಒಂದು ಅಪರೂಪದ ಮಾಧ್ಯಮವಾಗಿದೆ. ಈ ದಿನ ಶಿವಮೊಗ್ಗ ವರದಿಗಾರ ರಾಘವೇಂದ್ರ ಅವರು ಜಿಲ್ಲೆಯ ನೂರಾರು ಸಮಸ್ಯೆಗಳನ್ನು ಸುದ್ದಿ ಮಾಡುವ ಮೂಲಕ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಈ ದಿನ ಸುದ್ದಿ ಮಾಧ್ಯಮದ ಮುಖೇನ ಗಮನ ಸೆಳೆಯುವ ಪ್ರಯತ್ನ ಮಾಡುವುದಲ್ಲದೆ, ಪರಿಹಾರವಾಗುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದ್ದಾರೆ” ಎಂದು ಸಾಮಾಜಿಕ ಮುಖಂಡ ಮಸ್ತಾನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಶಿವಮೊಗ್ಗ ಸಾಮಾಜಿಕ ಹೋರಾಟಗಾರರಾದ ರಿಯಾಜ್ ಹಾಗೂ ಉಬೆದುಲ್ಲ ಮಾತನಾಡಿ, “ಈ ದಿನ.ಕಾಮ್ ಸುದ್ದಿ ಮಾಧ್ಯಮ ತಮ್ಮದೇ ಆದ ವಿಶಿಷ್ಟ ಹೆಜ್ಜೆ ಇಡುತ್ತಿದೆ. ಮಾಧ್ಯಮಗಳಲ್ಲಿ ಇದೊಂದು ಹೊಸ ಪ್ರಯೋಗವಾಗಿದ್ದು, ಸಂತಸದ ವಿಷಯ ಹಾಗೂ ಸಮುದಾಯದ ಸುದ್ದಿಗಳನ್ನು ಈಗಿನ ಪರಿಸ್ಥಿತಿಯಲ್ಲಿ ವಸ್ತುನಿಷ್ಠ ವರದಿ ನೀಡುವುದು ಕಷ್ಟದ ಕೆಲಸ. ಅಂತಹ ಸಮಾಜಮುಖಿ ಕೆಲಸವನ್ನು ಈ ದಿನ.ಕಾಮ್ ಮಾಡುತ್ತಿದೆ. ಜಾತಿ ಜಾತಿಗಳ ನಡುವೆ ಭಿನ್ನಾಭಿಪ್ರಾಯ, ಅಶಾಂತಿ ಉಂಟು ಮಾಡುವ ಮಾಧ್ಯಮಗಳ ನಡುವೆ ಈ ದಿನ ಸಾಮಾಜಿಕ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ. ಇದೊಂದು ವಿಭಿನ್ನ ಮಾಧ್ಯಮವಾಗಿದೆ. ಮತ್ತಷ್ಟು ಒಳ್ಳೆಯ ಕೆಲಸ ಈ ದಿನ.ಕಾಮ್‌ನಿಂದ ಮುಂದುವರಿಯಲಿ” ಎಂದು ಶುಭ ಕೋರಿದರು.
ಕಾರ್ಯಕ್ರಮದ ಅತಿಥಿ ಉಮೇಶ್ ಯಾದವ್ ನಿವೃತ್ತ ಪ್ರಾಂಶುಪಾಲರು ಮಾತನಾಡಿ, “ಈಗಿನ ಹೆಜ್ಜೆಯನ್ನು ಈದಿನ.ಕಾಮ್ ಮುಂದಕ್ಕೂ ಇದೇ ರೀತಿ ಮುಂದುವರೆಸಲಿ. ಈ ದಿನ ಸಹಾಯವಾಣಿ ಸಾರ್ವಜನಿಕರಿಗೆ ಅನುಕೂಲವಾಗಲಿ” ಎಂದು ತಿಳಿಸಿದರು.
ಕೆ ಎಲ್ ಅಶೋಕ್ ಮಾತನಾಡಿ, “ಈ ದಿನ.ಕಾಮ್ ಮಾಧ್ಯಮವನ್ನು ಯಾರೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಆ ರೀತಿಯಲ್ಲಿ ಮಾಧ್ಯಮ ಸಂಸ್ಥೆ ಮಾಡಿದ್ದಾರೆ. ಜನಪರ ಸಮಾಜದ ಕಾಳಜಿಯುಳ್ಳ ಮಾಧ್ಯಮ ಉದ್ಯಮವಾಗಿರುವ ಸಂದರ್ಭದಲ್ಲಿ ಸಂಘಟನೆಗಳ ಬೆನ್ನೆಲುಬಾಗಿ ಈ ದಿನ.ಕಾಮ್ ಮನ್ನಡೆಸುತ್ತಿದೆ. ಈ ದಿನ ಸಂಘಟನೆ ಮೂಲಕ ಕಟ್ಟಲಾಗಿದೆ. ಜನರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎರಡು ಹೆಜ್ಜೆ ಮುಂದಿಟ್ಟಿದೆ. ಈ ದಿನ.ಕಾಮ್ ಇನ್ನು ಹಲವಾರು ಕೆಲಸ ಮಾಡುವುದು ಬಾಕಿಯಿದೆ. ಈ ದಿನ.ಕಾಮ್‌ನಿಂದ ಮತ್ತಷ್ಟು ಒಳ್ಳೆಯ ಕೆಲಸಗಳಾಗಲಿ” ಎಂದು ಶುಭ ಹಾರೈಸಿದರು.
ಈ ಸುದ್ದಿ ಓದಿದ್ದೀರಾ? ಚನ್ನಪಟ್ಟಣ : ಸೋತ ಬಳಿಕ ಮತ್ತೆ ಮುಸ್ಲಿಮರ ಮೇಲೆ ಗೂಬೆ ಕೂರಿಸಿದ ನಿಖಿಲ್ ಕುಮಾರಸ್ವಾಮಿ
ಕಾರ್ಯಕ್ರಮದ ಅತಿಥಿ ಹಿರಿಯ ಪತ್ರಕರ್ತ ಆರ್ ಟಿ ನಟರಾಜ್ ಮಾತನಾಡಿ, “ಈ ದಿನ.ಕಾಮ್ ಮೊಬೈಲ್ ಹೆಲ್ಪ್ ಲೈನ್ ನಂಬರ್ ಬಿಡುಗಡೆಗೊಳಿಸಿರುವುದು ತುಂಬಾ ಉಪಯುಕ್ತ. ಇದರಿಂದ ಜನಸಾಮಾನ್ಯರು, ರೈತರು, ಕಾರ್ಮಿಕರು ವಿಶೇಷವಾಗಿ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಬರಹ ಅಥವಾ ಮೈಕ್ ಬಳಸುವ ಮೂಲಕ ಕೂಡಲೇ ಹಂಚಿಕೊಳ್ಳಬಹುದು. ಜತೆಗೆ ಸಮಸ್ಯೆಯ ಒಟ್ಟಾರೆ ಪರಿಹಾರಕ್ಕೆ ತಾವೂ ತಮ್ಮಗಳ ಕೈಜೋಡಿಸಬಹುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜನುಮಜೆ ರಾವ್, ಎಸ್ ವಿ ರಾಜಮ್ಮ, ರೇಣುಕಾ, ರಾಜೇಶ್, ಶಾಮನಾಯಕ್, ಮನೋಹರ್ ಗೌಡ, ನವುಲೇಶ್, ಅಣ್ಣಪ್ಪ, ಷಣ್ಮುಗಪ್ಪ, ಸಂಗಪ್ಪ, ಶಿವಲಿಂಗಪ್ಪ ಹಾಗೂ ಇತರ ಗಣ್ಯರು ಇದ್ದರು.