ಸರ್ಕಾರಿ ನೌಕರರ ವಲಯದಲ್ಲಿ ತೀವ್ರ ಕುತೂಹಲ ಕೆರಳಿದ್ದ ಶಿವಮೊಗ್ಗ ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ಶನಿವಾರ ನಡೆದಿದ್ದು, ಬಹುತೇಕ ಇಲಾಖೆಗಳಲ್ಲಿ ಅಚ್ಚರಿ ಫಲಿತಾಂಶ ಪ್ರಕಟವಾಗಿದೆ.
ಶಿವಮೊಗ್ಗ ಜಿಲ್ಲಾ ಘಟಕದ 30 ಮಂದಿ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ವಿಶೇಷವಾಗಿ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಕಂದಾಯ ಇಲಾಖೆಯಲ್ಲಿ ಸತ್ಯನಾರಾಯಣ ಅವರು ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ತಹಶೀಲ್ದಾರ್ ಗಿರೀಶ್ ಅವರ ವಿರುದ್ದ ಒಂದು ಮತದಿಂದ ವಿಜಯಶಾಲಿಯಾಗಿ, ನೌಕರರ ಜಿಲ್ಲಾ ಘಟಕಕ್ಕೆ ಪ್ರವೇಶಿಸಲಿದ್ದಾರೆ.
ಗಿರೀಶ್ ಬಿ(ಕೃಷಿ ಇಲಾಖೆ), ದೀಪಕ್ ಪಿ ಎಸ್(ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ), ಕಿರಣ್ ಎಚ್ (ಜಿಲ್ಲಾ ಪಂಚಾಯತ್), ಪ್ರವೀಣ್ ಕುಮಾರ್ ಜಿ(ತಾಲೂಕು ಪಂಚಾಯಿತ್), ಮಧುಸೂದನ್(ಅಬಕಾರಿ ಇಲಾಖೆ), ಕೊಟ್ರೇಶ್(ಸಮಾಜ ಕಲ್ಯಾಣ ಇಲಾಖೆ), ಅನಿತಾ ವಿ(ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ), ರಂಗನಾಥ್(ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ), ಸತ್ಯಭಾಮ ಎಸ್ ಜಿ(ಮೀನುಗಾರಿಕೆ ಇಲಾಖೆ), ರಾಜು ಲಿಂಬು ಚೌಹಣ್(ಅರಣ್ಯ ಇಲಾಖೆ), ಡಾ.ಗುಡದಪ್ಪ ಕಸಬಿ(ಆರೋಗ್ಯ ಇಲಾಖೆ), ಡಾ ಸಿ ಎ ಹಿರೇಮಠ್(ಆಯುಷ್ ಇಲಾಖೆ), ಮಹೇಶ ಪಿಎಲ್(ಇಎಸ್ ಐ), ರಮೇಶ್ ಎಸ್ ವೈ(ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ) ಗೆಲುವು ಸಾಧಿಸಿದ್ದಾರೆ.
ಮಹೇಶ್ ಕೆಎಚ್(ಗ್ರಂಥಾಲಯ ಇಲಾಖೆ), ಲಿಂಗಪ್ಪ ಮತ್ತು ಧರ್ಮಪ್ಪ(ಪ್ರೌಢಶಾಲಾ ವಿಭಾಗ), ಶಶಿಧರ್ ಡಿ ಟಿ(ಪದವಿ ಪೂರ್ವ ಶಿಕ್ಷಣ), ಧನ್ಯ ಕುಮಾರ್(ಪ್ರಥಮ ದರ್ಜೆ ಕಾಲೇಜು), ಹನುಮಂತಪ್ಪ ಜಿ(ಮಹಿಳಾ ಪಾಲಿಟೆಕ್ನಿಕ್), ಅಣ್ಣಪ್ಪ ವಿ ಬಿ(ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ), ರವಿಕಿರಣ್ ವೈ(ಗಣಿ ಮತ್ತು ಭೂ ವಿಜ್ಞಾನ ಇಲಾಖೆ), ಚನ್ನಕೇಶವ ಮೂರ್ತಿ(ಭೂಮಾಪನ ಮತ್ತು ಕಂದಾಯ ಇಲಾಖೆ), ಸುಬ್ರಮಣ್ಯ ಜಾದವ್(ಶಾಲಾ ಶಿಕ್ಷಣ ಇಲಾಖೆ), ಜತೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಸ್ಪತ್ರೆ ಮತ್ತು ಇತರ ಇಲಾಖೆಗಳು ಕ್ಷೇತ್ರದಿಂದ ವಿಜಯ್ ಅಂಟೊ ಸಗಾಯ್, ಅಶೋಕ ಟಿಜಿ ಮತ್ತು ನರಸಿಂಹ ಕೆ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅರಬೆತ್ತಲೆಗೊಳಿಸಿ ಮಹಿಳೆಗೆ ಹಲ್ಲೆ ಪ್ರಕರಣ; ಸಂತ್ರಸ್ತರ ಮನೆಗೆ ಶಾಸಕರು, ಪೋಲಿಸ್ ಆಯುಕ್ತರ ಭೇಟಿ
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯ 68 ಮಂದಿ ನಿರ್ದೇಶಕರ ಸ್ಥಾನಗಳ ಪೈಕಿ ಈಗಾಗಲೇ 38 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 30 ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದಿದೆ. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಮತದಾನಕ್ಕೆ 11 ಬೂತ್‌ಗಳನ್ನು ನಿರ್ಮಿಸಲಾಗಿತ್ತು. 25 ಇಲಾಖೆಯಲ್ಲಿ 28 ಜನ ಆಯ್ಕೆ ಆಗಬೇಕಿದ್ದು, 70 ಜನ ಸ್ಪರ್ಧಾಳುಗಳು ಕಣದಲ್ಲಿದ್ದರು. ಬೆಳಿಗ್ಗೆ 9 ಗಂಟೆಯಿಂದ ಮತದಾನ ಶುರುವಾಗಿ, ಸಂಜೆ 4 ಗಂಟೆಗೆ ಮುಕ್ತಾಯಗೊಂಡಿತು. 4-30ರಿಂದ ಮತ ಎಣಿಕೆ ಶುರುವಾಯಿತು.