ಶಿವಮೊಗ್ಗ | ಭೂಮಿಗೆ ಪೂಜೆ ಸಲ್ಲಿಸಿ ರೈತ ಕುಟುಂಬಗಳಿಂದ ಶೀಗೆ ಹುಣ್ಣಿಮೆ ಆಚರಣೆ

Date:

Advertisements

ಶಿವಮೊಗ್ಗ ಜಿಲ್ಲೆಯ ಆನಂದಪುರದ ಸುತ್ತಮುತ್ತಲಿನ ರೈತರು ಗುರುವಾರ ಹೊಲ-ಗದ್ದೆಗಳು ಮತ್ತು ತೋಟಗಳಲ್ಲಿ ಸಡಗರದಿಂದ ಹೋಗಿ ಭೂಮಿಗೆ ಪೂಜೆ ಮಾಡಿ ಚರಗ ಚೆಲ್ಲುವ ಮೂಲಕ ಶೀಗೆ ಹುಣ್ಣಿಮೆ ಆಚರಣೆ ರೈತರ ಸಂಭ್ರಮದಿಂದ ಆಚರಿಸಿದರು.

ವರ್ಷವಿಡೀ ಕಷ್ಟ ಪಟ್ಟು ಬೆಳೆದ ಫಸಲನ್ನು ಪೂಜೆ ಮಾಡಿ, ಹಸಿರು ಸೀರೆಯ ನುಡಿಸಿ ಭೂಮಿಯನ್ನು ಆರಾಧಿಸಿದರು. ಮುಂಗಾರು ಬೆಳೆಗಳಿಂದ ಮಡಿಲು ತುಂಬಿಕೊಂಡು ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಾಗಿ ಕಾಣುವಂಥ ಹೊಲಗಳಲ್ಲಿ ಫಸಲುಗಳೆಲ್ಲ ಕೊಯ್ಲಿಗೆ ಬಂದಿರುವ ಈ ಹೊತ್ತಿನಲ್ಲಿ ಭೂಮಿಗೆ ಬಾಗಿನ ಅರ್ಪಣೆ, ಉಡಿ ತುಂಬುವುದು, ಹಾಗೂ ಚರಗ ಚೆಲ್ಲಿ ಭಕ್ತಿ ಸಮರ್ಪಿಸುವುದರ ಮೂಲಕ ಮಲೆನಾಡಿನ ವಿಶಿಷ್ಠ ಸಂಪ್ರದಾಯದಂತೆ ರೈತರು ಹಬ್ಬವನ್ನು ಆಚರಿಸಿದರು.

ಮುಂಗಾರು ಮಳೆ ಮುಗಿಯುತ್ತ ಬಂದಂತೆ ಭತ್ತ, ಅಡಕೆ, ಬಾಳೆ, ಜೋಳ, ಹತ್ತಿ, ದ್ವಿದಳ ಧಾನ್ಯ ಸೇರಿ ಎಲ್ಲ ಫಸಲನ್ನೂ ಹೊತ್ತು ಭೂಮಿ ತಾಯಿ ಮೈದುಂಬಿಕೊಂಡಿರುತ್ತಾಳೆ. ಇಂತಹ ದಿನಗಳಲ್ಲಿ ರೈತರು ಈ ಹಬ್ಬವನ್ನು ಆಚರಿಸಿದರು.ರೈತರು ಕುಟುಂಬ ಸದಸ್ಯರು, ಬಂಧು-ಬಾಂಧವರು, ನೆರೆ-ಹೊರೆಯವರೊಂದಿಗೆ ಹೊಲಗಳಿಗೆ ಗದ್ದೆಗಳಿಗೆ ಹೋಗಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು.

Advertisements
image 21

ಭೂಮಿಗೆ ತವರು ಮನೆಯವರು ಮಗಳ ಸೀಮಂತ ಕಾರ್ಯ ಮಾಡುವಾಗ ಮಗಳಿಗೆ ಬಯಕೆ ತೀರಿಸಲು ವಿವಿಧ ಬಗೆಯ ಪದಾರ್ಥಗಳನ್ನು ತಯಾರಿಸಿ ನೀಡುವಂತೆ ರೈತರೂ ಭೂಮಿಗೆ ಮತ್ತು ಬೆಳೆಯನ್ನು ಪೂಜಿಸುವ ಮೂಲಕ ಸೀಮಂತ ಕಾರ್ಯ ಮಾಡಿದರು. ಹೊಸ ಫಸಲಿಗೆ ಹೊಸ ಸೀರೆ-ಕುಪ್ಪಸದಿಂದ ಅಲಂಕರಿಸಿ, ಪೂಜೆ ಮಾಡಿ ವಿವಿಧ ಖಾದ್ಯಗಳನ್ನು ನೈವೇದ್ಯ ಸಮರ್ಪಿಸಿದರು.

ನಂತರ ಹೊಲದಲ್ಲಿ ಕುಳಿತು ಮೊಸರುಬುತ್ತಿ, ಎಲೆಯ ಕೊಟ್ಟಿಯ ಕಡಬು,ಕಡಬು, ಹೋಳಿಗೆ ಸೇರಿ ವಿಧವಿಧವಾದ ಹಬ್ಬದಡಿಗೆ ಊಟ ಮಾಡಿ ರೈತರು ಸಂಭ್ರಮಿಸಿದರು.

ವರದಿ: ಅಮಿತ್. ಆರ್, ಆನಂದಪುರ

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

Download Eedina App Android / iOS

X