ವಯಸ್ಕರಂತೆ ಪುಟಾಣಿ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.
ಜಿಲ್ಲೆಯಾದ್ಯಂತ ಅಪಘಾತಗಳನ್ನು ತಡೆಗಟ್ಟುವ ಹಾಗೂ ಅಪಘಾತದಿಂದ ಚಿಕ್ಕ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಶಿವಮೊಗ್ಗ ಸಂಚಾರಿ ಪೊಲೀಸರು ಇಟ್ಟಿರುವ ಹೆಜ್ಜೆ ಮೆಚ್ಚುಗೆಗೆ ಪಾತ್ರವಾಗಿದೆ.
ಸಿಪಿಐ ಸಂತೋಷ ಕುಮಾರ್ ಡಿ ಕೆ, ಪಿಎಸ್ಐ ಭಾರತಿ ಮತ್ತು ಸಿಬ್ಬಂದಿಗಳಿಂದ ವಿನೋಬ ನಗರದ ಕ್ರಿಯೇಟಿವ್ ಕಿಡ್ಡೋಸ್ ಶಾಲೆಯ ಬಳಿ ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ ಪೋಷಕರಿಗೆ ಹೆಲ್ಮೆಟ್ ನೀಡಿ ಮಕ್ಕಳಿಗೂ ತೊಡಿಸುವಂತೆ ತಿಳಿಹೇಳಿ ಜಾಗೃತಿ ಮೂಡಿಸಿದರು.

ಪಶ್ಚಿಮ ಸಂಚಾರಿ ಠಾಣೆಯ ಪಿಎಸ್‌ಐ ತಿರುಮಲೇಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಪ್ರಕಾಶ್, ಪ್ರವೀಣ್ ಪಾಟೀಲ್, ಪ್ರಶಾಂತ್, ಹರೀಶ್, ಸುರೇಶ್ ಅವರಿದ್ದ ತಂಡವು ಎನ್‌ಟಿ ರಸ್ತೆಯಲ್ಲಿರುವ ಉರ್ದು ಶಾಲೆಯ ಮಕ್ಕಳು ಹಾಗೂ ಶಿಕ್ಷಕರಿಗೂ ಜಾಗೃತಿ ಕಾರ್ಯಕ್ರಮದ ಕುರಿತು ಮನವರಿಕೆ ಮಾಡಿದರು. ಮಕ್ಕಳಿಗೆ ಹೆಲ್ಮೆಟ್ ಹಾಗೂ ಸೇಫ್ಟಿ ಹಾರ್ನೆಸ್ ಧರಿಸುವ ಬಗ್ಗೆ ತಿಳಿಸಿಕೊಟ್ಟರು.
ಈ ಸುದ್ದಿ ಓದಿದ್ದೀರಾ?: ಶಿವಮೊಗ್ಗ | ಫೆ.22ರಿಂದ ʼಶ್ರೀಕಾಂತಣ್ಣ ಕಪ್ʼ ಕ್ರಿಕೆಟ್ ಪಂದ್ಯಾವಳಿ
9 ತಿಂಗಳ ಮೇಲ್ಪಟ್ಟು 4 ವರ್ಷದೊಳಗಿನ ಮಕ್ಕಳನ್ನು ಕರೆದೊಯ್ಯುವ ಸಂದರ್ಭದಲ್ಲಿ ಮಕ್ಕಳಿಗೆ ಹೆಲ್ಮೆಟ್ ಮತ್ತು ಸೇಫ್ಟಿ ಹಾರ್ನೆಸ್ ಅನ್ನು ಕಡ್ಡಾಯವಾಗಿ ಬಳಕೆ ಮಾಡುವಂತೆ ತಿಳಿಸಿದರು.

ನೋಡಿ ಇನ್ನೇನೆಲ್ಲ ಕಾನೂನು ತರುತ್ತೀರಾಂತ ದಂಡ ಹಾಕಲು ಒಳ್ಳೆಯ ಯೋಜನೆ, ಹೆಲ್ಮೆಟ್ ಹಾಕದೆ ಎಷ್ಟೆಲ್ಲಾ ಗಂಡು – ಹೆಣ್ಣು – ಮಕ್ಕಳು ಸತ್ತಿದ್ದಾರೆ ತಿಳಿಸಿ ರಸ್ತೆಯಲ್ಲಿರುವ ಹೋಂಡಾ ಸರಿಪಡಿಸಿ ಮತ್ತು ಸಿಟಿಲಿಮಿಟ್ ಸ್ಪೀಡ್ ಫಿಕ್ಸ್ ಮಾಡಿ ಯಾಕೆಂದರೆ ಎಲ್ಲಿ ನೋಡಿದರು ಸಿಸಿಟಿವಿ ಕ್ಯಾಮರಾಗಳು ಇದೆಯಲ್ಲ ತಪ್ಪು ಮಾಡಿದರೆ 2 ಸಲ ಮಾತ್ರ ದಂಡ ನಂತರ ವೆಹಿಕಲ್ ಅಮಾನತು (ಸಿಜ್) 6 ತಿಂಗಳು