ಶಿವಮೊಗ್ಗ ಜಿಲ್ಲಾ ವಕ್ಫ್ ಅಧಿಕಾರಿ ಹುದ್ದೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಮೆಹತಾಬ್ ಸರ್ವರ್ ಅವರ ಜಾಗಕ್ಕೆ ಸಯ್ಯದ್ ಜುನೈದ್ ಪಾಷಾರನ್ನ ನೇಮಿಸಿ ಸರ್ಕಾರ ಆದೇಶಿಸಿದೆ.
ಕಳೆದ ಕೆಲವು ದಿನಗಳಿಂದ ಜಿಲ್ಲಾ ವಕ್ಫ್ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಅವರ ಬದಲಾವಣೆಗೆ ಹಲವು ಪ್ರಯತ್ನ ನಡೆದಿತ್ತು.
ಇವರ ಸ್ಥಾನಕ್ಕೆ ಕೆಎಂಡಿಸಿ ಜಿಲ್ಲಾ ಅಧಿಕಾರಿ ಜುನೈದ್ ಪಾಷಾ ಅವರನ್ನ ತಾತ್ಕಾಲಿಕ ಜಿಲ್ಲಾ ವಕ್ಫ್ ಅಧಿಕಾರಿಯಾಗಿ ನೇಮಿಸಲಾಗಿದೆ. ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಈ ಸಂಬಂಧ ಆದೇಶ ಹೊರಡಿಸಿದ್ದು, ವಕ್ಫ್ ಬೋರ್ಡ್‌ನ ಸುಧಾರಣೆ ಹಾಗೂ ಸಾರ್ವಜನಿಕ ಸೇವೆಗಳ ಸುಗಮತೆಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಸಯ್ಯದ್ ಜುನೈದ್ ಪಾಷಾ ಮುಂದಿನ ಆದೇಶಗಳವರೆಗೆ ಈ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಶಿವಮೊಗ್ಗ | ಅಪ್ರಾಪ್ತ ಬಾಲಕ ವಾಹನ ಚಾಲನೆ; ಮಾಲಿಕರಿಗೆ ₹25,000 ದಂಡ

ಮೆಹತಾಬ್ ಸರ್ವರ್ ಅವರನ್ನು ವಜಾಗೊಳಿಸುವಂತೆ ಕಳೆದ ಕೆಲ ದಿನಗಳಿಂದ ವಕ್ಫ್ ಬೋರ್ಡ್ ಮತ್ತು ಮುಸ್ಲಿಂ ಹಾಸ್ಟೆಲ್ ಗೆ ಸಂಬಂಧಿಸಿದ ಹಲವಾರು ಮುಖಂಡರು ಹಾಗೂ ಹಾಸ್ಟೆಲ್‌ನ ಹಳೆಯ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಜಿಲ್ಲಾ ವಕ್ಫ್ ಕಚೇರಿಯಲ್ಲಿ ತಾನಾಶಾಹಿ ಆಡಳಿತ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿತ್ತು. ಪ್ರತಿಭಟನೆ ನಡೆಸಿ ಎರಡು ಮೂರು ದಿನಗಳಲ್ಲಿ ಅಧಿಕಾರಿಯ ಬದಲಾವಣೆ ಆಗಿದೆ.
