ಶಿವಮೊಗ್ಗದ ವಿದ್ಯಾನಗರ ಬಿ ಎಚ್ ರಸ್ತೆ ಮಹಾದೇವಿ ಟಾಕೀಸ್ ಎದುರು ಶನಿವಾರ ಬೆಳಿಗ್ಗೆ ರೈಲ್ವೆ ಆಟೋ ನಿಲ್ದಾಣದಲ್ಲಿ ಆಟೋ ಚಾಲಕರು 2ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಿದರು.
ದ್ವಜಾರೋಹಣ ಮಾಡುವ ಮೂಲಕ ಪ್ರಾರಂಭಮಾಡಿ ನೆರದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ಸಂಭ್ರಮದಿಂದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿದರು.
ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಮಾತನಾಡಿ, “ಇದೊಂದು ಒಳ್ಳೆಯ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳು ಮೂಡಿಬರಲಿ” ಎಂದು ಆಶಿಸಿದರು.
ಈ ಸುದ್ದಿ ಓದಿದ್ದೀರಾ? ಗದಗ | ರೈತ, ಕಾರ್ಮಿಕರ ಮಹಾಧರಣಿಗೆ ವಿದ್ಯಾರ್ಥಿಗಳ ಬೆಂಬಲ
ಆಟೋ ಚಾಲಕರ ಅಧ್ಯಕ್ಷ ವಿನಯ್ ಮಾತನಾಡಿ, “ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಲು ಉತ್ಸುಕಾರಾಗಿದ್ದೇವೆ” ಎಂದು ಹೇಳಿದರು.
ಮಹಾನಗರ ಪಾಲಿಕೆ ಸದಸ್ಯ ಯಮುನಾ ರಂಗೇಗೌಡ್ರು, ಕಾರ್ಯಕ್ರಮದ ಗೌರವಧ್ಯಕ್ಷ ರಘು ಗೌಡ್ರು, ಖಜಾಂಚಿ ಅಭಿಲಾಷ್ ಸೇರಿದಂತೆ ಇತರರು ಇದ್ದರು.