ವಿದ್ಯಾರ್ಥಿಗಳ ಪರೀಕ್ಷೆ ಆತಂಕ ನೀಗಿಸಲು ʼನಾಲೆಡ್ಜ್ ಆಫ್ ದಿ ಪವರ್ʼ ಕಾರ್ಯಕ್ರಮ ಆಯೋಜನೆ ಮಾಡಿರುವುದು ತುಂಬಾ ಒಳ್ಳೆಯದು. ಕಾರ್ಯಕ್ರಮ ತುಂಬಾ ಚೆನ್ನಾಗಿದೆ ಎಂದು ಅಮೀನ್ ಈ ಮುದಾಸಿರ್ ತಿಳಿಸಿದರು.
ಶಿವಮೊಗ್ಗ ನಗರದ ಅಂಬೇಡ್ಕರ್ ಭವನದಲ್ಲಿ ಎಸ್‌ಐಒ ವತಿಯಿಂದ ಹಮ್ಮಿಕೊಂಡಿದ್ದ ʼನಾಲೆಡ್ಜ್ ಆಫ್ ದಿ ಪವರ್ʼ ಎಂಬ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
“ಮಕ್ಕಳಲ್ಲಿ ಪರೀಕ್ಷೆಯ ಆತಂಕ ಇರತ್ತದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಕೆಲವೊಂದು ಟೆಕ್ನಿಕ್ ಅವಶ್ಯಕತೆ ಇರತ್ತದೆ. ಅದನ್ನು ತಿಳಿದುಕೊಂಡು ಮಕ್ಕಳು ಮೈಗೂಡಿಸಿಕೊಳ್ಳಬೇಕು” ಎಂದು ಅಮೀನ್ ಈ ಮುದಾಸಿರ್ ತಿಳಿಸಿದರು.
“ಮಕ್ಕಳಲ್ಲಿ ಕೆಲವು ಅಡಚಣೆಗಳಿರುತ್ತವೆ. ಮೊಬೈಲ್ ಹಾಗೂ ಕೆಲವೊಂದು ವಸ್ತುಗಳಿಂದ ಅಡಚಣೆಗಳಿರುತ್ತವೆ. ಹಾಗಾಗಿ ಅವರಲ್ಲಿ ಸೆಲ್ಫ್ ಮೋಟಿವೇಷನ್ ಆಗುವ ನಿಟ್ಟಿನಲ್ಲಿ ಮಕ್ಕಳಲ್ಲಿ ಶೈಕ್ಷಣಿಕವಾಗಿ ಬೆಳವಣಿಗೆಯಾಗುವ ನಿಟ್ಟಿನಲ್ಲಿ ಒಂದಷ್ಟು ವಿಚಾರ ಸಲಹೆಗಳನ್ನು ನೀಡಿದ್ದೇನೆ. ಅದರಿಂದ ವಿದ್ಯಾರ್ಥಿ ಜೀವನಕ್ಕೆ ಅನುಕೂಲವಾಗಲಿದೆ” ಎಂದರು.
ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಿದ್ಯಾರ್ಥಿಗಳು ಯಾವ ರೀತಿಯಾಗಿ ಭವಿಷ್ಯ ರೂಪಿಸಿಕೊಳ್ಳಬಹುದು, ಸಮಾಜದಲ್ಲಿ ಯಾವ ರೀತಿಯಾಗಿ ಬೆಳೆಯಬೇಕು ಎಂಬಿತ್ಯಾದಿ ಮಾಹಿತಿ ನೀಡಿದರು. ಜತೆಗೆ ಬರಿ ಉದ್ಯೋಗದ ಬಗ್ಗೆ ಯೋಚಿಸದೆ ಸಮಾಜದ ಕಡೆಗೂ ಯಾವ ರೀತಿಯಾಗಿ ಕೊಡುಗೆ ನೀಡಬಹುದು ಹಾಗೂ ಅಭಿವೃದ್ಧಿ ನೈತಿಕತೆ ಹೇಗೆ ಬೆಳಸಿಕೊಳ್ಳಬಹುದು, ಇದರಿಂದ ಹೇಗೆ ಉತ್ತಮ ವ್ಯಕ್ತಿಯಾಗಬಹುದು” ಎಂಬ ವಿಷಯದ ಕುರಿತು ಮನವರಿಕೆ ಮಾಡಿದರು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಿಜಾಬ್ | ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಕಲ್ಲು ಹಾಕಿದ್ದ ಪ್ರಾಂಶುಪಾಲನಿಗೆ ಕಾಂಗ್ರೆಸ್ ಸರ್ಕಾರದಿಂದ ‘ರಾಜ್ಯ ಪ್ರಶಸ್ತಿ’
ನಾಲೆಡ್ಜ್ ಆಫ್ ದಿ ಪವರ್ʼ ಎಂಬ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ ಹಲವು ಶಾಲೆಗಳಿಂದ ಆಗಮಿಸಿದ್ದ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಜಮಾತ್ ಈ ಇಸ್ಲಾಮಿಕ್ ಅಧ್ಯಕ್ಷ ಅಬ್ದುಲ್ ವಾಹಬ್, ಎಸ್‌ಐಒ ಜಿಲ್ಲಾಧ್ಯಕ್ಷ ಸಲೀಕ್, ಅತಿಫ್ ರೆಹಮಾನ್, ಉಬೆದುಲ್ಲ ಬಿ ಜಮಾತ್ ಕರಕುಲ್ ಸೇರಿದಂತೆ ಇತರರು ಇದ್ದರು.