ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ ಸಾರಿಗೆ ಬಸ್ ಗಳಿಗೆ ಮಲವಗೊಪ್ಪ ಬಳಿ ಇರುವ ಚನ್ನಬಸವೇಶ್ವರ ದೇವಸ್ಥಾನದ ಹತ್ತಿರ ಕೋರಿಕೆ ನಿಲುಗಡೆ ನೀಡುವಂತೆ ಕೋರಿದ್ದು, ಸದರಿ ಸ್ಥಳದಲ್ಲಿ ಕೋರಿಕೆ ನಿಲುಗಡೆ ನೀಡುವಂತೆ ಈಗಾಗಲೇ ಸೂಚಿಸಲಾಗಿರುತ್ತದೆ ಎಂದು KSRTC ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶಿಸಿದ್ದಾರೆ.
ಆದರೆ ಕೆಲವು ವಾಹನಗಳು ಸದರಿ ಸ್ಥಳದಲ್ಲಿ ಕೋರಿಕೆ ನಿಲುಗಡೆ ನೀಡದಿರುವ ಬಗ್ಗೆ ದೂರುಗಳು ಬರುತ್ತಿವೆ ಎಂದು ಆದೇಶ ಪ್ರತಿಯಲ್ಲಿ ಉಲ್ಲೇಖಸಿರುತ್ತಾರೆ.

ಆದುದರಿಂದ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ ಸಾರಿಗೆ ಬಸ್ ಗಳಿಗೆ ಮಲವಗೊಪ್ಪ ಬಳಿ ಇರುವ ಚನ್ನಬಸವೇಶ್ವರ ದೇವಸ್ಥಾನದ ಹತ್ತಿರ ಕಡ್ಡಾಯವಾಗಿ ಕೋರಿಕೆ ನಿಲುಗಡೆ ನೀಡಿ ಪ್ರಯಾಣಿಕರನ್ನು ಹತ್ತಿಸಿ/ಇಳಿಸಿ ಕೊಳ್ಳುವಂತೆ ಚಾಲನಾ ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡುವುದು ಎಂದು ತಿಳಿಸಿರುತ್ತಾರೆ.
ಸದರಿ ವಿಷಯದ ಬಗ್ಗೆ ಯಾವುದೇ ದೂರುಗಳು ಬಾರದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಈ ಮೂಲಕ ಆದೇಶಿಸಲಾಗಿದೆ ಎಂದು KSRTC ವಿಭಾಗೀಯ ನಿಯಂತ್ರಣಾಧಿಕಾರಿ ಶಿವಮೊಗ್ಗ ವಿಭಾಗ, ತಿಳಿಸುರುತ್ತಾರೆ.
ಈ ಮಧ್ಯೆ ನಗರ ಬೆಳದಂತೆ ಮಲವಗೋಪ್ಪ ಕೂಡ ಶಿವಮೊಗ್ಗ ಮಹಾನಗರ ಪಾಲಿಕೆಗೆ ಒಳಪಟ್ಟಿದ್ದು ಇಲ್ಲಿಂದ ಶಿವಮೊಗ್ಗ ನಗರ ಪ್ರಾರಂಭವಾಗುತ್ತಿರುವುದರಿಂದ, ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಹಾಸನ, ಧರ್ಮಸ್ಥಳ ಈ ಭಾಗದಿಂದ ತೆರಳುವುದಕ್ಕೆ, ಹಾಗೂ ನಗರಕ್ಕೆ ಬರುವುದಕ್ಕೆ ಇದೆ ಮುಖ್ಯ ರಸ್ತೆಯಾಗಿದ್ದು ಶಿವಮೊಗ್ಗ ನಗರದಿಂದ ತೆರಳುವ ಹಾಗೂ ಶಿವಮೊಗ್ಗ ನಗರಕ್ಕೆ ಬರುವ ಪ್ರಯಾಣಿಕರು ಮಲವಗೋಪ್ಪದಲ್ಲಿ ನಿಲ್ಲಿಸಬೇಕು ಇದರಿಂದ ಸಾಕಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ತಡ ರಾತ್ರಿ ವೇಳೆಯಲ್ಲಿ ಬರುವ ಪ್ರಯಾಣಿಕರಿಗೆ ನಗರದಿಂದ ಆಟೋ ಮಾಡಿಕೊಂಡ ಬರಬೇಕಾದ ಅನಿವಾರ್ಯ ಇದ್ದು ಮತ್ತು ಬೆಂಗಳೂರಿಂದ ಅಥವಾ ಮೈಸೂರು, ಚಿಕ್ಕಮಗಳೂರು, ಹಾಸನ ಕೆಲವು ಭಾಗದಿಂದ ಬರುವ ಪ್ರಯಾಣಿಕರಿಗೆ ಅದರಲ್ಲೂ ಮಹಿಳೆಯರು ಉಚಿತ ಪ್ರಯಾಣ ಮಾಡಿ ಬಂದು ಆಟೋದಲ್ಲಿ ಮಲವಗೋಪ್ಪಗೆ ಬರಲು ಕನಿಷ್ಠ 250ರೂಪಾಯಿಗು ಮೇಲ್ಪಟ್ಟು ಹಣ ನೀಡಿ ಬರುವ ಪರಿಸ್ಥಿತಿಯಿದೆ ಯಾಕಂದ್ರೆ ಮಲವಗೋಪ್ಪ KSRTC ಮುಖ್ಯ ಬಸ್ನಿ ಲ್ದಾಣದಿಂದ ಸುಮಾರ್ 10 ಕಿ.ಮೀ. ಆಗಲಿದೆ.
ರಾತ್ರಿ ವೇಳೆಯಲ್ಲಿ ಮಹಿಳೆಯರು, ವೃದ್ಧರು, ಹಾಗೂ ಕುಟುಂಬ ಸಮೇತ ಬರುವವರು ಇದ್ದಾರೆ. ಇವರುಗಳ ಸುರಕ್ಷಿತ ದೃಷ್ಟಿ ಕೂಡ ಮುಖ್ಯವಾಗತ್ತೆ ಹೀಗಾಗಿ, ಮೇಲ್ಕಂಡ ಈ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು, ಸ್ಥಿತಿಗತಿಗಳನ್ನು ಅವಲೋಕಿಸುವ ಮೂಲಕ ಮುಂದಿನ ದಿನಗಳಲ್ಲಿ KSRTC ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಯಾಣಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಮಲವಗೊಪ್ಪದಲ್ಲಿ KSRTC Express ಬಸ್ ಗಳಿಗೂ ಸಹ ನಿಲ್ಲಿಸುವಂತೆ ಆದೇಶ ಜಾರಿಗೆ ತಂದರೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಕೇಳಿಬರುತ್ತಿದೆ.