ಶಿವಮೊಗ್ಗ | ಕೆಡಬ್ಲ್ಯೂಜೆ ವಾಯ್ಸ್‌ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ನೇಮಕ

Date:

Advertisements

ನೂತನ ಪತ್ರಕರ್ತರ ಕೆಡಬ್ಲ್ಯೂಜೆ ವಾಯ್ಸ್‌ ಸಂಘದ ಶಿವಮೊಗ್ಗ ಜಿಲ್ಲಾ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಿ, ನೇಮಕ ಮಾಡಲಾಗಿದೆ. ಜಿಲ್ಲಾಧ್ಯಕ್ಷರಾಗಿ ಹಲೋ ಶಿವಮೊಗ್ಗ ದಿನಪತ್ರಿಕೆಯ ಸಂಪಾದಕರಾದ ಡಿ.ಜಿ.ನಾಗರಾಜ(ರಾಜು), ಪ್ರಧಾನ ಕಾರ್ಯದರ್ಶಿಯಾಗಿ ಆಜಾದ್ ಹಿಂದ್ ಪತ್ರಿಕೆ, F7 ನ್ಯೂಸ್‌ನ ಸಂಪಾದಕ ಡಿ.ಪಿ.ಅರವಿಂದ್ ಆಯ್ಕೆಯಾಗಿದ್ದಾರೆ.

ಉಳಿದಂತೆ ಶಿವಮೊಗ್ಗ ಜಿಲ್ಲಾ ಉಪಾಧ್ಯಕ್ಷರಾಗಿ ಸುದ್ದಿಸಾರ ದಿನಪತ್ರಿಕೆಯ ವರದಿಗಾರರಾದ ಚಿತ್ರಪ್ಪ ಯರಬಾಳ, ಕಾರ್ಯದರ್ಶಿಯಾಗಿ ಆರ್.ವಿ.ಕೃಷ್ಣ(ಸಂಪಾದಕರು, ವಿಜಯ ಸಂಘರ್ಷ ಡಿಜಿಟಲ್ ಮೀಡಿಯಾ), ಸಹ ಕಾರ್ಯದರ್ಶಿಯಾಗಿ ಶಿವರಾಜ್ ಬಿ.ಸಿ,(ಅಗ್ನಿಯುಗ ಪತ್ರಿಕೆ), ಸಂಘಟನಾ ಕಾರ್ಯದರ್ಶಿಯಾಗಿ ಅಣ್ಣಪ್ಪ ಎಂ.(ಸಿಟಿ ರೌಂಡ್ಸ್ ಪತ್ರಿಕೆ). ಖಜಾಂಜಿಯಾಗಿ ಸತೀಶ್ ಗೌಡ ಕೆ.ಎಂ,(ಸಂಪಾದಕರು, ನ್ಯೂ ಡಿಟೆಕ್ಟಿವ್‌ ಪತ್ರಿಕೆ) ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ ನೇಮಕ ಮಾಡಲಾಗಿದೆ.

WhatsApp Image 2024 10 23 at 8.33.59 PM

ಕಾರ್ಯಕಾರಿ ಸಮಿತಿಯ ನಿರ್ದೇಶಕರುಗಳಾಗಿ ಗಣೇಶ್ ಬಿ.ಎಸ್, (ಸಂಪಾದಕರು, ಕ್ರಾಂತಿಕಿಡಿ ಪತ್ರಿಕೆ), ಈ ದಿನ.ಕಾಮ್ ಶಿವಮೊಗ್ಗ ಜಿಲ್ಲಾ ವರದಿಗಾರರಾದ ಭರಧ್ವಾಜ್ ಯು.ಎಸ್, ಲಕ್ಷ್ಮಣ್ ಕುಮಾರ್ ಉದಾವತ್(ಸಂಪಾದಕರು, ನಿಮ್ಮ ವರದಿ ಪತ್ರಿಕೆ, ನಂದನ್ ಕುಮಾರ್ ಸಿಂಗ್,(ಸಂಪಾದಕರು, ಸಿಂಗ್ ಪತ್ರಿಕೆ), ಲಿಯೋ ಅರೋಜ, (ವರದಿಗಾರರು, ಹಲೋ ಶಿವಮೊಗ್ಗ ದಿನಪತ್ರಿಕೆ),ಬಿ ಎ ಸುರೇಶ್, (ಸಂಪಾದಕರು, ಮಲೆನಾಡು ಕ್ರೈಮ್ ನ್ಯೂಸ್ ಪತ್ರಿಕೆ), ಹೆಚ್.ಎಸ್.ವಿಷ್ಣುಪ್ರಸಾದ್, (ಸಂಪಾದಕರು, ಸ್ಟಾರ್ ಆಫ್ ಶಿವಮೊಗ್ಗ ಪತ್ರಿಕೆ), ವಕೀಲರಾದ ಷಡಾಕ್ಷರಪ್ಪ ಜಿ.ಆರ್ ಇವರನ್ನು ಸಂಘದ ಕಾನೂನು ಸಲಹೆಗಾರರಾಗಿ ಮತ್ತು ಮಾರ್ಗದರ್ಶಕರಾಗಿ ನೇಮಕ ಮಾಡಲಾಗಿದೆ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.

Advertisements

ಶಿವಮೊಗ್ಗದಲ್ಲಿ ಪತ್ರಕರ್ತರ ಸಂಘ ನೂತನ ಸಂಘವಾಗಿ ಕೆಡಬ್ಲ್ಯೂಜೆ ವಾಯ್ಸ್‌ (KWJVoice) ಅಸ್ತಿತ್ವಕ್ಕೆ ಬಂದಿದ್ದು, ಸದಸ್ಯತ್ವ ಪಡೆಯಲು ಅರ್ಜಿ ಅಹ್ವಾನ ಮಾಡಲಾಗಿದೆ.

ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ, ನೂತನ ಶಿವಮೊಗ್ಗ ಜಿಲ್ಲಾಘಟಕ ಕಾರ್ಯಾಲಯ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದೆ. ಸಂಘದ ಕಚೇರಿಯು ಶಿವಮೊಗ್ಗದ ದುರ್ಗಿಗುಡಿ, 3ನೇಕ್ರಾಸ್ ಭರಣಿ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿದೆ.

ಇದನ್ನು ಓದಿದ್ದೀರಾ? ಕಲಬುರಗಿ | ಜಾತಿಗಣತಿ ವರದಿ ಅನುಷ್ಠಾನಗೊಳಿಸಲು ಆಗ್ರಹಿಸಿ ದಸಂಸ ಧರಣಿ

ಶಿವಮೊಗ್ಗ ನಗರ ಮತ್ತು ಜಿಲ್ಲೆಯ ನೂರಾರು ಸಮಾನ ಮನಸ್ಕ ಪತ್ರಕರ್ತರು ಸೇರಿ ಯಾವುದೇ ತಾರಮ್ಯವಿಲ್ಲದೇ, ಭೇದಭಾವ ಇಲ್ಲದೇ, ಮಾಧ್ಯಮ ಪಟ್ಟಿ ಮತ್ತು ಮಾಧ್ಯಮ ಪಟ್ಟಿ ಹೊರತುಪಡಿಸಿದ ಎಲ್ಲ ಪತ್ರಕರ್ತರು ಹಾಗೂ ಸೋಷಿಯಲ್ ಮೀಡಿಯಾ, ಡಿಜಿಟಲ್ ಮೀಡಿಯಾ, ಬ್ಲಾಗ್, ವೆಬ್ ಸೈಟ್ ಪತ್ರಕರ್ತರು ಸೇರಿ ಕಟ್ಟಿದ ಸಂಘಟನೆ ಇದಾಗಿದೆ. ಈ ಸಂಘಟನೆಯ ಉದ್ದೇಶ ಯಾವ ಸಂಘಟನೆಯ ವಿರುದ್ದವು ಅಲ್ಲ ಎಂದು ಸಂಘಟಕರು ಸ್ಪಷ್ಟಪಡಿಸಿದ್ದಾರೆ.

ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಿಕೆ ಪತ್ರಿಕೆಯ ಪತ್ರಕರ್ತರು ನೂತನ ಪತ್ರಕರ್ತರ ಸಂಘಟನೆಯಲ್ಲಿ ಸೇರ ಬಯಸುವವರು ಸಂಘದ ಕಚೇರಿಯಲ್ಲಿ ಅರ್ಜಿ ಫಾರಂ ಪಡೆದು ಸೂಕ್ತವಾದ ದಾಖಲಾತಿಯೊಂದಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಬಹುದು.

ಇದು ಸರ್ಕಾರದಿಂದ ಮಾನ್ಯತೆ ಪಡೆದ ಸಂಘಟನೆಯಾಗಿದ್ದು, ರಾಜ್ಯಾದ್ಯಂತ ಈಗಾಗಲೇ 3500 ಸದಸ್ಯರು ಇದ್ದಾರೆ. ಸುಮಾರು ಜಿಲ್ಲೆಗಳಲ್ಲಿ ಸಂಘದ ಜಿಲ್ಲಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ.

ಶಿವಮೊಗ್ಗ ನಗರ ಮತ್ತು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿರುವ ಪತ್ರಿಕೆಯ ಸಂಪಾದಕರು ವರದಿಗಾರರು ಹಾಗೂ ಡಿಜಿಟಲ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾದ ಪತ್ರಕರ್ತರನ್ನು ಈ ಸಂಘಟನೆಗೆ ಸೇರಿಸುವ ಪ್ರಯತ್ನ ಮುಂದುವರಿಸಲಾಗಿದೆ.

ಈಗಾಗಲೇ ಸದರಿ ಸಂಘದ ಸದಸ್ಯರಾಗಲು 100ಕ್ಕೂ ಹೆಚ್ಚು ಪತ್ರಕರ್ತರು ಸದಸ್ಯತ್ವದ ಅರ್ಜಿ ಫಾರಂ ಪಡೆದಿದ್ದಾರೆ .ಅವರೆಲ್ಲರನ್ನೂ ಅರ್ಜಿಗಳನ್ನು ಪರಿಶೀಲನೆ ಮಾಡಿ, ಅನುಮೋದನೆಯಾದ ನಂತರ ಅಧಿಕೃತ ಐಡಿ ಕಾರ್ಡ್ ಸದಸ್ಯರಿಗೆ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಘಟಕದ ಕೆಡಬ್ಲ್ಯೂಜೆ ವಾಯ್ಸ್‌ ಸಂಘಟನೆಯ ಸದಸ್ಯತ್ವದ ಅರ್ಜಿಗಳು ಲಭ್ಯವಿದೆ. ಅರ್ಜಿ ಮತ್ತು ಸದಸ್ಯತ್ವದ ಶುಲ್ಕ ಸೇರಿ ರೂ.500/- ನೀಡಿ ಅರ್ಜಿ ಪಡೆದುಕೊಳ್ಳಬಹುದು.

ಅರ್ಜಿಯ ಜೊತೆಯಲ್ಲಿ ತಮ್ಮ ಪತ್ರಿಕೆಯ ಒಂದು ಪ್ರತಿ, ಒಂದು ಪಾಸ್ ಪೋರ್ಟ್ ಪೋಟೋ, ಆರ್‍‌ಎನ್‌ಐ ಸರ್ಟಿಫಿಕೇಟ್‌ನ ಜೆರಾಕ್ಸ್, ಆಧಾರ್ ಕಾರ್ಡ್ ನೀಡತಕ್ಕದ್ದು. ವರದಿಗಾರರು ಮತ್ತು ಪೋಟೋಗ್ರಾಫರ್‍‌ಗಳು ಆಗಿದ್ದಲ್ಲಿ ಸಂಪಾದಕರಿಂದ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಧೃಡಿಕರಣ ಪತ್ರ ತರಬೇಕು.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ಡಿ.ಜಿ.ನಾಗರಾಜ್ (ರಾಜು).ಮೊ.9449063043 ಮತ್ತು ಪ್ರಧಾನ ಕಾರ್ಯದರ್ಶಿಯಾದ ಅರವಿಂದ್.ಮೊ.9481090929 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

Download Eedina App Android / iOS

X