ದೇಶದ ಸಂವಿಧಾನ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾಗಿ ಈ ಬಾರಿ ಸಂವಿಧಾನಾ ವಿರೋಧಿಗಳನ್ನು ಸೋಲಿಸಬೇಕು ಎಂದು ಎದ್ದೇಳು ಕರ್ನಾಟಕ ರಾಜ್ಯ ಸಂಚಾಲಕ ಕೆ ಏಲ್ ಅಶೋಕ್ ಕರೆ ನೀಡಿದರು.
ಶಿವಮೊಗ್ಗ ನಗರದ ರಾಜ್ಯ ರೈತ ಸಂಘ ಪಾರ್ಕ್ ಎಕ್ಷಟೆನ್ಷನ್‌ನಲ್ಲಿರುವ ರಾಜ್ಯ ರೈತ ಸಂಘದ ಕಚೇರಿಯಲ್ಲಿ ಎದ್ದೇಳು ಕರ್ನಾಟಕದಿಂದ ನಡೆದ ಜಿಲ್ಲಾ ಮಟ್ಟದ ಸಂವಿಧಾನ ಸಮಾಲೋಚನಾ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
“ಸಂವಿಧಾನ, ಸಾಮಾಜಿಕ ನ್ಯಾಯ, ಸಹಬಾಳ್ವೆ ಮತ್ತು ಸ್ವಾಭಿಮಾನದ ಸಂರಕ್ಷಣೆಗಾಗಿ ಫೆಬ್ರವರಿ 11ರಂದು ನಡೆಯಲಿರುವ ಚಾಲನಾ ಸಮಾವೇಶಕ್ಕೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು” ಎಂದು ವಿನಂತಿಸಿದರು.
ಡಿಎಸ್‌ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಲೇಶಪ್ಪ ಟಿ ಎಚ್ ಮಾತನಾಡಿ, “ಜಿಲ್ಲಾ ಮಟ್ಟದ ಚಾಲನಾ ಸಮಾವೇಶಕ್ಕೆ ನಾವೆಲ್ಲರೂ ಇದಕ್ಕೆ ಕೈ ಜೋಡಿಸಿ ಸಹಕಾರ ನೀಡಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ದುಡಿಯುವ ಜನತೆಯ ಪ್ರತಿರೋಧ ಆಂದೋಲನಕ್ಕೆ ಚಾಲನೆ
ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಾತನಾಡಿ, “ಸಂವಿಧಾನ ವಿರೋಧಿ ಶಕ್ತಿಗಳನ್ನು ಈ ಬಾರಿ ದೂರವಿಡಲು ಎಲ್ಲರ ಸಹಕಾರ ಅಗತ್ಯ” ಎಂದರು.
ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕಿನ ರೈತ ಸಂಘಟನೆ ಮುಖಂಡರು, ಜಮಾತ್ ಸೇರಿದಂತೆ ಹಲವು ಸಂಘಟನೆಗಳ ಮುಖಂಡರು ತಮ್ಮ ಅಭಿಪ್ರಯಗಳನ್ನು ವ್ಯಕ್ತಪಡಿಸಿದರು.