ಶಿವಮೊಗ್ಗ ಭಾರತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಚುನಾವಣೆಯಲ್ಲಿ ಎಸ್‌ಸಿ ಅಭ್ಯರ್ಥಿಯಾಗಿ ಶಿವಕುಮಾರ್ ಸಿ ಸ್ಪರ್ಧಿಸುತ್ತಿದ್ದು, ಕ್ರಮ ಸಂಖ್ಯೆ 35ರ ʼಹೂಕೋಸುʼ ಗುರುತಿಗೆ ಮತ ನೀಡಬೇಕೆಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.
ಚುನಾವಣೆ ಕುರಿತು ಪ್ರಕಟಣೆಗೆ ತಿಳಿಸಿರುವ ಅವರು, “ಕಳೆದ 15 ವರ್ಷಗಳಿಂದ ಓಂ ಶಕ್ತಿ ಮಂಡ್ರಂ(ತಮಿಳು ಸೊಸೈಟಿ)ನ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸುತ್ತ ಬಂದಿದ್ದು, ಜನವರಿ 19ರ ಭಾನುವಾರದಂದು ನಡೆಯಲಿರುವ ಭಾರತಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಎಸ್‌ಸಿ ಮೀಸಲು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಕ್ರಮ ಸಂಖ್ಯೆ 35ರ ʼಹೂಕೋಸುʼ ಗುರುತಿಗೆ ಮತ ನೀಡಿ” ಎಂದು ಕೋರಿದರು.

ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಸಚಿವ ಜಮೀರ್ ಅಹಮದ್‌ಗೆ ಡಿಸಿಎಂ ಹುದ್ದೆ ನೀಡುವಂತೆ ಆಗ್ರಹ
“ಸೊಸೈಟಿಯ ಎಲ್ಲ ಷೇರುದಾರಲ್ಲಿ ಪ್ರೀತಿ, ವಿಶ್ವಾಸ, ಸಹಕಾರದೊಂದಿಗೆ ಅತ್ಯಧಿಕ ಮತವನ್ನು ನೀಡಿ ಸೊಸೈಟಿಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲು ಹಾಗೂ ತಮಿಳು ಸಮಾಜದ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕಾಗಿ ಷೇರುದಾರಲ್ಲಿ ಕಳಕಳಿಯಿಂದ ವಿನಂತಿಸುತ್ತೇನೆ” ಎಂದರು.