ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್ ಪರೀಶಿಲಿಸಿ, ಕೊರಚರಿಗೆ ನ್ಯಾಯ ಒದಗಿಸಲು ಸರ್ಕಾರಕ್ಕೆ ಒತ್ತಾಯ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಬನ್ನೂರು ಸುರೇಶ್, ಕರ್ನಾಟಕ ಸರ್ಕಾರವು ಆ. 19 ರಂದು ಪರಿಶಿಷ್ಟ ಜಾತಿವಾರು ಒಳಮೀಸಲಾತಿಯನ್ನು 3 ಭಾಗಗಳಾಗಿ ವಿಂಗಡಿಸಿದ್ದು, ಅದರಲ್ಲಿ ಕೊರಚ ಜನಾಂಗದವರನ್ನು 3ನೇ ಪಟ್ಟಿಯಲ್ಲಿ ಸೇರಿಸಿರುವುದು ಘನ ಘೋರವಾದ ಅನ್ಯಾಯ. ಕೊರಚರು, ಅಲೆಮಾರಿಗಳು, ಅಪರಾಧಿಕ ಬುಡ ಕಟ್ಟು ಜನಾಂಗದವರಾಗಿದ್ದು, ಈಗಲೂ ಸಹ ಅನೇಕ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದು, ರಾಜಕೀಯವಾಗಿ ಯಾವುದೇ ಜನಪ್ರತಿನಿಧಿತ್ವ ಹೊಂದಿಲ್ಲ. ಇದು ಅಸಂಘಟಿತ ಸಮಾಜವಾಗಿದ್ದು, ಕಡು ಬಡವರಾಗಿ ನಿರ್ಗತಿಕರಾಗಿ ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಧಾರ್ಮಿಕವಾಗಿಯೂ ಹಿಂದುಳಿದ ಸಮಾಜವಾಗಿದೆ. ಎಂದರು.
ಇದನ್ನು ನಾಗಮೋಹನ್ ದಾಸ್ ವರದಿಯಲ್ಲಿಯೂ ಸಹ ಏಕ ಸದಸ್ಯ ಆಯೋಗವು ಸಹ ಹೇಳಿದರು ಸಹ ಸರ್ಕಾರವು ಈ ಜನಾಂಗವನ್ನು 3ನೇ ಪಟ್ಟಿಯಲ್ಲಿ ಸೇರಿಸಿ ಸಮಾಜದ ಅಭಿದ್ಯೋಕಕ್ಕೆ ಮಾರಕ ಉಂಟು ಮಾಡಿದೆ ಎಂದರು.
ಕೊರಚಜನಾಂಗದವರನ್ನು ಎಡಗೈ ಇಲ್ಲವೇ ಬಲಗೈ ಸಂಬಂಧಿಸಿದ ಜಾತಿಯಲ್ಲಿ ಸೇರಿಸಬೇಕು.ಇಲ್ಲವಾದರೆ ಒಂದು ಲಕ್ಷಕ್ಕಿಂತಕಡಿಮೆ ಜನಸಂಖ್ಯೆ ಇರುವ ಅಲೆಮಾರಿ ಪರಿಶಿಷ್ಟ ಜಾತಿಗಳ ಗುಂಪುಗಳನ್ನು ಒಂದು ಗುಂಪು ಮಾಡಿ ಶೇ 2% ಮೀಸಲಾತಿಯನ್ನು ಕಲ್ಪಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್ ಆದೇಶವು ಸಾಮಾಜಿಕ ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಶೋಷಿತ ಸಮುದಾಯಗಳಿಗೆ ಮೀಸಲಾತಿ ನೀಡಬೇಕು. ಹೇಳಿದ್ದರೂ ಸಹ ಇದನ್ನು ಗಾಳಿಗೆತೂರಿ ಮತ ಬ್ಯಾಂಕ್‌ಗಾಗಿ ಮಾಡಿರುವ ಈ ಒಳಮೀಸಲಾತಿಯನ್ನು ಪುನರ್ ಒದಗಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.