ಶಿವಮೊಗ್ಗ | ಸವಿತಾ ಸಮಾಜದಿಂದ ಪ್ರತಿಭಾ ಪುರಸ್ಕಾರ ಜುಲೈ 22ಕ್ಕೆ

Date:

Advertisements

ಶಿವಮೊಗ್ಗ,ಜಿಲ್ಲಾ ಸವಿತಾ ಸಮಾಜ ವತಿಯಿಂದ ಜಿಲ್ಲಾ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಜುಲೈ ೨೨ರ ಮಂಗಳವಾರ ‘ಶುಭ ಮಂಗಳ ದಲ್ಲಿ ಏರ್ಪಡಿಸಲಾಗಿದೆ.ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ ನೀಡಿದ ಸಮಾಜದ ಜಿಲ್ಲಾಧ್ಯಕ್ಷ ಎಂ ಜಿ ಬಾಲು,

ಶಿವಮೊಗ್ಗ ಸವಿತಾ ಸಮಾಜದ ಬಾಂಧವರು ತಮ್ಮ ಮಕ್ಕಳ ಅಂಕಪಟ್ಟಿ,ಭಾವಚಿತ್ರ,ಆಧಾರಕಾರ್ಡು ಜೆರಾಕ್ಸ್‌ ಪ್ರತಿಯನ್ನು ನೀಡುವುದರ ಮೂಲಕ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು.

ಜಿಲ್ಲಾ ಸಮಾಜದ ಅಡಿಯಲ್ಲಿ ಸಂಘಟನೆ ದೃಷ್ಟಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷರಾಗಿ ಗಂಗಾವತಿ ಉಪಾಧ್ಯಕ್ಷರಾಗಿ ಲೀಲಾವತಿ, ಪ್ರಧಾನ ಕಾರ್ಯದರ್ಶಿಯಾಗಿ ಸುಜಾತಾ ಕಣ್ಣ, ಸದಸ್ಯರಾಗಿ ಆರ್.ನಾಗವೇಣಿ, ರುಕ್ಕಣಿಯಮ್ಮ, ಸುಶೀಲಮ್ಮ ಇವರನ್ನು ನೇಮಕ ಮಾಡಲಾಗಿದೆ ಎಂದರು.

Advertisements

ಜಿಲ್ಲಾ ಸಮಾಜದ ಅಡಿಯಲ್ಲಿ ಜಿಲ್ಲಾ ಮಟ್ಟದ ಯುವ ಘಟಕದ ಅಧ್ಯಕ್ಷರಾಗಿ ಶಿಕಾರಿಪುರ ರಾಘವೇಂದ್ರ, ಉಪಾಧ್ಯಕ್ಷರಾಗಿ ಶಿವಮೊಗ್ಗ ರಾಘವೇಂದ್ರ ಭಂಡಾರಿ, ಪ್ರಧಾನ ಕಾರ್ಯದರ್ಶಿಯಾಗಿ ಸಾಗರ ಪ್ರದೀಪ್‌ ಭ೦ಡಾರಿ, ಸಂಘಟನ ಕಾರ್ಯದರ್ಶಿಯಾಗಿ ರಿಪ್ಪನಪೇಟೆ ಸಿದ್ದಪ್ಪ ಡಿ.ಎಂ. ಭಂಡಾರಿ, ಶಿಕಾರಿಪುರ ವಿ.ಗೋಪಿ, ಭದ್ರಾವತಿ ವಿ.ಹರೀಶ್ ಇವರನ್ನು ನೇಮಕ ಮಾಡಲಾಗಿದೆ ಎಂದರು.

ಜಿಲ್ಲೆಯ ಸವಿತಾ ಸಮಾಜದ ಬಾಂಧವರು ಕೆಲವರ ಹೇಳಿಕೆಗೆ ವಿಚಲಿತರಾಗಬಾರದು. ನೋಂದಾಯಿತ ಜಿಲ್ಲಾ ಸವಿತಾ ಸಮಾಜಕ್ಕೆ ಅಧಿಕೃತವಾಗಿ ಎಂ ಜಿ ಬಾಲು ಅಧ್ಯಕ್ಷರಾಗಿರುವರು. ಜಿಲ್ಲಾ ಸವಿತಾ ಸಮಾಜದ ಹೆಸರನ್ನು ಹೇಳಿಕೊಂಡು ನಾನೇ ಅಧ್ಯಕ್ಷರೆಂದು ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ. ಸಂಘಟನೆ ಹಿತದೃಷ್ಟಿಯಲ್ಲಿ ಯಾವುದೇ ವ್ಯವಹಾರಗಳಲ್ಲಿ ದೇಣಿಗೆ ನೀಡುವುದಾಗಲೀ, ಸಂಘಟಿತ ವಿಚಾರವಾಗಲೀ, ಅವರ ಮಾಡಿದ ಕೆಲಸಗಳಿಗೆ ಈ ನೋಂದಾಯಿತ ಶಿವಮೊಗ್ಗ ಜಿಲ್ಲಾ ಸವಿತಾ ಜೆ.ಸಿ.ನಗರ, ಮಾರಮಿ ಭೈಲು, ಇವರಿಗೆ ಸಂಬಂಧಿಸುವುದಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರ.ಕಾರ್ಯದರ್ಶಿ ಎನ್ ಎಸ್ ರಮೇಶ್, ರಾಘವೇಂದ್ರ,ರಾಜಣ್ಣ, ದೀಪಾ, ಲೀಲಾವತಿ ಮೊದಲಾದವರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X