ಶಿವಮೊಗ್ಗದ ಸಂಚಾರ ವೃತ್ತ ಕಛೇರಿಯಲ್ಲಿ ದಿನಾಂಕ 24 ಜೂನ್ 2025 ರ ನೆನ್ನೆ ದಿವಸ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಶಾಲಾ ಮಕ್ಕಳ ಸುರಕ್ಷತೆ ಮತ್ತು ಸುಗಮ ಸಂಚಾರ ವ್ಯವಸ್ಥೆಯ ಕುರಿತು ಶಿವಮೊಗ್ಗ ನಗರದ ಬಸ್ ವ್ಯವಸ್ಥೆ ಹೊಂದಿರುವ ಶಾಲಾ ಆಡಳಿತ ಮಂಡಳಿಯ ಮುಖ್ಯಸ್ಥರ ಸಭೆಯನ್ನು ನಡೆಸಲಾಗಿದೆ.
ಡಿವೈಎಸ್ಪಿ ಸಂಜೀವ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ತರ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ಶಾಲಾ ವಾಹನಗಳಿಗೆ ಸಂಬಂಧಿಸಿದಂತೆ ಇರುವ ಸುಪ್ರೀಂಕೋರ್ಟ್ ಗೈಡ್ ಲೈನ್ಸ್ ಗಳನ್ನು ಪಾಲನೆ ಮಾಡಬೇಕು ಎಂದು ತಿಳಿಸಿದ್ದಾರೆ. ಶಾಲಾ ವಾಹನಕ್ಕೆ ಕಡ್ಡಾಯವಾಗಿ ಸ್ವೀಡ್ ಗರ್ವನರ್ ಅಳವಡಿಸಬೇಕು. ಶಾಲಾ ವಾಹನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಚಾಲ್ತಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದರು.
ಶಾಲಾ ವಾಹನದ ನಿಗಧಿತ ಮಿತಿಗಿಂತ ಹೆಚ್ಚಿನ ಮಕ್ಕಳನ್ನು ಕೆರೆದುಕೊಂಡು ಹೋಗದಂತೆ ಸಭೆಯನ್ನ ತೀರ್ಮಾನಿಸಲಾಯಿತು. ಶಾಲಾ ವಾಹನಗಳಿಗೆ ಕನಿಷ್ಠ 4 ವರ್ಷದ ಅನುಭವವುಳ್ಳ ಚಾಲನಾ ಪರವಾನಿಗೆ ಹೊಂದಿರುವ ಚಾಲಕರನ್ನು ನೇಮಕಮಾಡಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.

ಶಾಲಾ ಆಡಳಿತ ಮುಖ್ಯಸ್ಥರು ಮತ್ತು ಸಂಚಾರ ಪೊಲೀಸರವರುಗಳನ್ನ ಒಳಗೊಂಡ ಒಂದು ವಾಟಪ್ಸ್ ಗ್ರೂಪ್ ರಚನೆ ಮಾಡುವ ಬಗ್ಗೆ ಮತ್ತು ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವುದರ ಬಗ್ಗೆ ತಿಳಿಸಲಾಯಿತು.
ಈ ಒಂದು ಸಭೆಯಲ್ಲಿ, ದೇವರಾಜ್, ಸಿಪಿಐ ಶಿವಮೊಗ್ಗ ಸಂಚಾರ ವೃತ್ತ, ತಿರುಮಲೇಶ್ ಪಿಎಸ್ಐ ಪಶ್ಚಿಮ ಸಂಚಾರ ಪೊಲೀಸ್ ಠಾಣೆ , ನವೀನ್ ಕುಮಾರ್ ಮಠಪತಿ ಪಿಎಸ್ಐ ಮತ್ತು ಶಿವಣ್ಣನವರ್ ಪಿಎಸ್ಐ ಪೂರ್ವ ಸಂಚಾರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಉಪಸ್ಥತರಿದ್ದರು.