ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರದ ಆದೇಶದಂತೆ 2025-26ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾಡಲು ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ. ಅಂತೆಯೇ ಪೊಲೀಸ್ ಠಾಣೆಗಳಲ್ಲಿ ತಮ್ಮ ಕನಿಷ್ಠ ಸೇವಾವಧಿಯನ್ನು ಪೂರೈಸಿರುವ ಅಧಿಕಾರಿ/ಸಿಬ್ಬಂದಿಗಳ ವರ್ಗಾವಣೆಗಳ ಪ್ರಸ್ತಾವನೆಯನ್ನು ಸಂಬಂಧಪಟ್ಟ ಇಲಾಖಾ ಸಚಿವರ ಮುಖಾಂತರ ಅನುಮೋದಿಸಲು ಅನುಮತಿ ನೀಡಿ ಆದೇಶಿಸಲಾಗಿರುತ್ತದೆ.
ಅದರಂತೆ, ಶಿವಮೊಗ್ಗ ಜಿಲ್ಲಾ ಪೊಲೀಸ್ ಘಟಕದ ವಿವಿದ್ದ ಪೊಲೀಸ್ ಠಾಣೆಗಳಲ್ಲಿ 5 ವರ್ಷ ಮೇಲ್ಪಟ್ಟು ಸೇವೆಯನ್ನು ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಎಎಸ್‌ಐ/ಮಎಎಸ್‌ಐ, ಸಿಹೆಚ್‌ಸಿ/ಮಹೆಚ್‌ಸಿ ಹಾಗೂ ಸಿಪಿಸಿ/ಮಪಿಸಿ ವೃಂದದ ಸಿಬ್ಬಂದಿ ವರ್ಗದವರುಗಳನ್ನು
ದಿನಂಕ:20.ಜೂನ್.2025ರಂದು ಡಿ.ಎ.ಆರ್ ಪೊಲೀಸ್ ಸಭಾಂಗಣ, ಶಿವಮೊಗ್ಗ ಇಲ್ಲಿ ಕೌನ್ಸಲಿಂಗ್ ಮುಖಾಂತರ ಅವರುಗಳು ಒಪ್ಪಿರುವಂತೆ ಅವರ ಹೆಸರಿನ ಮುಂದೆ ಕಾಲಂ:05ರಲ್ಲಿ ನಮೂದಿಸಿರುವ ಪೊಲೀಸ್ ಠಾಣೆ/ಸ್ಥಳಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.



ಅಂತೆಯೇ ಈ ಕೆಳಕಂಡ ಎಎಸ್‌ಐ/ಐಎಎಸ್‌ಐ, ಸಿಹೆಚ್ಸಿ/ಮಹೆಚ್ಸಿ ಮತ್ತು ಸಿಪಿಸಿ/ಮಪಿಸಿ ರವರನ್ನು ಅವರ ಹೆಸರಿನ ಮುಂದೆ ಕಾಲಂ-(4) ರಲ್ಲಿ ನಮೂದಿಸಿರುವ ಸ್ಥಳಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಪರಸ್ಪರ/ಕೋರಿಕೆ ಹಾಗೂ ವೈದ್ಯಕೀಯ ಕಾರಣಗಳ ಮೇರೆಗೆ ವರ್ಗಾವಣೆಗೊಳಿಸಿ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.



ಮೇಲ್ಕಂಡ ಅಧಿಕಾರಿ / ಸಿಬ್ಬಂದಿಯವರುಗಳು ಸೇರುವಿಕೆ ಕಾಲ / ಯಾವುದೇ ಭತ್ಯೆಗೆ ಅರ್ಹರಿರುವುದಿಲ್ಲ.ಆದ್ದರಿಂದ, ಸಂಬಂಧಪಟ್ಟ ಠಾಣಾಧಿಕಾರಿಗಳು ಮೇಲ್ಕಂಡ ಅಧಿಕಾರಿ / ಸಿಬ್ಬಂದಿರವರುಗಳನ್ನು ತಕ್ಷಣವೇ ಠಾಣಾ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಸ್ಥಳ ನಿಯುಕ್ತಿಗೊಳಿಸಿರುವ ಠಾಣೆಗೆ ಕೂಡಲೇ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿ ಕಳುಹಿಸುವುದು, ಈ ಕುರಿತು ಮೇಲ್ಕಂಡ ಅಧಿಕಾರಿ/ಸಿಬ್ಬಂದಿಯವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ ಮತ್ತು ಸ್ಥಳ ನಿಯುಕ್ತಿಗೊಳಿಸಿದ ಠಾಣೆಯ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಬಗ್ಗೆ ಪಾಲನಾ ವರದಿಯನ್ನು ತಪ್ಪದೇ ಸಲ್ಲಿಸಬೇಕಾಗಿ ತಿಳಿಸಿರುತ್ತಾರೆ.ಮಿಥುನ್ ಕುಮಾರ್ ಜಿ ಕೆ. ಭಾ.ಪೊ.ಸೇ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ
ಹಾಗೂ ಎಲ್ಲಾ ಎಎಸ್‌ಐ/ಐಎಎಸ್‌ಐ, ಸಿಹೆಚ್ಸಿ/ಮಹೆಚ್ಸಿ ಮತ್ತು ಸಿಪಿಸಿ/ಮಪಿಸಿ ರವರುಗಳನ್ನು ದಿ:05.07.2025 ರೊಳಗಾಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಠಾಣಾ ಕರ್ತವ್ಯದಿಂದ ಕಡ್ಡಾಯವಾಗಿ ಬಿಡುಗಡೆಗೊಳಿಸುವಂತೆ ಸಂಬಂಧಪಟ್ಟ ಠಾಣಾಧಿಕಾರಿರವರುಗಳಿಗೆ ಸೂಚಿಸಿಲಾಗಿದೆ.
ಅಂತೆಯೇ ಸದರಿ ಮೇಲ್ಕಂಡ ಎಲ್ಲಾ ಸಿಬ್ಬಂದಿರವರುಗಳು ಠಾಣಾ ಕರ್ತವ್ಯದಿಂದ ಬಿಡುಗಡೆ ಹೊಂದಿದ ಕೂಡಲೇ ಸ್ಥಳ ನಿಯುಕ್ತಿಗೊಳಿಸಿ ವರ್ಗಾವಣೆಗೊಳಿಸಿದ ಠಾಣೆಗಳ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇದ್ದಲ್ಲಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿಲಾಗಿದೆ.
ಈ ಕುರಿತು ಮೇಲ್ಕಂಡ ಸಿಬ್ಬಂದಿಗಳು ಠಾಣಾ ಕರ್ತವ್ಯದಿಂದ ಬಿಡುಗಡೆ ಹೊಂದಿದ ಮತ್ತು ಸ್ಥಳ ನಿಯುಕ್ತಿಗೊಳಿಸಿದ ಠಾಣೆಗೆ ವರದಿ ಮಾಡಿಕೊಂಡ ಕುರಿತು ಪಾಲನ ವರದಿಯನ್ನು. ಕಳುಹಿಸುವಂತೆ ಸೂಚಿಸಲಾಗಿದೆ
