ಶಿವಮೊಗ್ಗ | ಜಿಲ್ಲೆಯಲ್ಲಿ ಕನಿಷ್ಠ ಸೇವಾವಧಿಯನ್ನು ಪೂರೈಸಿರುವ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳ ವರ್ಗಾವಣೆ, ಯಾರು ಯಾರು ಎಲ್ಲಿಗೆ;ಸಂಪೂರ್ಣ ಮಾಹಿತಿ

Date:

ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರದ ಆದೇಶದಂತೆ 2025-26ನೇ ಸಾಲಿನ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮಾಡಲು ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ. ಅಂತೆಯೇ ಪೊಲೀಸ್ ಠಾಣೆಗಳಲ್ಲಿ ತಮ್ಮ ಕನಿಷ್ಠ ಸೇವಾವಧಿಯನ್ನು ಪೂರೈಸಿರುವ ಅಧಿಕಾರಿ/ಸಿಬ್ಬಂದಿಗಳ ವರ್ಗಾವಣೆಗಳ ಪ್ರಸ್ತಾವನೆಯನ್ನು ಸಂಬಂಧಪಟ್ಟ ಇಲಾಖಾ ಸಚಿವರ ಮುಖಾಂತರ ಅನುಮೋದಿಸಲು ಅನುಮತಿ ನೀಡಿ ಆದೇಶಿಸಲಾಗಿರುತ್ತದೆ.

- Advertisement -

ಅದರಂತೆ, ಶಿವಮೊಗ್ಗ ಜಿಲ್ಲಾ ಪೊಲೀಸ್ ಘಟಕದ ವಿವಿದ್ದ ಪೊಲೀಸ್ ಠಾಣೆಗಳಲ್ಲಿ 5 ವರ್ಷ ಮೇಲ್ಪಟ್ಟು ಸೇವೆಯನ್ನು ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಎಎಸ್‌ಐ/ಮಎಎಸ್‌ಐ, ಸಿಹೆಚ್‌ಸಿ/ಮಹೆಚ್‌ಸಿ ಹಾಗೂ ಸಿಪಿಸಿ/ಮಪಿಸಿ ವೃಂದದ ಸಿಬ್ಬಂದಿ ವರ್ಗದವರುಗಳನ್ನು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ದಿನಂಕ:20.ಜೂನ್.2025ರಂದು ಡಿ.ಎ.ಆರ್ ಪೊಲೀಸ್ ಸಭಾಂಗಣ, ಶಿವಮೊಗ್ಗ ಇಲ್ಲಿ ಕೌನ್ಸಲಿಂಗ್ ಮುಖಾಂತರ ಅವರುಗಳು ಒಪ್ಪಿರುವಂತೆ ಅವರ ಹೆಸರಿನ ಮುಂದೆ ಕಾಲಂ:05ರಲ್ಲಿ ನಮೂದಿಸಿರುವ ಪೊಲೀಸ್ ಠಾಣೆ/ಸ್ಥಳಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

1001779504
IMG 20250620 WA00351
1001779603

ಅಂತೆಯೇ ಈ ಕೆಳಕಂಡ ಎಎಸ್‌ಐ/ಐಎಎಸ್‌ಐ, ಸಿಹೆಚ್ಸಿ/ಮಹೆಚ್ಸಿ ಮತ್ತು ಸಿಪಿಸಿ/ಮಪಿಸಿ ರವರನ್ನು ಅವರ ಹೆಸರಿನ ಮುಂದೆ ಕಾಲಂ-(4) ರಲ್ಲಿ ನಮೂದಿಸಿರುವ ಸ್ಥಳಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಪರಸ್ಪರ/ಕೋರಿಕೆ ಹಾಗೂ ವೈದ್ಯಕೀಯ ಕಾರಣಗಳ ಮೇರೆಗೆ ವರ್ಗಾವಣೆಗೊಳಿಸಿ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.

1001779632
1001779633
1001779634

ಮೇಲ್ಕಂಡ ಅಧಿಕಾರಿ / ಸಿಬ್ಬಂದಿಯವರುಗಳು ಸೇರುವಿಕೆ ಕಾಲ / ಯಾವುದೇ ಭತ್ಯೆಗೆ ಅರ್ಹರಿರುವುದಿಲ್ಲ.ಆದ್ದರಿಂದ, ಸಂಬಂಧಪಟ್ಟ ಠಾಣಾಧಿಕಾರಿಗಳು ಮೇಲ್ಕಂಡ ಅಧಿಕಾರಿ / ಸಿಬ್ಬಂದಿರವರುಗಳನ್ನು ತಕ್ಷಣವೇ ಠಾಣಾ ಕರ್ತವ್ಯದಿಂದ ಬಿಡುಗಡೆಗೊಳಿಸಿ, ಸ್ಥಳ ನಿಯುಕ್ತಿಗೊಳಿಸಿರುವ ಠಾಣೆಗೆ ಕೂಡಲೇ ವರದಿ ಮಾಡಿಕೊಳ್ಳುವಂತೆ ಸೂಚನೆ ನೀಡಿ ಕಳುಹಿಸುವುದು, ಈ ಕುರಿತು ಮೇಲ್ಕಂಡ ಅಧಿಕಾರಿ/ಸಿಬ್ಬಂದಿಯವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿದ ಮತ್ತು ಸ್ಥಳ ನಿಯುಕ್ತಿಗೊಳಿಸಿದ ಠಾಣೆಯ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಬಗ್ಗೆ ಪಾಲನಾ ವರದಿಯನ್ನು ತಪ್ಪದೇ ಸಲ್ಲಿಸಬೇಕಾಗಿ ತಿಳಿಸಿರುತ್ತಾರೆ.ಮಿಥುನ್ ಕುಮಾರ್ ಜಿ ಕೆ. ಭಾ.ಪೊ.ಸೇ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ

ಹಾಗೂ ಎಲ್ಲಾ ಎಎಸ್‌ಐ/ಐಎಎಸ್‌ಐ, ಸಿಹೆಚ್ಸಿ/ಮಹೆಚ್‌ಸಿ ಮತ್ತು ಸಿಪಿಸಿ/ಮಪಿಸಿ ರವರುಗಳನ್ನು ದಿ:05.07.2025 ರೊಳಗಾಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಠಾಣಾ ಕರ್ತವ್ಯದಿಂದ ಕಡ್ಡಾಯವಾಗಿ ಬಿಡುಗಡೆಗೊಳಿಸುವಂತೆ ಸಂಬಂಧಪಟ್ಟ ಠಾಣಾಧಿಕಾರಿರವರುಗಳಿಗೆ ಸೂಚಿಸಿಲಾಗಿದೆ.

ಅಂತೆಯೇ ಸದರಿ ಮೇಲ್ಕಂಡ ಎಲ್ಲಾ ಸಿಬ್ಬಂದಿರವರುಗಳು ಠಾಣಾ ಕರ್ತವ್ಯದಿಂದ ಬಿಡುಗಡೆ ಹೊಂದಿದ ಕೂಡಲೇ ಸ್ಥಳ ನಿಯುಕ್ತಿಗೊಳಿಸಿ ವರ್ಗಾವಣೆಗೊಳಿಸಿದ ಠಾಣೆಗಳ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇದ್ದಲ್ಲಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿಲಾಗಿದೆ.

ಈ ಕುರಿತು ಮೇಲ್ಕಂಡ ಸಿಬ್ಬಂದಿಗಳು ಠಾಣಾ ಕರ್ತವ್ಯದಿಂದ ಬಿಡುಗಡೆ ಹೊಂದಿದ ಮತ್ತು ಸ್ಥಳ ನಿಯುಕ್ತಿಗೊಳಿಸಿದ ಠಾಣೆಗೆ ವರದಿ ಮಾಡಿಕೊಂಡ ಕುರಿತು ಪಾಲನ ವರದಿಯನ್ನು. ಕಳುಹಿಸುವಂತೆ ಸೂಚಿಸಲಾಗಿದೆ

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಟ್ಕಳ | ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ ಬಸ್ ಕಳವು

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿದ್ದ ಮಿನಿ...

ಯಲ್ಲಾಪುರ | ಉಡ ಬೇಟೆ ಆರೋಪ: ತಂದೆ-ಮಗ ಬಂಧನ

ಅಕ್ರಮವಾಗಿ ವನ್ಯಪ್ರಾಣಿಗಳನ್ನು ಬೇಟೆಯಾಡಿ, ಅದರ ಮಾಂಸವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ ಆರೋಪದ ಮೇಲೆ...

ಉಡುಪಿ | ಡಾ.ಮೆಹೆವಿಶ್ ಮುಶೀರ್ ಶೇಖ್‌ಗೆ ಪಿಎಚ್‌ಡಿ ಪದವಿ

ಡಾ. ಮಮತಾ ಬಾಲಚಂದ್ರ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ನರೇಂದ್ರ ವಿ.ಜಿ....