ಶಿವಮೊಗ್ಗ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ದೈಹಿಕ ಶಿಕ್ಷಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 14 ಮತ್ತು 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆ ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆ ಪ್ರಕ್ರಿಯೆಯಲ್ಲಿ ಶಿವಮೊಗ್ಗ ಜಿಲ್ಲಾ ಶೋಟೊಕಾನ್ ಕರಾಟೆ ಇಂಟರ್ನ್ಯಾಷನಲ್ ಫೆಡರೇಷನ್‌ನ ಕರಾಟೆ ಪಟುಗಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದರು. ಚಿನ್ನದ ಪದಕದೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ವಿವರ ಹೀಗಿದೆ : 14 ವರ್ಷದೊಳಗಿನ ಬಾಲಕಿಯರ 50 ಕೆ.ಜಿ ವಿಭಾಗದಲ್ಲಿ ಅಮೂಲ್ಯ. ವಿ. ರಾವ್ ಚಿನ್ನದ ಪದಕ ಪಡೆದಿದ್ದಾರೆ.
17 ವರ್ಷದೊಳಗಿನ ಬಾಲಕಿಯರ 50 ಕೆ.ಜಿ ವಿಭಾಗದಲ್ಲಿ ತೇಜಲ್, ಜಿ. ಉದಾವತ್, ಚಿನ್ನದ ಪದಕ, ಅಪೂವಾ ವಿ. ರಾವ್ 56 ಕೆ.ಜಿ ವಿಭಾಗ ದಲ್ಲಿ ಚಿನ್ನದ ಪದಕ ಪಡೆದರು.
ಈ ಕರಾಟೆ ಪಟುಗಳಿಗೆ ಜಿಲ್ಲಾ ಶೋಟೊ ಕಾನ್ ಕರಾಟೆ ಇಂಟರ್ನ್ಯಾಷನಲ್ ಫೆಡರೇಷನ್ ಮುಖ್ಯಸ್ಥ ಬಿ ಆರ್. ಸುರೇಂದ್ರ ಶಾಸ್ತ್ರೀ, ಜಿಲ್ಲಾ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಮತ್ತು ತರಬೇತು ದಾರ ಚಂದ್ರ ಕಾಂತ್ ಜಿ, ಅಸೋಸಿಯೇಷನ್ ತರಬೇತುದಾರ ಸಂಪತ್ ಬಿ.ಎಸ್ ಅಭಿನಂದಿಸಿದ್ದಾರೆ..






